ಗಂಭೀರ್-ಗಿಲ್ BIG ಮಿಸ್ಟೇಕ್! 2 ಪಂದ್ಯ 420 ರನ್ಸ್, ಸೋನಲ್ ಚರಿತ್ರೆ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಗಿಲ್ ಮತ್ತು ಗಂಭೀರ್ ನಿರ್ಧಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೀಲಂಕಾವನ್ನ ಮೊದಲ ಇನ್ನಿಂಗ್ಸ್ನಲ್ಲಿ 290ಕ್ಕೆ ಆಲೌಟ್ ಮಾಡಿದ ಭಾರತ ತಂಡ, ಎರಡನೇ ಇನ್ನಿಂಗ್ಸ್ ಆಡದೇ ಫಾಲೋ-ಆನ್ ಹೇರಿತು. ಇದೀಗ ಆ ನಿರ್ಧಾರ ಭಾರತದ ಗೆಲುವಿಗೆ ಮುಳ್ಳಾಯಿತೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತ ಬ್ಯಾಟಿಂಗ್ ಮಾಡಿ 350-400 ರನ್ಗಳ ಗುರಿ ನಿಗದಿ ಮಾಡಿದ್ದರೆ, ಶ್ರೀಲಂಕಾ ತಂಡವನ್ನ ಒತ್ತಡಕ್ಕೆ ಸಿಲುಕಿಸಿಬಹುದಿತ್ತು ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಫಾಲೋ-ಆನ್ ಜಾರಿಗೊಳಿಸುವ ಮೂಲಕ, ಭಾರತವು ಸ್ಕೋರ್ಬೋರ್ಡ್ ಒತ್ತಡದ ಹೊರೆಯಿಲ್ಲದೆ ಶ್ರೀಲಂಕಾ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ.
ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಯುವ ಬ್ಯಾಟ್ಸ್ಮನ್ ಸೋನಲ್ ದಿನುಷಾ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಫಾಲೋ-ಆನ್ನ ಒತ್ತಡದ ನಡುವೆಯೂ ಅಚಲ ಆತ್ಮವಿಶ್ವಾಸದಿಂದ ಆಡಿದ ದಿನುಷಾ, ಒಂದೇ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕಗಳನ್ನು ಬಾರಿಸಿದರು. ಇವರ ಬ್ಯಾಟ್ನಿಂದ ಎರಡು ಪಂದ್ಯದಿಂದ ಒಟ್ಟು 3 ಶತಕ ಬಂದಿದೆ. ಎರಡು ಪಂದ್ಯದಿಂದ ಸೇರಿ ಒಟ್ಟು ಭಾರತದ ವಿರುದ್ಧ 420 ರನ್ಗಳಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾಗೆ DRAW ಬರೆ – WTC ರೇಸ್ ನಿಂದ ಗೇಟ್ ಪಾಸ್?
ಲಂಕಾ ಸರಣಿಯಲ್ಲಿ ದೇವದತ್ ಪಡಿಕ್ಕಲ್ ಪಂದ್ಯ ಶ್ರೇಷ್ಠ ಪಡೆದಿದ್ದಾರೆ. ಶ್ರೀಲಂಕಾ ಪರ ಸೋನಲ್ ದಿನುಷಾ ಕೂಡ 420 ರನ್ ಬಾರಿಸಿದ್ದರೆ, ಯುವ ಸ್ಪಿನ್ನರ್ ಮಾನವ್ ಸುತಾರ್ 16 ವಿಕೆಟ್ ಉರುಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಗಳಾಗಿದ್ದರು. ಆದರೆ ಅಂತಿಮವಾಗಿ ದೇವದತ್ ಪಡಿಕ್ಕಲ್ ಸರಣಿಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೀಲಂಕಾ ವಿರುದ್ಧ ಸರಣಿ ಕ್ಲೀನ್ಸ್ವೀಪ್ ಸಾಧ್ಯವಾಗದಿದ್ದರೂ, ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಇದು ಗಿಲ್ ಅವರ ನಾಯಕತ್ವದಲ್ಲಿ ಭಾರತಕ್ಕೆ ದೊರೆತ ಮೊದಲ ವಿದೇಶಿ ಸರಣಿ ಜಯವಾಗಿದೆ. ಇನ್ನೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ಐದನೇ ಸ್ಥಾನದಲ್ಲಿದ್ದು, ಉಳಿದ ಏಳು ಟೆಸ್ಟ್ಗಳಲ್ಲಿ ಕನಿಷ್ಠ ಆರು ಗೆಲ್ಲಬೇಕಾದ ಒತ್ತಡದಲ್ಲಿದೆ.
ಲಂಕಾ ವಿರುದ್ಧ 2ನೇ ಟೆಸ್ಟ್ ಪಂದ್ಯ ಯಾಕೆ ಗೆಲ್ಲುವುದ್ದಕ್ಕೆ ಆಗಿಲ್ಲ ಅನ್ನೋದ್ದನ್ನ ಗಿಲ್ ಹೇಳಿದ್ದಾರೆ. ಡ್ರಾ ಆಗಿದ್ರಿಂದ ಎದುರಾಳಿಗಳಿಂದ ಕಲಿಯುವುದೂ ತುಂಬಾ ಇದೆ. ಎದುರಾಳಿ ತಂಡ ಒತ್ತಡದಲ್ಲಿದ್ದರೂ ಕೂಡ ಅದರಿಂದ ಚೇತರಿಸಿಕೊಂಡ ರೀತಿ ನೋಡಲು ಅದ್ಭುತವಾಗಿತ್ತು. ಆತಿಥೇಯರು ಅದ್ಭುತ ಪ್ರದರ್ಶನ ನೀಡಿದರು. ಅದರಲ್ಲೂ ತಂಡದ ಬ್ಯಾಟ್ಸ್ಮನ್ಗಳು ತುಂಬಾ ಚೆನ್ನಾಗಿ ಆಡಿದರು. ಅಲ್ಲದೆ ಅವರ ಕಡೆ ಸ್ವಲ್ಪ ಅದೃಷ್ಟವಿತ್ತು. ಹಾಗೇ ಟೆಸ್ಟ್ ಕ್ರಿಕೆಟ್ ಗೆದ್ದಿದೆ ಎಂದು ಗಿಲ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಮೊಹಮ್ಮದ್ ಸಿರಾಜ್ ವೇಗ ಕಡಿಮೆಯಾಗಿರುವ ಬಗ್ಗೆ ಗಿಲ್ ಸ್ಪಷ್ಟನೆ ನೀಡಿದ್ದಾರೆ. ಸಿರಾಜ್ಗೆ ಯಾವುದೇ ಗಾಯವಾಗಿಲ್ಲ, ಆದರೆ ದೀರ್ಘ ವಿರಾಮದ ಬಳಿಕ ಲಯ ಮತ್ತು ಸಂಪೂರ್ಣ ಪಂದ್ಯ ಫಿಟ್ನೆಸ್ ಮರಳಿ ಪಡೆಯುತ್ತಿದ್ದಾರೆ ಎಂದು ಗಿಲ್ ತಿಳಿಸಿದ್ದಾರೆ.
ಇಟಿಪಿಎಲ್ನ ಮೊದಲ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮಾಲೀಕತ್ವದ ಡಬ್ಲಿನ್ ಗಾರ್ಡಿಯನ್ಸ್ ತಂಡ ಬೆಲ್ಫಾಸ್ಟ್ ವುಲ್ವ್ಸ್ ವಿರುದ್ಧ 52 ರನ್ಗಳ ಆಘಾತಕಾರಿ ಸೋಲು ಅನುಭವಿಸಿದೆ. ಬೆಲ್ಫಾಸ್ಟ್ ವುಲ್ವ್ಸ್ 184 ರನ್ ಕಲೆಹಾಕಿದರೆ, ಡಬ್ಲಿನ್ ಗಾರ್ಡಿಯನ್ಸ್ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಮಾರ್ಕ್ ಚಾಪ್ಮನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅರ್ಧಶತಕ ಗಳಿಸಿ ತಂಡಕ್ಕೆ ನೆರವಾದರು.
2026ರ ಮಹಿಳಾ ಟಿ20 ಏಷ್ಯಾಕಪ್ ಇಂದು ದುಬೈನಲ್ಲಿ ಆರಂಭವಾಗುತ್ತಿದೆ. ಎಂಟು ತಂಡಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಆಗಸ್ಟ್ 30ರಂದು ಥಾಯ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಸೆಪ್ಟೆಂಬರ್ 5ರಂದು ಪಾಕಿಸ್ತಾನ ಎದುರು ಸೆಣಸಲಿದೆ. ಮಹಿಳಾ ಏಷ್ಯಾಕಪ್ಗೆ ಮುನ್ನ ನಾಯಕಿ ಹರ್ಮನ್ಪ್ರೀತ್ ಕೌರ್, ಭಾರತ ಯಾವುದೇ ನಿರ್ದಿಷ್ಟ ಎದುರಾಳಿಯ ಮೇಲೆ ಗಮನ ಕೇಂದ್ರೀಕರಿಸುವುದಿಲ್ಲ ಎಂದು ಹೇಳಿದ್ದಾರೆ
ಭಾರತದ ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. 12 ಪಂದ್ಯಗಳ ಮಲ್ಟಿ-ಫಾರ್ಮ್ಯಾಟ್ ಸರಣಿಯ ಟಿಕೆಟ್ಗಳ ಪ್ರೀ-ಸೇಲ್ ಆರಂಭವಾದ ಮೊದಲ 48 ಗಂಟೆಗಳಲ್ಲಿ 26 ಸಾವಿರ ಟಿಕೆಟ್ಗಳು ಮಾರಾಟವಾಗಿವೆ. ಹಲವು ಪಂದ್ಯಗಳು ಹೌಸ್ಫುಲ್ ಆಗುವ ನಿರೀಕ್ಷೆಯಿದೆ. ಅಕ್ಟೋಬರ್ನಿಂದ ಈ ಸರಣಿ ಆರಂಭ ಆಗಲಿದೆ.
ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರೋ ಎರಡನೇ ಟೆಸ್ಟ್ನಲ್ಲಿ ಪಾಕ್ ಆಟಗಾರ ಮೊಹಮ್ಮದ್ ಅಬ್ಬಾಸ್ ಅದ್ಭುತ ಬೌಲಿಂಗ್ ಮಾಡಿದರು. ಇಂಗ್ಲೆಂಡ್ 80 ರನ್ಗಳಿಸಿದ್ದ ವೇಳೆಗೆ ಅಬ್ಬಾಸ್ ನಾಲ್ಕು ವಿಕೆಟ್ ತೆಗೆದಿದ್ರು, ಬಳಿಕ ಜೋರ್ಡನ್ ಕಾಕ್ಸ್ ಮತ್ತು ಜೇಮಿ ಸ್ಮಿತ್ ಅರ್ಧಶತಕಗಳಿಂದ ತಂಡವನ್ನು ಸಂಕಷ್ಟದಿಂದ ಹೊರತಂದರು. ಅಂತಿಮವಾಗಿ ಅಬ್ಬಾಸ್ ನಾಲ್ಕು ವಿಕೆಟ್, ಮೊಹಮ್ಮದ್ ಅಲಿ ಮೂರು ವಿಕೆಟ್ ಕಬಳಿಸಿ, ಇಂಗ್ಲೆಂಡ್ನನ್ನ ಮೊದಲ ದಿನ 249 ರನ್ಗಳಿಗೆ ಕಟ್ಟು ಹಾಕಿದ್ರು.

ನೋಡಿರಿ

