BCCIಗೆ ಸುಖದ ಸುಪ್ಪತ್ತಿಗೆ ಬೇಕಾ? – ಏಷ್ಯನ್ ಗೇಮ್ಸ್ ಗೆಲ್ಲುತ್ತಾ B ಟೀಂ?
2028ರ ಒಲಿಂಪಿಕ್ಸ್ ಗೂ ಹೊಡೆತ

BCCIಗೆ ಸುಖದ ಸುಪ್ಪತ್ತಿಗೆ ಬೇಕಾ? – ಏಷ್ಯನ್ ಗೇಮ್ಸ್ ಗೆಲ್ಲುತ್ತಾ B ಟೀಂ?2028ರ ಒಲಿಂಪಿಕ್ಸ್ ಗೂ ಹೊಡೆತ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಅದ್ರಲ್ಲೂ ಕ್ರಿಕೆಟ್ ಆಯೋಜನೆ ವಿಚಾರದಲ್ಲಿ ಬಿಸಿಸಿಐ ಸೇರಿದಂತೆ ಏಷ್ಯನ್ ರಾಷ್ಟ್ರಗಳು ಸ್ಪರ್ಧೆ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿವೆ. ಭಾರತ ಅಂತೂ ಬಲಿಷ್ಠ ತಂಡದ ಬದಲು ಲೆಕ್ಕಕ್ಕೆ ಮಾತ್ರ ಎನ್ನುವಂಥ ಟೀಂ ಕಳಿಸೋ ಬಗ್ಗೆ ಚರ್ಚೆಗಳಾಗ್ತಿದೆ.

ಇದನ್ನೂ ಓದಿ : ಅಭಿಷೇಕ್ ಔಟ್.. ಸಂಜುಗೆ ಚಾನ್ಸ್ – ಬುಮ್ರಾ & ಪಾಂಡ್ಯ ಫಿಟ್ ಆಗಿಲ್ವಾ?

ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್  ಕ್ರೀಡೆಗಳಿಗಾಗಿ ಭಾರತ ಕೂಡ ಬಲಿಷ್ಠ ಆಟಗಾರರ ಪಡೆಯನ್ನೇ ಕಳಿಸ್ತಿದೆ. ಒಟ್ಟು 248 ಕ್ರೀಡಾಪಟುಗಳ ನಿಯೋಗವು 19 ಕ್ರೀಡೆಗಳಲ್ಲಿ ದೇಶವನ್ನು ರೆಪ್ರಸೆಂಟ್ ಮಾಡಲಿದ್ದಾರೆ. ಌಂಡ್ ಈ ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್ ಮತ್ತು ಫೀಲ್ಡ್ ಹಾಕಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಆದ್ರೆ ಕ್ರಿಕೆಟ್​ನಲ್ಲಿ ಈ ಚಾಂಪಿಯನ್ ಪದಕ ಉಳಿಸಿಕೊಳ್ಳೋದು ಕಷ್ಟ ಎನ್ನೋ ಮಾತುಗಳು ಕೇಳಿಬರ್ತಿವೆ.

ಫೆಸಿಲಿಟೀಸ್ ಇಲ್ಲ ಅಂತಾ ಬಿ ಟೀಂ ಕಳಿಸುತ್ತಾ ಭಾರತ?

ಜಪಾನ್​ನಲ್ಲಿ ನಡೆಯಲಿರೋ ಏಷ್ಯನ್ ಗೇಮ್ಸ್​ಗಾಗಿ ಭಾರತ ಕಳೆದ ಮೂರು ತಿಂಗಳ ಹಿಂದೆಯೇ ಟೀಂ ಅನೌನ್ಸ್ ಮಾಡಿತ್ತು. ಶ್ರೇಯಸ್ ಅಯ್ಯರ್ ನೇತೃತ್ವದ ತಂಡದಲ್ಲಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಸ್ಟಾರ್ ಆಟಗಾರರ ದಂಡೇ ಇದೆ. ಆದ್ರೆ ಈಗ ಈ ಕೂಟದಲ್ಲಿ ಆಟಗಾರರಿಗೆ ಒದಗಿಸಲಾದ ಸೌಲಭ್ಯಗಳ ಬಗ್ಗೆ ಬಿಸಿಸಿಐ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಸಮಾಧಾನ ಹೊಂದಿವೆ ಎನ್ನಲಾಗಿದೆ. ಯಾಕಂದ್ರೆ ಮೈದಾನದಲ್ಲಿ ಡ್ರೆಸ್ಸಿಂಗ್ ರೂಮ್‌ಗಳನ್ನು ಟೆಂಟ್‌ಗಳಲ್ಲಿ ಮಾಡಲಾಗಿದ್ದು, ಶೌಚಾಲಯಗಳು 500 ಮೀಟರ್ ದೂರದಲ್ಲಿವೆ. ಅಲ್ಲದೆ ಹೋಟೆಲ್ ರೂಮ್‌ಗಳು ಕೂಡ ತೀರಾ ಚಿಕ್ಕದಾಗಿವೆ. ಈ ಕಳಪೆ ಸೌಲಭ್ಯಗಳ ಕಾರಣದಿಂದಾಗಿ ಸ್ಟಾರ್ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಭಾರತದ ಎ ಕೆಟಗರಿ ಪ್ಲೇಯರ್ಸ್ ಬದಲು ಬಿ ಟೀಂ ಕಳಿಸಬಹುದು ಅನ್ನೋ ಚರ್ಚೆಗಳು ನಡೆಯುತ್ತಿವೆ. ಅಂದ್ರೆ ಇಲ್ಲಿ ಎ ಟೀಂ ಮತ್ತು ಬಿ ಟೀಂ ಬಗ್ಗೆ ಕ್ಲಿಯರ್ ಮಾಡಿಬಿಡ್ತೇನೆ. ಎ ಟೀಂ ಅಂದ್ರೆ ಪ್ರಸ್ತುತ ಭಾರತದ ಟಿ-20ಐ ತಂಡದ ಪರ ಆಡುವಂಥ ಸ್ಟಾರ್ ಪ್ಲೇಯರ್ಸ್. ಅದೇ ಬಿ ಟೀಂ ಅಂದ್ರೆ ಇವ್ರನ್ನೆಲ್ಲಾ ಬಿಟ್ಟು ಬೇರೆ ಆಟಗಾರರ ಟೀಂ ಕಟ್ಟಿ ಕಳ್ಸೋದು. ಇದು ಬಿಸಿಸಿಐನ ಪ್ಲ್ಯಾನ್ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮತ್ತೊಂದೆಡೆ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಬಿಸಿಸಿಐ ವೀಕ್ಷಕರೊಬ್ಬರನ್ನು ಕಳುಹಿಸುತ್ತಿದ್ದು, ಆಯೋಜಕರು ಸೌಲಭ್ಯಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಏಷ್ಯನ್ಸ್ ಕ್ರೀಡಾಕೂಟದಲ್ಲಿ ಭಾರತ ಬಲಿಷ್ಠ ಸ್ಪರ್ಧಿ. ಹೀಗಿರುವಾಗ ಸ್ಟ್ರಾಂಗ್ ಟೀಂ ಕಳಿಸದೇ ಇದ್ರೆ ಅದು ಭಾರತಕ್ಕೇ ಅತಿದೊಡ್ಡ ನಷ್ಟ.

ಒಲಿಂಪಿಕ್ಸ್ & ಕಾಮನ್ ವೆಲ್ತ್ ನಷ್ಟೇ ಮಹತ್ವ ಪಡೆದಿರುವ ಏಷ್ಯನ್ ಗೇಮ್ಸ್!

ಅಷ್ಟಕ್ಕೂ ಇಲ್ಲಿ ಏಷ್ಯನ್ ಗೇಮ್ಸ್ ಏನು ಸಣ್ಣಪುಟ್ಟ ಕ್ರೀಡಾಕೂಟವಲ್ಲ. ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಷ್ಟೇ ಮಹತ್ವ ಪಡೆದಿರುವ ವಿಶ್ವದ ಅತಿ ದೊಡ್ಡ ಬಹು-ಕ್ರೀಡಾಕೂಟಗಳಲ್ಲಿ ಒಂದು. ಒಲಿಂಪಿಕ್ಸ್ ನಂತರ ಅತ್ಯಧಿಕ ಸಂಖ್ಯೆಯ ಕ್ರೀಡಾಪಟುಗಳು ಭಾಗವಹಿಸುವ ಕ್ರೀಡಾ ಹಬ್ಬ ಕೂಡ ಇದೆ. ಏಷ್ಯನ್ ಗೇಮ್ಸ್‌ನ ಹಲವು ಕ್ರೀಡೆಗಳಲ್ಲಿ ಫಾರ್ ಎಕ್ಸಾಂಪಲ್ ಹಾಕಿ, ಬಾಕ್ಸಿಂಗ್, ಆರ್ಚರಿ ಹೀಗೆ ಚಿನ್ನದ ಪದಕ ಅಥವಾ ಟಾಪ್​ನಲ್ಲಿ ಬಂದ ಕ್ರೀಡಾಪಟುಗಳಿಗೆ ಹಾಗೇ ತಂಡಗಳಿಗೆ ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಪಡೆಯುವ ಅವಕಾಶಗಳು ಇರುತ್ತೆ. ಹಾಗೇ ಇಲ್ಲಿ ಪದಕ ಗೆಲ್ಲುವಂಥ ಕ್ರೀಡಾಪಟುಗಳಿಗೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ನೇಮ್ ಫೇಮ್ ಸಿಗೋದ್ರ ಜೊತೆಗೆ  ನಗದು ಪುರಸ್ಕಾರ ಹಾಗೂ ಸ್ಪಾನ್ಸರ್​ಶಿಪ್​ಗಳು ಸಿಗುತ್ತೆ. ಅವ್ರ ನೆಕ್ಸ್​ಟ್ ಕೆರಿಯರ್ ಗ್ರೋತ್​ಗೆ ತುಂಬಾನೇ ದೊಡ್ಡ ಪ್ಲಸ್ ಪಾಯಿಂಟ್ ಇದು.

ಕ್ರೀಡಾಹಬ್ಬ ಏಷ್ಯನ್ ಗೇಮ್ಸ್!

ಕೇವಲ ಪದಕ ಗೆಲ್ಲುವ ವಿಷಯವಲ್ಲ.. ಏಷ್ಯಾದ ಮಟ್ಟದಲ್ಲಿ ಕ್ರೀಡಾ ಶಕ್ತಿ

ಏಷ್ಯಾದ ಪ್ರಬಲ ಸ್ಪರ್ಧಿ ಭಾರತ ಬಿ ಟೀಂ ಕಳಿಸಿ ಸೋತ್ರೆ ಭಾರತಕ್ಕೇ ಲಾಸ್

48 ರಾಷ್ಟ್ರಗಳ ಸಾವಿರಾರು ಕ್ರೀಡಾಪಟುಗಳು ಭಾಗವಹಿಸೋದ್ರಿಂದ ಉತ್ತಮ ವೇದಿಕೆ

2022ರ ಹ್ಯಾಂಗ್‌ ಝೌ ಗೇಮ್ಸ್‌ ನಲ್ಲಿ ಭಾರತ 106 ಪದಕಗಳನ್ನು ಗೆದ್ದು ಇತಿಹಾಸ

2028ರ ಒಲಿಂಪಿಕ್ಸ್ ದೃಷ್ಟಿಯಿಂದಲೂ ಏಷ್ಯನ್ ಗೇಮ್ಸ್ ನಲ್ಲಿ ಪದಕ ಬೇಟೆ ಮುಖ್ಯ

T20 ಕ್ರಿಕೆಟ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ ಭಾಗವಾಗಿರುವ ಹಿನ್ನೆಲೆ

ಹಾಗೇನಾದ್ರೂ ಭಾರತದ ಪರ ಸ್ಟಾರ್ ಪ್ಲೇಯರ್ಸ್ ಭಾಗಿಯಾಗದೆ ಆಲ್ಟರ್​ನೇಟಿವ್ ಆಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಥರ ಟೀಂ ಕಳಿಸಿದ್ರೆ ಮುಂದಿನ ವಿಶ್ವಕಪ್, ಒಲಿಂಪಿಕ್ಸ್ ಮತ್ತು ದೊಡ್ಡ ಟೂರ್ನಿಗಳಿಗೆ ಸಿದ್ಧವಾಗಬೇಕಾದ ಆಟಗಾರರಿಗೆ ದೊಡ್ಡ ವೇದಿಕೆಯ ಅನುಭವವೂ ಮಿಸ್ ಆಗುತ್ತೆ. ಭಾರತದಂತಹ ದೊಡ್ಡ ಕ್ರೀಡಾ ರಾಷ್ಟ್ರ ಪ್ರಮುಖ ಬಹು-ಕ್ರೀಡಾ ಕೂಟದಿಂದ ಹಿಂದೆ ಸರಿದರೆ, ಏಷ್ಯಾದಲ್ಲಿ ಭಾರತದ ಸ್ಪೋರ್ಟ್ಸ್ ಇಮೇಜ್‌ಗೂ ಡ್ಯಾಮೇಜ್ ಆಗುತ್ತೆ. ಅದೂ ಅಲ್ದೇ 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್‌ನಲ್ಲಿ ಚಿನ್ನ ಗೆದ್ದಿತ್ತು. ಈಗಲೂ ಕೂಡ ಅದೇ ಟಾರ್ಗೆಟ್​ನಲ್ಲಿ ಭಾರತ ಕಣಕ್ಕಿಳಿಯಬೇಕು. ಒಂದ್ವೇಳೆ ಭಾರತ ಹೊರತುಪಡಿಸಿ ಬೇರೆ ತಂಡಗಳು ಸ್ಟ್ರಾಂಗ್ ಟೀಂ ಕಳಿಸಿ ಅವ್ರ ಮುಂದೆ ಭಾರತ ಸೋತ್ರೆ ಅದು ವಿಶ್ವಮಟ್ಟದಲ್ಲಿ ಮುಜುಗರ ತರಬಹುದು. 1998ರ ಕಾಮನ್ ವೆಲ್ತ್ ಕ್ರೀಡಾಕೂಟದ ವೇಳೆಯೂ ಇಂಥದ್ದೇ ಪರಿಸ್ಥಿತಿ ಇತ್ತು. ಕಾಮನ್ ವೆಲ್ತ್ ಮತ್ತು ಪಾಕಿಸ್ತಾನ ವಿರುದ್ಧದ ಸರಣಿ ಒಟ್ಟೊಟ್ಟಿಗೆ ಇದ್ದದ್ರಿಂದ ಭಾರತವನ್ನ ಎರಡು ಟೀಂ ಮಾಡಿ ಕಳಿಸಲಾಗಿತ್ತು. ಕಾಮನ್ ವೆಲ್ತ್ ಗೆ ಅಜಯ್ ಜಡೇಜಾ ಕ್ಯಾಪ್ಟನ್ ಆದ್ರೆ ಪಾಕ್ ವಿರುದ್ಧದ ಸಹರಾ ಕಪ್ ಗೆ ಮೊಹಮ್ಮದ್ ಅಜರುದ್ದೀನ್ ಕ್ಯಾಪ್ಟನ್ ಆಗಿದ್ರು. ಬಟ್ ಬ್ಯಾಡ್ ಲಕ್ ಅಂದ್ರೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಸೆಮಿಪೈನಲ್ ಗೆ ಅರ್ಹತೆ ಪಡೆಯದೇ 9ನೇ ಸ್ಥಾನ ಪಡೆದು ವಾಪಸ್ ಆಗಿತ್ತು. ಹೀಗಾಗಿ ಭಾರತ ಏಷ್ಯನ್ ಗೇಮ್ಸ್​ನ ಅಷ್ಟು ಈಸಿಯಾಗಿ ಪರಿಗಣಿಸೋ ಬದಲು ಸ್ಟ್ರಾಂಗ್ ಟೀಮ್​ನೇ ಕಳಿಸಬೇಕಿದೆ.

Shantha Kumari

Leave a Reply

Your email address will not be published. Required fields are marked *