3 ದಿನಗಳಲ್ಲಿ ಮತ್ತೊಂದು ಮಹಾ ಪ್ರವಾಹ – ನೇಪಾಳಕ್ಕೆ ಎಚ್ಚರಿಕೆ ಕೊಟ್ಟ ಚೀನಾ

3 ದಿನಗಳಲ್ಲಿ ಮತ್ತೊಂದು ಮಹಾ ಪ್ರವಾಹ –   ನೇಪಾಳಕ್ಕೆ ಎಚ್ಚರಿಕೆ ಕೊಟ್ಟ ಚೀನಾ

ನೇಪಾಳದಲ್ಲಿ ದಿಢೀರ್ ಪ್ರವಾಹದಿಂದ ಭಾರಿ ವಿನಾಶ ಸಂಭವಿಸಿರುವ ನಡುವೆಯೇ, ನೆರೆಯ ರಾಷ್ಟ್ರ ಚೀನಾ ಮತ್ತೊಂದು ಭೀಕರ ಅಪಾಯದ ಎಚ್ಚರಿಕೆ ನೀಡಿದೆ. ನೇಪಾಳ-ಟಿಬೆಟ್ ಗಡಿ ಭಾಗದಲ್ಲಿರುವ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳ ಸಂಗಮದ ಬಳಿ ನಿರ್ಮಾಣವಾಗಿರುವ ‘ತಡೆಗೋಡೆ ಸರೋವರ’ ಮುಂದಿನ 72 ಗಂಟೆಗಳಲ್ಲಿ ಒಡೆದುಹೋಗುವ ಅಪಾಯವಿದೆ ಎಂದು ಚೀನಾ ಎಚ್ಚರಿಸಿದೆ. ಚೀನಾದಲ್ಲಿ ಈಗಾಗಲೇಉಂಟಾಗಿರುವ ಪ್ರಕೃತಿ ವಿಕೋಪದ ನಡುವೆ ಹೊಸದಾಗಿ ಉಂಟಾಗಿರುವ ಕೃತಕ ಸರೋವರವು ಆತಂಕವನ್ನು  ಹೆಚ್ಚಿಸಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಫಲಾನುಭವಿಗಳಿಗೆ BIG UPDATE! ರಿ-ವೆರಿಫಿಕೇಶನ್ ಅರ್ಜಿ ಸಲ್ಲಿಸೋದು ಹೇಗೆ?

ನೇಪಾಳ-ಚೀನಾ ಗಡಿಯ ನದಿ ತಡೆ ಪ್ರದೇಶದಲ್ಲಿ ಸರೋವರ ನಿರ್ಮಾಣವಾಗಿರುವ ಕುರಿತು ಚೀನಾ ಸರ್ಕಾರದಿಂದ ಮಾಹಿತಿ ಬಂದಿದೆ ಎಂದು ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ ದೃಢಪಡಿಸಿದೆ. ಚೀನಾ ಸರ್ಕಾರವು ಈ ಮಾಹಿತಿಯನ್ನು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಹಸ್ತಾಂತರಿಸಿದೆ. ಈ ಕೃತಕ ಸರೋವರ ಉಂಟಾಗಿರುವ ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೋ ನದಿಗಳು ಟಿಬೆಟ್‌ನಲ್ಲಿ ಹುಟ್ಟಿ ನೇಪಾಳವನ್ನು ಪ್ರವೇಶಿಸುತ್ತವೆ. ಇವೆರಡೂ ನೇಪಾಳದ ‘ಭೋಟೇ ಕೋಶಿ’ ನದಿ ವ್ಯವಸ್ಥೆಯ ಪ್ರಮುಖ ಭಾಗಗಳಾಗಿವೆ. ಒಂದು ವೇಳೆ ಈ ಸರೋವರ ಒಡೆದರೆ ನದಿಯ ಕೆಳಭಾಗದಲ್ಲಿ ಮತ್ತೊಮ್ಮೆ ಪ್ರವಾಹದ ರೌದ್ರನರ್ತನ ಉಂಟಾಗಲಿದೆ.

ಬುಧವಾರವಷ್ಟೇ ಇದೇ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ 350ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈಗ ಈ ಸರೋವರ ಒಡೆದರೆ, ನದಿಯ ಕೆಳಭಾಗದಲ್ಲಿರುವ ರಸುವಾ, ತ್ರಿಶೂಲಿ ಹಾಗೂ ನುವಾಕೋಟ್ ಜಿಲ್ಲೆಗಳ ಗ್ರಾಮಗಳಿಗೆ ಮತ್ತೊಮ್ಮೆ ಭಾರಿ ಪ್ರವಾಹದ ಅಲೆ ಅಪ್ಪಳಿಸುವ ಆತಂಕವಿದೆ. ಹೀಗಾಗಿ, ನೇಪಾಳ ಸರ್ಕಾರ ನದಿ ದಂಡೆಯ ಸೌಮ್ಯ ಪ್ರದೇಶಗಳಲ್ಲಿರುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚನೆ ನೀಡಿದೆ.

Kishor KV

Leave a Reply

Your email address will not be published. Required fields are marked *