ENGನಲ್ಲಿ PAK ಮಾನ ಹರಾಜು – ಬೆದರಿಕೆಗೆ ಬಗ್ಗದ SPORTS ಚಾನೆಲ್
ಇಮ್ರಾನ್ ಪುತ್ರರಿಂದಲೇ ಗುಟ್ಟು ರಟ್ಟು

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೀತಾ ಇದೆ. ಆಲ್ರೆಡಿ ಮೊದಲ ಮ್ಯಾಚ್ ಮುಗಿದಿದ್ದು ಇದ್ರಲ್ಲಿ ಇಂಗ್ಲೆಂಡ್ ವಿನ್ ಆಗಿದೆ. ಈಗ ಲಾರ್ಡ್ಸ್ನಲ್ಲಿ ಎರಡನೇ ಪಂದ್ಯ ನಡೆಯುತ್ತಿದೆ. ಆದ್ರೆ ಪಂದ್ಯದ ವೇಳೆಯೇ ಪಾಕಿಸ್ತಾನದ ಮಾನ ಹರಾಜಾಗಿದೆ. ಬ್ಲ್ಯಾಕ್ಮೇಲ್ ಮಾಡಿದ್ರೂ ಪಿಸಿಬಿಗೆ ಬ್ಯಾಕ್ ಫೈಯರ್ ಆಗಿದೆ. ತಮ್ಮ ಮಾಜಿ ನಾಯಕನ ವಿಚಾರದಲ್ಲೇ ಅವಮಾನಕ್ಕೊಳಗಾಗಿದೆ.
ಇದನ್ನೂ ಓದಿ : ಅಭಿಷೇಕ್ ಔಟ್.. ಸಂಜುಗೆ ಚಾನ್ಸ್ – ಬುಮ್ರಾ & ಪಾಂಡ್ಯ ಫಿಟ್ ಆಗಿಲ್ವಾ?
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಸದ್ಯ ಭ್ರಷ್ಟಾಚಾರದ ಆರೋಪಗಳ ಮೇಲೆ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದಾರೆ. ಕಳೆದ 3 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅವರ ಕಣ್ಣಿನ ದೃಷ್ಟಿ ಸಮಸ್ಯೆ, ಆರೋಗ್ಯದ ಸಮಸ್ಯೆಗಳ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇತ್ತೀಚೆಗಷ್ಟೇ ಇಮ್ರಾನ್ ಖಾನ್ ಗೆ ಸೂಕ್ತ ವೈದ್ಯಕೀಯ ನೆರವು ನೀಡುವಂತೆ ಭಾರತದ ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಸೇರಿದಂತೆ ವಿಶ್ವದ 21 ಮಾಜಿ ಕ್ರಿಕೆಟ್ ನಾಯಕರು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ರು. ಕಳೆದ ಆರು ತಿಂಗಳಲ್ಲಿ 2ನೇ ಲೆಟರ್ ಇದು. ಸೋ ಇಮ್ರಾನ್ ಖಾನ್ ವಿಚಾರವಾಗಿ ಪಾಕಿಸ್ತಾನ ಸರ್ಕಾರ ಪದೇಪದೆ ಮುಜುಗರಕ್ಕೆ ಒಳಗಾಗ್ತಾನೇ ಇದೆ. ಆದ್ರೆ ಇದೇ ವಿಚಾರದಲ್ಲಿ ಇಂಗ್ಲೆಂಡ್ನಲ್ಲಿ ಪಂದ್ಯದ ವೇಳೆಯೇ ಪಾಕ್ ಕ್ರಿಕೆಟ್ ಮಂಡಳಿ ಕೂಡ ಅವಮಾನ ಅನುಭವಿಸಿದೆ. ಪ್ರಸ್ತುತ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರೋ ಎರಡನೇ ಪಂದ್ಯದ ಮೊದಲ ದಿನದಾಟದಲ್ಲೇ ಹೈಡ್ರಾಮಾ ಆಗಿದೆ. ವಿಷ್ಯ ಏನಂದ್ರೆ ಪಾಕ್ನಲ್ಲಿ ಜೈಲುವಾಸ ಅನುಭವಿಸ್ತಿರೋ ಇಮ್ರಾನ್ ಖಾನ್ ಅವ್ರ ಇಬ್ಬರು ಪುತ್ರರ ಸಂದರ್ಶನವೇ ಪೊಲಿಟಿಕಲ್ ಅಂಡ್ ಸ್ಪೋರ್ಟ್ಸ್ ಕಾಂಟ್ರವರ್ಸಿಯಾಗಿ ಟರ್ನ್ ಆಗಿದೆ.
ಇಮ್ರಾನ್ ಕೊಲ್ಲ*ಲು ಸಂಚು?
ಲಾರ್ಡ್ಸ್ ಪಂದ್ಯದ ಮೊದಲ ದಿನದ ಸ್ಕೈ ಸ್ಪೋರ್ಟ್ಸ್ ನಲ್ಲಿ ಸಂದರ್ಶನ ಪ್ರಸಾರ
ಇಮ್ರಾನ್ ಖಾನ್ ಪುತ್ರರಾದ ಸುಲೈಮಾನ್ ಖಾನ್, ಕಾಸಿಮ್ ಖಾನ್ ಸಂದರ್ಶನ
ಸೂಕ್ತ ಚಿಕಿತ್ಸೆಗಾಗಿ ಮಾಜಿ ನಾಯಕರ ಸಹಿ ಪತ್ರದಲ್ಲಿ ಸಂದರ್ಶಕ ಮೈಕಲ್ ಸಹಿ
ತಂದೆಯ ವಿಚಾರವಾಗಿ ಪುತ್ರರಿಂದ ಗಂಭೀರ ಆರೋಪ, ಜೈಲಿನಲ್ಲಿ ಒಂಟಿ ವಾಸ
ಬಲಗಣ್ಣಿನ ದೃಷ್ಟಿ ಶೇ. 80-85 ರಷ್ಟು ಕ್ಷೀಣಿಸಿದ್ದು, ಬಿಪಿ ಸಮಸ್ಯೆಯೂ ಇದೆ
ಪಾಕಿಸ್ತಾನ ಸರ್ಕಾರವು ತಮ್ಮ ತಂದೆಯನ್ನು ಜೈಲಿನಲ್ಲೇ ಕೊಲ್ಲ*ಲು ಸಂಚು
ಪಾಕಿಸ್ತಾನದ ಪ್ರಸ್ತುತ ಕ್ರಿಕೆಟಿಗರು ಅನ್ಯಾಯದ ವಿರುದ್ಧ ಮೌನವಾಗಿರುವುದನ್ನು ಪ್ರಶ್ನೆ
ಪಾಕ್ ಸರ್ಕಾರದ ಡೈರೆಕ್ಟ್ ಕಂಟ್ರೋಲ್, ಆಂತರಿಕ ಸಚಿವ ಮೊಹ್ಸಿನ್ ನಖ್ವಿ
ಸ್ಕೈ ಸ್ಪೋರ್ಟ್ಸ್ ಈ ಸಂದರ್ಶನ ಪ್ರಸಾರ ಮಾಡಿದರೆ ಪಂದ್ಯ ಆಡದಂತೆ ಬೆದರಿಕೆ
ಪಾಕ್ನ ಗೊಡ್ಡುಬೆದರಿಕೆಗೆ ಬಗ್ಗದ ಸ್ಕೈ ಸ್ಪೋರ್ಟ್ಸ್ ಲಂಚ್ ಬ್ರೇಕ್ ಟೈಮಲ್ಲೇ ಪ್ರಸಾರ
ECB ಅಧಿಕಾರಿಗಳ ಸುದೀರ್ಘ ಚರ್ಚೆ, ಪಂದ್ಯವನ್ನು ಮುಂದುವರಿಸಲು ಒಪ್ಪಿಗೆ
ಸ್ಕೈ ಸ್ಪೋರ್ಟ್ಸ್ ವಿರುದ್ಧ ಬ್ರಿಟನ್ ಕಛೇರಿಯಲ್ಲಿ ಲಿಖಿತ ದೂರನ್ನು ದಾಖಲಿಸಿದೆ
ಮುಖ್ಯಕೋಚ್ ಸರ್ಫರಾಜ್ ಅಹ್ಮದ್ ಮಾತುಗಳಿಗೆ ಪಿಸಿಬಿಗೆ ಮತ್ತೆ ಮುಜುಗರ
ಈ ಸಂದರ್ಶನದ ವಿಚಾರದಲ್ಲಿ ಪಾಕ್ ಮತ್ತು ಇಂಗ್ಲೆಂಡ್ ವಾದ ಬೇರೆಯೇ ಇದೆ. ಪಂದ್ಯ ನಡೆಯೋ ವೇಳೆ ರಾಜಕೀಯ ವಿಷಯಗಳನ್ನು ತರಬಾರದು ಅನ್ನೋದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾದ. ಆದ್ರೆ ಇಮ್ರಾನ್ ಖಾನ್ ಕೇವಲ ರಾಜಕಾರಣಿಯಲ್ಲ, ಬದಲಿಗೆ ಪಾಕಿಸ್ತಾನಕ್ಕೆ ವಿಶ್ವಕಪ್ ತಂದುಕೊಟ್ಟ ಕ್ರಿಕೆಟ್ ದಂತಕಥೆ. ಹೀಗಾಗಿ ಅವರ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ರೈಟ್ಸ್ ಮೀಡಿಯಾಗಳಿಗೆ ಇದೆ ಅಂತಾ ಬ್ರಿಟನ್ ಮಾಧ್ಯಮಗಳು ಕೌಂಟರ್ ಕೊಟ್ಟಿದ್ದಾರೆ. ಒಟ್ನಲ್ಲಿ ಪಾಕಿಸ್ತಾನ ಎಲ್ಲಿಯೇ ಹೋದ್ರೂ ವಿವಾದ ಮೈಮೇಲೆ ಎಳ್ಕೊಳ್ಳೋದಂತೂ ತಪ್ಪುತ್ತಿಲ್ಲ.

ನೋಡಿರಿ

