ಅಭಿಷೇಕ್ ಔಟ್.. ಸಂಜುಗೆ ಚಾನ್ಸ್ – ಬುಮ್ರಾ & ಪಾಂಡ್ಯ ಫಿಟ್ ಆಗಿಲ್ವಾ?
AFG ಸರಣಿಗೆ ಹೀಗಿದೆ ಭಾರತ!

ಅಭಿಷೇಕ್ ಔಟ್.. ಸಂಜುಗೆ ಚಾನ್ಸ್ – ಬುಮ್ರಾ & ಪಾಂಡ್ಯ ಫಿಟ್ ಆಗಿಲ್ವಾ?AFG ಸರಣಿಗೆ ಹೀಗಿದೆ ಭಾರತ!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆದ್ದಿರೋ ಟೀಂ ಇಂಡಿಯಾ ನೆಕ್ಸ್​ಟ್ ಎರಡು ವಾರ ರಿಲ್ಯಾಕ್ಸ್ ಮೋಡ್​ನಲ್ಲಿರ್ತಾರೆ. ಆ ನಂತ್ರ ಅಫ್ಘಾನಿಸ್ತಾನ ವಿರುದ್ಧದ ಟಿ-20ಐ ಸರಣಿ ಮೂಲಕ ಮತ್ತೆ ಜರ್ನಿ ಸ್ಟಾರ್ಟ್ ಆಗಲಿದೆ. ಈ ಸಿರೀಸ್​ಗಾಗಿ ಆಲ್ರೆಡಿ ಆಫ್ಘನ್ ಟೀಂ ಕೂಡ ಅನೌನ್ಸ್ ಆಗಿದೆ. ಇತ್ತ ಬಿಸಿಸಿಐ ಇನ್ನೆರಡು ದಿನದಲ್ಲಿ ಟೀಂ ಘೋಷಣೆ ಮಾಡ್ಬೋದು. ಆದ್ರೆ ಇಲ್ಲಿರೋ ಪ್ರಶ್ನೆ ಅಂದ್ರೆ ಭಾರತ ತಂಡದಲ್ಲಿ ಯಾರೆಲ್ಲಾ ಚಾನ್ಸ್ ಪಡೆಯುತ್ತಾರೆ ಅನ್ನೋದು.

ಇದನ್ನೂ ಓದಿ : ಟೀಂ ಇಂಡಿಯಾಗೆ DRAW ಬರೆ – WTC ರೇಸ್ ನಿಂದ ಗೇಟ್ ಪಾಸ್?

2026ರ ಐಪಿಎಲ್​ ಬಳಿಕ ಟಿ-20ಐ ಫಾರ್ಮೆಟ್​ನಲ್ಲಿ ಭಾರತ ತುಂಬಾನೇ ಸ್ಟ್ರಗಲ್ ಪಟ್ಟಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಆಗಿದ್ದ ಭಾರತ ನೆಕ್ಸ್​ಟ್ ಜಿಂಬಾಬ್ವೆ ವಿರುದ್ಧ ಮೂರಕ್ಕೆ ಮೂರೂ ಪಂದ್ಯಗಳನ್ನ ವಿನ್ ಆಗಿತ್ತು. ಈಗ ಆಫ್ಘನಿಸ್ತಾನ ವಿರುದ್ಧ ಸೆಪ್ಟೆಂಬರ್​ನಲ್ಲಿ ಮೂರು ಪಂದ್ಯಗಳ ಟಿ-20ಐ ಸರಣಿ ನಡೆಯಲಿದೆ. ಸೆಪ್ಟೆಂಬರ್ 13, 15 ಮತ್ತು 17 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳಿಗೆ ಬಿಸಿಸಿಐ ಆಯ್ಕೆದಾರರು ಬಲಿಷ್ಠ ತಂಡವನ್ನೇ ಅನೌನ್ಸ್ ಮಾಡಬೇಕಿದೆ. ಯಾಕಂದ್ರೆ ಇದೇ ಸರಣಿಯಲ್ಲಿ ಮುಂದಿನ ಏಷ್ಯನ್ ಕ್ರೀಡಾಕೂಟಕ್ಕೆ ತಯಾರಿ ನಡೆಸೋಕೆ ಒಂದು ಕ್ಲಿಯರ್ ಪಿಕ್ಚರ್ ಸಿಗಲಿದೆ. ಆದ್ರೆ ಟೀಂ ಇಂಡಿಯಾದಲ್ಲಿ ಆಟಗಾರರ ಆಯ್ಕೆ ವಿಚಾರದಲ್ಲಿ ಸಾಕಷ್ಟು ಕನ್ಫ್ಯೂಷನ್ಸ್ ಕೂಡ ಇವೆ.

ಯಾರಿಗೆ ಚಾನ್ಸ್.. ಯಾರು ಔಟ್?

ಕಳೆದ ಮೂರು ಸರಣಿಗಳಲ್ಲೂ ಉತ್ತಮ ಪ್ರದರ್ಶನ ನೀಡದ ಅಭಿಷೇಕ್ ಶರ್ಮಾ

ಐರ್ಲೆಂಡ್ ನಲ್ಲಿ 49 ರನ್ಸ್, ಇಂಗ್ಲೆಂಡ್ 131 ರನ್ಸ್, ಜಿಂಬಾಬ್ವೆನಲ್ಲಿ 11 ರನ್ಸ್

ಆಫ್ಘನ್ ವಿರುದ್ಧದ ಸರಣಿಯಲ್ಲಿ ಅವಕಾಶ ಕಳ್ಕೊಳ್ತಾರಾ ಅಭಿಷೇಕ್ ಶರ್ಮಾ

ಜಿಂಬಾಬ್ವೆ ಪ್ರವಾಸಕ್ಕೆ ಸೆಲೆಕ್ಟ್ ಆಗದ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗುತ್ತಾ?

ಡೊಮೆಸ್ಟಿಕ್ ನಲ್ಲಿ ಮಿಂಚುತ್ತಿರೋ ಭುವನೇಶ್ವರ್ ಕುಮಾರ್ ಗೆ ಸಿಗುತ್ತಾ ಚಾನ್ಸ್?

ಜಸ್ಪ್ರೀತ್ ಬುಮ್ರಾ & ಹಾರ್ದಿಕ್ ಪಾಂಡ್ಯ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಪ್ರಶ್ನೆ

ಐಪಿಎಲ್ ಬಳಿಕ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಮಾತ್ರ ಆಡಿರುವ ಬುಮ್ರಾ

ಐಪಿಎಲ್ ಬಳಿಕ ಭಾರತದ ಪರ ಯಾವುದೇ ಪಂದ್ಯ ಆಡದ ಹಾರ್ದಿಕ್ ಪಾಂಡ್ಯ

ಭಾರತ ತಂಡದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರೋ ಕುಲ್ದೀಪ್ ಯಾದವ್ ಬಗ್ಗೆ ಪ್ರಶ್ನೆ

2026ರಲ್ಲಿ ಕೇವಲ ನಾಲ್ಕು ಟಿ20ಐ ಪಂದ್ಯ, ಫೆ.15ಕ್ಕೆ ಪಾಕ್ ವಿರುದ್ಧ ಕೊನೇ ಪಂದ್ಯ

ಹೀಗೆ ಭಾರತ ಟಿ-20ಐ ತಂಡದ ಆಯ್ಕೆ ಬಗ್ಗೆ ಸಾಕಷ್ಟು ಕ್ವಶ್ಚನ್ಸ್ ಇದೆ. ಇದೆಲ್ಲದ್ರ ನಡುವೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮಾಯಾಂಕ್ ಯಾದವ್ ತಮ್ಮ ಬೌಲಿಂಗ್‌ನಲ್ಲಿ ಇಂಪ್ಯಾಕ್ಟ್ ಮಾಡಿದ್ರು. ಬಟ್ ಪ್ರಿನ್ಸ್ ಯಾದವ್, ಯಶ್ ಠಾಕೂರ್ ಮತ್ತು ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಗೆ ಅವ್ರ ಬಗ್ಗೆ ಯಾವುದೇ ಕ್ಲಾರಿಟಿ ಇಲ್ಲ. ಬಟ್ ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ, ಇಶಾನ್ ಕಿಶನ್, ಶಿವಂ ದುಬೆ ಮತ್ತು ರವಿ ಬಿಷ್ಣೋಯ್ ತಮ್ಮ ಸ್ಥಾನ ಉಳಿಸಿಕೊಳ್ಳೋದು ಪಕ್ಕಾ. ಹಾಗೇ ಶ್ರೇಯಸ್ ಅಯ್ಯರ್ ತಂಡವನ್ನು ಲೀಡ್ ಮಾಡ್ತಾರೆ. ಇದ್ರಲ್ಲಿ ಯಾವುದೇ ಡೌಟ್ಸ್ ಇಲ್ಲ. ಬಟ್ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ಈ ಐದೂ ಆಟಗಾರರು 2026 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ತಂಡದಲ್ಲಿದ್ದಾರೆ. ಬಟ್ ಈ ಐವರೂ ಆಟಗಾರರು ಇಂಜುರಿಯಿಂದಾಗಿ ಅಟ್ ಪ್ರಸೆಂಟ್ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನ ಸರಣಿ ವೇಳೆಗೆ ಯಾರೆಲ್ಲಾ ರಿಕವರ್ ಆಗಿ ಕಂ ಬ್ಯಾಕ್ ಮಾಡ್ತಾರೆ ಅನ್ನೋ ಕುತೂಹಲವೂ ಇದೆ.

ಆಫ್ಘನ್ ಸರಣಿಗೆ ಯಾರೆಲ್ಲಾ ಆಯ್ಕೆ?

ಶ್ರೇಯಸ್ ಅಯ್ಯರ್

ಸಂಜು ಸ್ಯಾಮ್ಸನ್

ವೈಭವ್ ಸೂರ್ಯವಂಶಿ

ಅಭಿಷೇಕ್ ಶರ್ಮಾ

ಇಶಾನ್ ಕಿಶನ್

ತಿಲಕ್ ವರ್ಮಾ

ರಿಂಕು ಸಿಂಗ್

ಶಿವಂ ದುಬೆ

ಅಕ್ಷರ್ ಪಟೇಲ್

ಅರ್ಷದೀಪ್ ಸಿಂಗ್

ಮಯಾಂಕ್ ಯಾದವ್

ಪ್ರಿನ್ಸ್ ಯಾದವ್

ಸೂರ್ಯಾನ್ಶ್ ಶೆಡ್ಗೆ

ಜಸ್ಪ್ರೀತ್ ಬುಮ್ರಾ

ಹಾರ್ದಿಕ್ ಪಾಂಡ್ಯ

Shantha Kumari

Leave a Reply

Your email address will not be published. Required fields are marked *