ಶ್ರಾವಣ ಮಾಸದಲ್ಲಿ ಸರಳ ಶಿವ ಪೂಜೆ ಮಾಡುವುದೇ ಹೇಗೆ? – ಸರಳ ಮಂತ್ರಗಳು ಯಾವುವು?

ಶ್ರಾವಣ ಮಾಸದಲ್ಲಿ ಸರಳ ಶಿವ ಪೂಜೆ ಮಾಡುವುದೇ ಹೇಗೆ? – ಸರಳ ಮಂತ್ರಗಳು ಯಾವುವು?

ಕಣ್ಣುಗಳಿಂದ ಮುಕ್ಕಣ್ಣನೆಂದು ಗುರುತಿಸಿಕೊಂಡ ಶಿವನನ್ನು ಶ್ರಾವಣ ಮಾಸದಲ್ಲಿ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಶಿವನನ್ನ  ದೇವರ ದೇವರು ಎಂದೂ ಕರೆಯಲಾಗುತ್ತದೆ. ನೈಜವಾದ ಮನಸ್ಸಿನಿಂದ ಶಿವನನ್ನು ಸ್ಮರಿಸಿದರೆ ಶಿವನು ಬಹುಬೇಗ ಸಂತೋಷವಾಗುತ್ತಾನೆ ಎಂದು ನಂಬಲಾಗಿದೆ.  ಹಾಗಿದ್ರೆ ಜೀವನನ್ನ ಹೇಗೆ ಪೂಜಿಸಬೇಕು ಅನ್ನೋದ್ದನ್ನ ನೋಡೋಣ.

‘ಓಂ ನಮಃ ಶಿವಾಯ:’ ಇದು ಪಂಚತತ್ವ ಮಂತ್ರವಾಗಿದೆ. ಇದನ್ನು ಶಿವ ಪಂಚಾಕ್ಷರಿ ಮಂತ್ರ ಎಂದು ಕರೆಯಲಾಗುತ್ತದೆ. ಈ ಪಂಚಾಕ್ಷರಿ ಮಂತ್ರವನ್ನು ಜಪಿಸುವುದರಿಂದ ಮಾತ್ರ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪೂರ್ಣ ಸಾಧನೆಯನ್ನು ಮಾಡಬಹುದು. ಶಿವನನ್ನು ನಿರಂತರವಾಗಿ ಜಪಿಸುವಾಗ ಈ ಮಂತ್ರವನ್ನು ಪಠಿಸಿ.

ಇದನ್ನೂ ಓದಿ:  ಶನಿ ದೋಷ ಮತ್ತು ಸಾಡೇಸಾತಿಯಿಂದ ಮುಕ್ತಿ ಬೇಕಾ- ಶನಿವಾರ ಮಾಡಿ ಈ ಕೆಲಸಗಳನ್ನ

ವ್ರತವನ್ನು ಮಾಡುವ ವ್ಯಕ್ತಿಯು ದಿನವಿಡೀ ಶಿವ ಮಂತ್ರ ‘ಓಂ ನಮಃ ಶಿವಾಯ’ ಎಂದು ಜಪಿಸಬೇಕು. ಇದರಿಂದ ನಿಮಗೆ ಯಾವ ಹಾನಿಯೂ ಆಗುವುದಿಲ್ಲ. ರೋಗಿ, ಅಂಗವಿಕಲರು ಮತ್ತು ವೃದ್ಧರು ಶಿವನನ್ನು ರಾತ್ರಿಯ ವೇಳೆ ಪೂಜಿಸಬಹುದು.

ಶಿವಪುರಾಣದಲ್ಲಿರುವ ನಿಯಮಗಳ ಪ್ರಕಾರ, ನಾವು ರಾತ್ರಿ 4 ಗಂಟೆಗಳ ಕಾಲ ಶಿವ ಪೂಜೆಯನ್ನು ಮಾಡಬೇಕು. ಶಿವಪುರಾಣ ಪಠಣವನ್ನು ಈ ದಿನ ಕೇಳಬೇಕು ಎಂದು ನಂಬಲಾಗಿದೆ. ರಾತ್ರಿಯಲ್ಲಿ ಎಚ್ಚರಗೊಳ್ಳುವುದು ಮತ್ತು ಶಿವ ಪುರಾಣವನ್ನು ಪಠಿಸುವುದು, ಕೇಳುವುದು ಪ್ರತಿ ಉಪವಾಸದ ಧರ್ಮವೆಂದು ಪರಿಗಣಿಸಲಾಗುತ್ತದೆ.

ಮಹಾಶಿವರಾತ್ರಿ ಉಪವಾಸವನ್ನು ಆಚರಿಸುವ ಮೂಲಕ, ಕಾರ್ತಿಕ ಮಾಸದಲ್ಲಿ, ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವ ಮೂಲಕ ಶಿವನು ಬಹು ಬೇಗ ನಿಮ್ಮ ಮೇಲೆ ಸಂತಸಗೊಳ್ಳುತ್ತಾನೆ. ಅಭಿಷೇಕವನ್ನು, ಧೂಪದ್ರವ್ಯ, ಹೂಗಳು ಮತ್ತು ಹಣ್ಣುಗಳನ್ನು ನೀಡಿ ಶಿವನನ್ನು ಆರಾಧಿಸಬೇಕು.

Kishor KV

Leave a Reply

Your email address will not be published. Required fields are marked *