2023ರಲ್ಲಿ ಮಿಸ್.. 2027ಕ್ಕೆ ಸಕ್ಸಸ್ – ODI ವಿಶ್ವಕಪ್ ಬೇಟೆ ಭಾರತಕ್ಕೇನಾ?
RO-KO ಮೇಲೆ ಡಿಪೆಂಡ್ ಆದ್ರಾ?

ಟೀಂ ಇಂಡಿಯಾ ಮುಂದಿರೋ ಬಿಗ್ಗೆಸ್ಟ್ ಟಾರ್ಗೆಟ್ ಅಂದ್ರೆ ಅದು 2027ರ ಏಕದಿನ ವಿಶ್ವಕಪ್. 2023ರಲ್ಲಿ ಜಸ್ಟ್ ಮಿಸ್ ಆಗಿರೋ ಟ್ರೋಫಿಯನ್ನ ಈ ಸಲ ಶತಾಯ ಗತಾಯ ಬೇಟೆಯಾಡಲೇಬೇಕು. ಅದೂ ಅಲ್ದೇ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲೋಕೆ ಸಾಕಷ್ಟು ಕಾರಣಗಳೂ ಇವೆ.
ಇದನ್ನೂ ಓದಿ : ಆಡದೇ ಕೆಟ್ಟ ಬುಮ್ರಾ ಭಾರತ U19 ತಂಡಕ್ಕೆ ಸೆಹ್ವಾಗ್-ದ್ರಾವಿಡ್ ಪುತ್ರರಿಗೆ ಚಾನ್ಸ್
2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಟೂರ್ನಿ ನಡೆಯಲಿದ್ದು ಒಟ್ಟು 14 ತಂಡಗಳ ನಡುವೆ 57 ಪಂದ್ಯಗಳು ನಡೆಯುತ್ವೆ. ಈ ಟೂರ್ನಿಯಲ್ಲಿ ಭಾರತ ಟ್ರೋಫಿ ಗೆಲ್ಲಲೇಬೇಕಿದೆ. 2023ರ ವಿಶ್ವಕಪ್ ಫೈನಲ್‌ನಲ್ಲಿ ಎಡವಿದ ಟೀಂ ಇಂಡಿಯಾ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮತ್ತೆ ಚಾಂಪಿಯನ್ ಪಟ್ಟಕ್ಕೇರಿತು. 2026ರಲ್ಲಿ ಟಿ20 ವಿಶ್ವಕಪ್ ಗೆದ್ದು ಮತ್ತೊಂದು ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ಭಾರತದ ಕಣ್ಣು 2027ರ ಏಕದಿನ ವಿಶ್ವಕಪ್ ಮೇಲಿದೆ. ಹಾಗೇ ವಿಶ್ವಕಪ್ ಫೈಟ್ನಲ್ಲಿ ಪ್ರಬಲ ಸ್ಪರ್ಧಿಯೂ ಹೌದು. ಹೀಗಿದ್ರೂ ತಂಡಕ್ಕೆ ಒಂದಷ್ಟು ಅಡ್ವಾಂಟೇಜಸ್ ಜೊತೆ ಡಿಸ್ ಅಡ್ವಾಂಟೇಜಸ್ ಕೂಡ ಇದೆ.
ಭಾರತದ ವಿಶ್ವಕಪ್ ಯುದ್ಧ!
- ದಕ್ಷಿಣ ಆಫ್ರಿಕಾದ ಕಂಡೀಷನ್ ಬಗ್ಗೆ ಭಾರತದ ಆಟಗಾರರಿಗೆ ಪರಿಚಯ
- ಬ್ಯಾಟಿಂಗ್ ನಲ್ಲಿ ಸಾಕಷ್ಟು ಅನುಭವ + ಯುವಕರ ಸಮಾಗಮ
- ವಿರಾಟ್ ಕೊಹ್ಲಿ ತಂಡದಲ್ಲಿ ಕಂಟಿನ್ಯೂ ಆಗೋದು ದೊಡ್ಡ ಫ್ಯಾಕ್ಟರ್
- ಬೌಲಿಂಗ್ ನಲ್ಲಿ ಬುಮ್ರಾ ಜೊತೆ ಸ್ಪಿನ್ ಬಲವೂ ಸೇರಿದ್ರೆ ಬೊಂಬಾಟ್
- 2023ರ ಏಕದಿನ ವಿಶ್ವಕಪ್ ಫೈನಲ್.. 2025ರ ಚಾಂಪಿಯನ್ಸ್ ಟ್ರೋಫಿ
ಬಟ್ ಈಗ ಇರುವಂಥ ಮೇನ್ ಟಾಸ್ಕ್ ಅಂದ್ರೆ ಭಾರತಕ್ಕೆ ಕಳೆದ ಬಾರಿಯ ಹೋಂ ಅಡ್ವಾಂಟೇಜಸ್ ಇರಲ್ಲ. ದಕ್ಷಿಣ ಆಫ್ರಿಕಾ 8 ವೆನ್ಯೂಗಳಲ್ಲಿ ಪಂದ್ಯಗಳನ್ನು ಆಡಿಸಲಿದೆ. ಜಿಂಬಾಬ್ವೆಯಲ್ಲಿ 3, ನಮೀಬಿಯಾದಲ್ಲಿ 1 ವೆನ್ಯೂ ಇದೆ. ಸೋ ಎಲ್ಲಾ ಪಿಚ್ಗಳಲ್ಲೂ ಬೇರೆ ಬೇರೆ ಥರನಾದ ಸವಾಲುಗಳಿರುತ್ತೆ. ಹೀಗಾಗಿ ಭಾರತ ಇದನ್ನೂ ಕೂಡ ಸಮರ್ಥವಾಗಿ ಎದುರಿಸಬೇಕಾಗುತ್ತೆ. ಒಟ್ನಲ್ಲಿ ಭಾರತ 2027ರ ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಈ ಮೆಗಾ ಟೂರ್ನಿಗೆ ಇನ್ನೂ ಒಂದು ವರ್ಷ ಟೈಂ ಇದೆ. ಇನ್ಮುಂದಿನ ಪ್ರತೀ ಪಂದ್ಯಗಳೂ ಭಾರತಕ್ಕೆ ಹೊಸ ಪಾಠವನ್ನು ಕಲಿಸ್ತಾ ಹೋಗುತ್ತೆ.

ನೋಡಿರಿ

