ಟೀಂ ಇಂಡಿಯಾಗೆ DRAW ಬರೆ – WTC ರೇಸ್ ನಿಂದ ಗೇಟ್ ಪಾಸ್?
7 ಪಂದ್ಯ ಗೆದ್ರೂ ಸಿಗಲ್ಲ ಟಿಕೆಟ್?

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡೋಕೆ ಅವಕಾಶ ಇದ್ರೂ ಭಾರತ ಅದನ್ನ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಸರಣಿ ಗೆದ್ರೂ ಕೊನೇ ಪಂದ್ಯ ಡ್ರಾನಲ್ಲಿ ಕೊನೆಯಾಯ್ತಲ್ಲ ಅನ್ನೋ ಬೇಸರ ಅಂತೂ ಇದ್ದೇ ಇದೆ. ಌಂಡ್ ಈ ರಿಸಲ್ಟ್ ಭಾರತದ ಡಬ್ಲ್ಯೂಟಿಸಿ ಜರ್ನಿ ಮೇಲೂ ಬಿಗ್ ಎಫೆಕ್ಟ್ ಆಗುವಂತೆ ಮಾಡಿದೆ.
ಇದನ್ನೂ ಓದಿ : 1 ಪಂದ್ಯ.. 11 NO-BALL – ಲಂಕಾಗೆ ಲೈಫ್ ಕೊಟ್ಟ ಭಾರತ
ಗಾಲೆಯಲ್ಲಿ ಪಂದ್ಯ ಗೆದ್ದ ಭಾರತಕ್ಕೆ ಕೊಲೊಂಬೊದಲ್ಲಿ ಗೆಲುವು ಸಿಗ್ಲಿಲ್ಲ. ಕೊನೆಯ ದಿನದಾಟದಲ್ಲಿ ಲಂಕನ್ನರು ನೀಡಿದ ಫೈಟ್ನಿಂದ ಕೊನೆಗೆ ಡ್ರಾ ಮಾಡಿಕೊಳ್ಳದೆ ಬೇರೆ ದಾರಿಯೂ ಇರ್ಲಿಲ್ಲ. ಆದ್ರಿಲ್ಲಿ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆದ್ದಿದ್ರಿಂದ ಭಾರತಕ್ಕೆ ಲಾಭ ಆಗ್ತಿತ್ತು. 2027ರ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ರೇಸ್ನಲ್ಲಿ ಸ್ವಲ್ಪ ಕಾನ್ಫಿಡೆನ್ಸ್ ಇರ್ತಿತ್ತು. ಬಟ್ ಈಗ ಕೊನೇ ಪಂದ್ಯ ಡ್ರಾ ಆಗಿದ್ರಿಂದ ಬಿಸಿಯಂತೂ ತಟ್ಟಿದೆ. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಗೆದ್ದಿದ್ದ ಭಾರತ ಸರಣಿಯನ್ನು 1-0 ಇಂದ ಮುಗಿಸಿದರೂ, ಕೊಲೊಂಬೊದಲ್ಲಿ ಗೆಲುವಿನ ಅವಕಾಶ ಕೈಚೆಲ್ಲಿದ್ದು ಭಾರಿ ನಷ್ಟ ಉಂಟುಮಾಡಿದೆ. WTCಯಲ್ಲಿ ಸ್ಥಾನವನ್ನು ಒಟ್ಟು ಪಾಯಿಂಟ್ಸ್ಗಿಂತ Points Percentage ನಿರ್ಧರಿಸುತ್ತದೆ. ಒಂದು ಪಂದ್ಯದ ಗೆಲುವಿಗೆ 12 ಅಂಕಗಳು ಸಿಕ್ರೆ ಡ್ರಾಗೆ 4 ಪಾಯಿಂಟ್ಸ್ ಸಿಗುತ್ತವೆ. ಅಗ್ರ ಎರಡು ತಂಡಗಳೇ ಫೈನಲ್ಗೆ ಹೋಗುತ್ತವೆ.
ಗೆಲುವೊಂದೇ ಮಂತ್ರ!
ಭಾರತ ತಂಡಕ್ಕೆ ಪ್ರಸ್ತುತ ಡಬ್ಲ್ಯೂಟಿಸಿ ಸೈಕಲ್ ನಲ್ಲಿ ಕೇವಲ 7 ಟೆಸ್ಟ್ ಪಂದ್ಯ
ಫೈನಲ್ ರೇಸ್ ನಲ್ಲಿ ಭದ್ರವಾಗಿ ಉಳಿಯಲು ಇನ್ನುಂದೆ ಗೆಲ್ಲೋದೊಂದೇ ದಾರಿ
7 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಲೇಬೇಕಾದ ಪರಿಸ್ಥಿತಿ
ಭಾರತ ತನ್ನ ಎಲ್ಲ ಪಂದ್ಯ ಗೆದ್ದರೂ ಬೇರೆ ತಂಡಗಳ ಫಲಿತಾಂಶಕ್ಕಾಗಿ ಡಿಪೆಂಡ್
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳ ಮೇಲೆ ಡಿಪೆಂಡ್
ಇಲ್ಲಿ ನೆಕ್ಸ್ಟ್ ಎರಡು ಸರಣಿಗಳಿದ್ರೂ ನ್ಯೂಜಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ ಸವಾಲಾಗುತ್ತೆ. ಭಾರತ 2009ರ ನಂತರ ಅಲ್ಲಿ ಟೆಸ್ಟ್ ಗೆದ್ದಿಲ್ಲದಿರುವುದು ದೊಡ್ಡ ಸವಾಲು. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದೆ. ಇದರಲ್ಲಿ ಭಾರತ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಹೀಗಾಗಿ ತುಂಬಾನೇ ಪ್ರೆಶರ್ ಕ್ರಿಯೇಟ್ ಆಗುತ್ತೆ.

ನೋಡಿರಿ

