ತುತ್ತು ತಿನ್ನಿಸಿ ಕ್ಷಮಿಸಲ್ಲ ಎಂದ ರಾಖಿ ಸಾವಂತ್ – ಮೈಸೂರಿನ ಆದಿಲ್ ಖಾನ್​ನನ್ನ ಬಂಧಿಸಿದ್ದೇಕೆ ಪೊಲೀಸರು..!?

ತುತ್ತು ತಿನ್ನಿಸಿ ಕ್ಷಮಿಸಲ್ಲ ಎಂದ ರಾಖಿ ಸಾವಂತ್ – ಮೈಸೂರಿನ ಆದಿಲ್ ಖಾನ್​ನನ್ನ ಬಂಧಿಸಿದ್ದೇಕೆ ಪೊಲೀಸರು..!?

ನಟಿ ರಾಖಿ ಸಾವಂತ್ ಹಾಗೂ ಆದಿಲ್ ಖಾನ್ ನಡುವಿನ ಸಮರ ಮತ್ತೊಂದು ಹಂತ ತಲುಪಿದೆ. ರಾಖಿ ದೂರಿನ ಮೇರೆಗೆ ಆದಿಲ್ ಖಾನ್​ನನ್ನ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ವಿವಾದಗಳಿಂದಲೇ ಸುದ್ದಿಯಾಗಿದ್ದ ಈ ಜೋಡಿಯ ಮದುವೆ ಕೆಲ ತಿಂಗಳ ಹಿಂದಷ್ಟೇ ನೆರವೇರಿತ್ತು. ಆದರೆ ಈಗ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ದಂಪತಿ ನಡುವಿನ ಗಲಾಟೆ ಬೀದಿಗೆ ಬಂದಿದೆ. ಪತಿ  ವಿರುದ್ಧ ರಾಖಿ ಸಾವಂತ್​ ದೂರು ದಾಖಲಿಸಿದ್ದು, ಮುಂಬೈನ ಓಶಿವರ ಪೊಲೀಸರು ಆದಿಲ್​ ಖಾನ್​ನನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಸಾಲ ಮಾಡದಿದ್ದರೂ ಕಾರು ಹರಾಜು! ಮಾಲೀಕರು ಮಾಡಿದ ತಪ್ಪಾದ್ರೂ ಏನು ಗೊತ್ತಾ?

ಈ ಬಗ್ಗೆ ಸ್ವತಃ ರಾಖಿ ಸಾವಂತ್​ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರ ಒಂದು ವಿಡಿಯೋ ವೈರಲ್​ ಆಗಿದೆ. ಪತಿಗೆ ರಾಖಿ ತುತ್ತು ತಿನ್ನಿಸಿದ ದೃಶ್ಯ ಆ ವಿಡಿಯೋದಲ್ಲಿದೆ. ಪರಸ್ತ್ರೀ ಜೊತೆ ಆದಿಲ್​ ಖಾನ್​ ಸಂಬಂಧ​ ಇಟ್ಟುಕೊಂಡಿದ್ದಾರೆ ಎಂದು ರಾಖಿ ಸಾವಂತ್​ ಆರೋಪಿಸಿದ್ದಾರೆ. ‘ಇದು ನಾಟಕ ಅಲ್ಲ. ಅವನು ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಹೊಡೆದಿದ್ದಾನೆ. ನನ್ನ ಹಣ ಕದ್ದಿದ್ದಾನೆ. ಆತ ಖುರಾನ್​ ಮೇಲೆ ಪ್ರಮಾಣ ಮಾಡಿದ್ದರೂ ಕೂಡ ನಂತರ ನನಗೆ ಮೋಸ ಮಾಡಿದ’ ಎಂದಿದ್ದಾರೆ.

ಕೆಲ ದಿನಗಳಿಂದ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ನಡುವೆ ಜಗಳ ನಡೆಯುತ್ತಲೇ ಇದೆ. ಸೋಮವಾರ (ಫೆ.6) ರಾತ್ರಿ ಇಬ್ಬರೂ ಒಂದೆಡೆ ಭೇಟಿ ಆಗಿ ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಈ ವೇಳೆ ಪತಿಗೆ ರಾಖಿ ಸಾವಂತ್​ ತುತ್ತು ತಿನ್ನಿಸಿದ್ದಾರೆ. ಆದಿಲ್ ಖಾನ್ ಕೂಡ ರಾಖಿ ಸಾವಂತ್ ಗೆ ತುತ್ತು ತಿನ್ನಿಸಿದ್ದಾರೆ. ಇಷ್ಟೆಲ್ಲ ನಡೆದ ನಂತರ ಆದಿಲ್​ ಖಾನ್​ ನನ್ನ ವಶಕ್ಕೆ ಪಡೆದಿದ್ದಾರೆ.

ನಿನ್ನೆಯಷ್ಟೇ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ರಾಖಿ ಸಾವಂತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಂಜೆ ರೆಸ್ಟೋರೆಂಟ್ ನಲ್ಲಿ ಆದಿಲ್ ಖಾನ್ ಜೊತೆ ಊಟ ಮಾಡುತ್ತಿದ್ದ ವಿಡಿಯೋವನ್ನೂ ಹಂಚಿಕೊಂಡಿದ್ದರು. ಆದಿಲ್ ನನ್ನ ಬಳಿ ಕ್ಷಮೆ ಕೇಳಲು ಬಂದಿದ್ದ, ನಾನು ಕ್ಷಮಿಸಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಇವತ್ತು ಬೆಳಗ್ಗೆ ತನ್ನನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ಆದಿಲ್ ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಹಾಗಾಗಿ ಮೈಸೂರು ಹುಡುಗ ಆದಿಲ್ ಸದ್ಯ ಪೊಲೀಸರ ವಶದಲ್ಲಿ ಇದ್ದಾನೆ.

 

View this post on Instagram

 

A post shared by @varindertchawla

 

suddiyaana