ಭುವಿ & ಜೋಶ್ ಗೆ ಬೇಕು ಬ್ಯಾಕಪ್ – ಇಂಜುರಿಯಾದ್ರೆ ಬೆಂಚ್ ಸ್ಟ್ರಾಂಗ್ ಇಲ್ವಾ?
RCB ಹ್ಯಾಟ್ರಿಕ್ ಗೆ 10 ಸವಾಲು!

ಸತತ 18 ವರ್ಷಗಳ ಕಾಲ ಒಂದೇ ಒಂದು ಐಪಿಎಲ್ ಟ್ರೋಫಿಗಾಗಿ ಹಪಹಪಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಹ್ಯಾಟ್ರಿಕ್ ಚಾಂಪಿಯನ್ಸ್ನ ಕ್ಯೂನಲ್ಲಿದೆ. 2025ರಲ್ಲಿ ಚೊಚ್ಚಲ ಕಪ್ ಗೆದ್ದ ಬೆಂಗಳೂರು ಬಾಯ್ಸ್ 2026ರಲ್ಲೂ ಯಶಸ್ವಿಯಾಗಿ ಡಿಫೆನ್ಸ್ ಮಾಡಿಕೊಂಡ್ರು. ಈಗ ಮೂರನೇ ಬಾರಿ ಗೆಲುವಿನ ಕಿರೀಟ ತೊಟ್ಟು ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಿರದ ಸಾಧನೆ ಮಾಡೋಕೆ ಪಣ ತೊಟ್ಟಿದ್ದಾರೆ.
ಇದನ್ನೂ ಓದಿ : ಗಂಭೀರ್-ಗಿಲ್ BIG ಮಿಸ್ಟೇಕ್! 2 ಪಂದ್ಯ 420 ರನ್ಸ್, ಸೋನಲ್ ಚರಿತ್ರೆ
2025ರಲ್ಲಿ ಪಂಜಾಬ್ ವಿರುದ್ಧ ಗೆದ್ದು ಫಾರ್ ದಿ ಫಸ್ಟ್ ಟೈಂ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದ್ದ ಬೆಂಗಳೂರು ತಂಡ 2026ರಲ್ಲಿ ಗುಜರಾತ್ ವಿರುದ್ಧ ಗೆದ್ದು ಮತ್ತೆ ಚಾಂಪಿಯನ್ಸ್ ಆಗಿದ್ರು. ಜಗತ್ತಿನಾದ್ಯಂತ ಇರೋ ಆರ್ಸಿಬಿ ಫ್ಯಾನ್ಸ್ ಎಲ್ರೂ ಈ ಗೆಲುವುಗಳನ್ನ ಸೆಲೆಬ್ರೇಟ್ ಮಾಡಿದ್ದಾರೆ. ಐಪಿಎಲ್ ಉದ್ದಕ್ಕೂ ಒಂದೇ ಫ್ರಾಂಚೈಸಿ ಪರ ಆಡಿದ್ದ ಕಿಂಗ್ ವಿರಾಟ್ ಕೊಹ್ಲಿ ಕೂಡ ಟ್ರೋಫಿಗೆ ಮುತ್ತಿಟ್ಟು ಸಾರ್ಥಕತೆಯ ಭಾವದಲ್ಲಿದ್ದಾರೆ. ಸದ್ಯ ಕಪ್ ಗೆದ್ದಿಲ್ಲ ಅನ್ನೋ ಕೊರಗೇನೋ ನೀಗಿದೆ. ಆದ್ರೆ ಇನ್ಮುಂದೆ ಪ್ರತೀ ಸೀಸನ್ನಲ್ಲೂ ಇತಿಹಾಸ ಸೃಷ್ಟಿಸೋ ಟಾರ್ಗೆಟ್ ಇದೆ. 2027ಕ್ಕೂ ಮೋಸ್ಟ್ ಡೇಂಜರಸ್ ಟೀಂ ಆಗಿ ಕಾಣ್ತಿದ್ರೂ ಕೂಡ ಕಪ್ ಗೆಲುವಿನಲ್ಲಿ ಹಲವು ವಿಚಾರಗಳನ್ನ ಗಂಭೀರವಾಗಿ ಪರಿಗಣಿಸವೇಕು.
ಆರ್ ಸಿಬಿಗೆ ಅಲರ್ಟ್ ಮೆಸೇಜ್!
- ಬ್ಯಾಕ್ ಟು ಬ್ಯಾಕ್ ಗೆದ್ದಿದ್ರಿಂದ ಹ್ಯಾಟ್ರಿಕ್ ಗೆಲುವಿನ ಒತ್ತಡ ಹಾಗೂ ನಿರೀಕ್ಷೆ
- ಆರ್ ಸಿಬಿಯನ್ನ ಸೋಲಿಸೋಕೆ ಉಳಿದ ತಂಡಗಳಿಂದ ವಿಶೇಷ ಪ್ಲ್ಯಾನ್
- ಸ್ಟಾರ್ ಆಟಗಾರರು ಅಷ್ಟೇ ಅಲ್ಲದೆ ಬೆಂಚ್ ಕೂಡ ಸ್ಟ್ರಾಂಗ್ ಇರಬೇಕು
- ಗಾಯ, ಫಾರ್ಮ್ ಸಮಸ್ಯೆ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬ್ಯಾಕಪ್
- ಕಿಂಗ್ ವಿರಾಟ್ ಕೊಹ್ಲಿ ಜೊತೆ ಓಪನಿಂಗ್ ನಲ್ಲಿ ಸ್ಟ್ರಾಂಗ್ ಓಪನರ್
- ಮಧ್ಯಮ ಕ್ರಮಾಂಕ ಮತ್ತು ಫಿನಿಶಿಂಗ್ ರೋಲ್ ನಲ್ಲಿ ಕ್ಲಾರಿಟಿ
- ಜಿತೇಶ್ ಶರ್ಮಾ & ರೊಮ್ಯಾರಿಯೋ ಶೆಫರ್ಡ್ ಸ್ಲಾಟ್ ಮತ್ತಷ್ಟು ಸ್ಟ್ರಾಂಗ್
- ಭುವನೇಶ್ವರ್ ಮತ್ತು ಹೇಜಲ್ ವುಡ್ ಮೇಲಿನ ಡಿಪೆಂಡೆನ್ಸಿ ತಗ್ಗಬೇಕು
- ಸ್ಲೋ ಪಿಚ್ ಗಳಲ್ಲಿ ವಿಕೆಟ್ ತೆಗೆಯಲು ಸ್ಟಾರ್ ಸ್ಪಿನ್ನರ್ ನ ಅವಶ್ಯಕತೆ
- ಮಿನಿ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನ ರಿಲೀಸ್ + ಟಾರ್ಗೆಟ್
ಹೀಗೆ ಸತತ ಎರಡು ಕಪ್ಗಳನ್ನ ಗೆದ್ದ ಬೆಂಗಳೂರು ತಂಡಕ್ಕೆ ಮೂರನೇ ಕಪ್ ಗೆಲ್ಲೋಕೆ ಒಂದಷ್ಟು ಸವಾಲುಗಳೂ ಎದುರಾಗುತ್ವೆ. ಆದ್ರೆ ಕಿಂಗ್ ವಿರಾಟ್ ಕೊಹ್ಲಿಯವ್ರ ಎಕ್ಸ್ಪೀರಿಯನ್ಸ್, ರಜತ್ ಪಾಟಿದಾರ್ ಅವ್ರ ಕ್ಯಾಪ್ಟನ್ಸಿ, ತಂಡದ ಬ್ಯಾಲೆನ್ಸ್, ಚಾಂಪಿಯನ್ ಕಾಂಬಿನೇಷನ್ ಎಲ್ಲಾ ನೋಡ್ದಾಗ 20ನೇ ಸೀಸನ್ಗೂ ಬೆಂಗಳನ್ನ ಯಾರೂ ಮುಟ್ಟೋಕೆ ಆಗಲ್ಲ ಅನ್ಸುತ್ತೆ. ವಿರಾಟ್ ಕೊಹ್ಲಿ, ಪಾಟಿದಾರ್, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ಹೀಗೆ ಭಾರತೀಯ ಕೋರ್ ಸಾಕಷ್ಟು ಬಲವಾಗಿದೆ. ಸೋ ಆರ್ಸಿಬಿ ಫ್ಯಾನ್ಸ್ ಅಂತೂ ಫುಲ್ ರಿಲ್ಯಾಕ್ಸ್ ಮೋಡ್ನಲ್ಲಿದ್ದಾರೆ. ಅದೂ ಅಲ್ದೇ RCB ಇತ್ತೀಚೆಗೆ IPLನಲ್ಲಿ $300 ಮಿಲಿಯನ್ ಬ್ರ್ಯಾಂಡ್ ವ್ಯಾಲ್ಯೂ ದಾಟಿದ ಮೊದಲ ಫ್ರಾಂಚೈಸಿಯಾಗಿದೆ. ಮುಂದಿನ ಆವೃತ್ತಿಯಲ್ಲೂ ಕಪ್ ಗೆದ್ರೆ ಆರ್ಸಿಬಿ ಹತ್ತು ಹಲವು ಚರಿತ್ರೆಗಳನ್ನ ಬರೆಯಲಿದೆ.

ನೋಡಿರಿ

