1 ಪಂದ್ಯ.. 11 NO-BALL – ಲಂಕಾಗೆ ಲೈಫ್ ಕೊಟ್ಟ ಭಾರತ
ಟೆಸ್ಟ್ ಗೂ ಫ್ರೀ ಹಿಟ್ ಬರುತ್ತಾ?

ಕೊಲೊಂಬೋದಲ್ಲಿ ನಡೆಯುತ್ತಿರೋ 2ನೇ ಟೆಸ್ಟ್ ಮ್ಯಾಚ್ನ ಕೊನೇ ದಿನ ಭಾರತಕ್ಕೆ ಬಿಗ್ ಶಾಕ್ ಎದುರಾಗಿದೆ. ಬೇಗನೇ ಆಲ್ಔಟ್ ಮಾಡಿ ಚೇಸಿಂಗ್ ಪ್ಲ್ಯಾನ್ ಮಾಡಿದ್ದ ಭಾರತಕ್ಕೆ ಲಂಕಾ ಬ್ಯಾಟರ್ಸ್ ನೀರು ಕುಡಿಸಿದ್ದಾರೆ. ಹಾಗೇ ಪಂದ್ಯದ ದಿಕ್ಕನ್ನೇ ಬದಲಿಸಿದ್ದಾರೆ. ಅಟ್ದಿ ಸೇಮ್ ಟೈಂ ಟೀಂ ಇಂಡಿಯಾ ಸ್ಪಿನ್ನರ್ಸ್ ಹಾಕಿರುವ ನೋ ಬಾಲ್ಗಳೇ ಲಂಕಾ ನಿಟ್ಟುಸಿರು ಬಿಡುವಂತೆ ಮಾಡಿದೆ. ಭಾರತದ ತಲೆಬಿಸಿ ಹೆಚ್ಚಿಸಿದೆ. ಇಲ್ಲಿಯೂ ಫ್ರೀ ಹಿಟ್ ಕೊಡಿ ಎನ್ನುವ ಸಲಹೆಗಳು ಕೇಳಿ ಬಂದಿವೆ.
ಇದನ್ನೂ ಓದಿ : 4 ವಿಕೆಟ್.. ಭಾರತಕ್ಕೆ ಗೆಲುವು – ಡ್ರಾ ಟಾರ್ಗೆಟ್ ನಲ್ಲಿದ್ಯಾ ಲಂಕಾ?
ಕೊಲೊಂಬೊ ಟೆಸ್ಟ್ನಲ್ಲಿ ಭಾರತದ ನೋ-ಬಾಲ್ ಸಮಸ್ಯೆಯೇ ಈಗ ದೊಡ್ಡ ಚರ್ಚೆಯಾಗಿದೆ. ಎರಡನೇ ಟೆಸ್ಟ್ನಲ್ಲಿ ಭಾರತದ ಸ್ಪಿನ್ನರ್ಗಳು ಹಲವು ಬಾರಿ ಓವರ್ಸ್ಟೆಪ್ ಮಾಡಿದ್ದು, ಅದರಲ್ಲೂ ಸಾರಾಂಶ್ ಜೈನ್ ಅಂತೂ ಒಂದೇ ದಿನ 4 ನೋ-ಬಾಲ್, ರವೀಂದ್ರ ಜಡೇಜಾ 1 ನೋ-ಬಾಲ್ ಹಾಕಿದ್ದಾರೆ. ಭಾರತ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆದ ಸಾಯಿರಾಜ್ ಬಹುತುಲೆ ಶಾಕಿಂಗ್ ಅಡ್ವೈಸ್ ನೀಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್ಸ್ ಕಡೆಯಿಂದ 11 ನೋ ಬಾಲ್!
ಕೊಲೊಂಬೊ ಟೆಸ್ಟ್ನಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 503 ರನ್ ಗಳಿಸಿ ಫಾಲೋ ಆನ್ ಹೇರಿದ್ರಿಂದ ಈಸಿಯಾಗಿ ಗೆಲ್ತಾರೆ ಅನ್ನಿಸ್ತಿತ್ತು. ಆದ್ರೆ ಭಾರತದ ಸ್ಪಿನ್ನರ್ಗಳ ಕೇರ್ಲೆಸ್ ಈಗ ಪಂದ್ಯದ ಫಲಿತಾಂಶ ಬೇರೆಯದ್ದೇ ಆಗಲಿದೆ. ಐದನೇ ದಿನದಾಟ ಆರಂಭವಾಗಿ 2 ಗಂಟೆ ಕಳೆದ್ರೂ ಒಂದೇ ಒಂದು ವಿಕೆಟ್ ತೆಗೆಯೋಕೆ ಆಗ್ಲಿಲ್ಲ. ಇದು ಬೌಲಿಂಗ್ ಫೇಲ್ಯೂರ್ ಅಲ್ದೇ ಮತ್ತಿನ್ನೇನು ಅಲ್ಲ. ಯಾಕಂದ್ರೆ ಈ ಮ್ಯಾಚಲ್ಲಿ ಭಾರತದ ಸ್ಪಿನ್ನರ್ಗಳು 11 ನೋ-ಬಾಲ್ಗಳನ್ನು ಎಸೆದಿದ್ದಾರೆ. ಅದ್ರಲ್ಲೂ ಸಾರಾಂಶ್ ಜೈನ್ ಒಂದೇ ದಿನ 4 ನೋ-ಬಾಲ್, ರವೀಂದ್ರ ಜಡೇಜಾ ಕೂಡ ನೋ-ಬಾಲ್ ಎಸೆದಿದ್ದಾರೆ. 2021 ರಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ನೋ-ಬಾಲ್ ಎಸೆದ ಸ್ಪಿನ್ನರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 88 ನೋ-ಬಾಲ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಜಡೇಜಾ ನೋ-ಬಾಲ್ ಎಸೆದಿದ್ದರು. ಅಷ್ಟೇ ಅಲ್ಲದೆ, ಧನಂಜಯ ಡಿ ಸಿಲ್ವಾ ನೀಡಿದ ಕ್ಯಾಚ್ ಸ್ಲಿಪ್ನಲ್ಲಿದ್ದ ಕೆ. ಎಲ್. ರಾಹುಲ್ ಕೈ ಸೇರಿದರೂ, ಅದು ಜಡೇಜಾ ಅವರ ‘ನೋ-ಬಾಲ್’ ಆಗಿದ್ದರಿಂದ ಶ್ರೀಲಂಕಾ ಬ್ಯಾಟರ್ಗೆ ಜೀವದಾನ ಸಿಕ್ಕಿತ್ತು. ಹಾಗೇ ಕಳೆದ ಐದು ವರ್ಷಗಳಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಸ್ಪಿನ್ನರ್ಗಳು ಎಸೆದ ಅತಿ ಹೆಚ್ಚು ನೋ-ಬಾಲ್ಗಳು ಇದಾಗಿವೆ. ಭಾರತದ ಆಟಗಾರರ ಸತತ ನೋ ಬಾಲ್ಗಳಿಂದಲೇ ಲಂಕಾ ಬ್ಯಾಟರ್ಗಳ ಕಾನ್ಫಿಡೆಂಟಾಗಿ ಬ್ಯಾಟ್ ಬೀಸೋಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಭಾರತದ ಬೌಲರ್ಗಳ ಪ್ರೆಶರ್ ಕ್ಲಿಯರ್ ಆಗಿ ಗೊತ್ತಾಗಿದೆ. ಇದೇ ಕಾರಣಕ್ಕೆ ಭಾರತ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆದ ಸಾಯಿರಾಜ್ ಬಹುತುಳೆ ಸ್ಪೆಷಲ್ ಅಡ್ವೈಸ್ ನೀಡಿದ್ದಾರೆ.
ಸೀಮಿತ ಓವರ್ ಗಳಂತೆ ಟೆಸ್ಟ್ ಗೂ ಫ್ರೀ ಹಿಟ್ ಬರುತ್ತಾ?
ನೋ ಬಾಲ್ ವಿಚಾರದಲ್ಲಿ ಸೀಮಿತ ಓವರ್ ಗಳು ಮತ್ತು ಟೆಸ್ಟ್ ಕ್ರಿಕೆಟ್ಗೆ ಬೇಗೆ ಬೇರೆ ನಿಯಮಗಳಿವೆ. ಹೀಗಾಗಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿರುವಂತೆ ಟೆಸ್ಟ್ ಕ್ರಿಕೆಟ್ನಲ್ಲೂ ‘ಫ್ರೀ-ಹಿಟ್’ ನಿಯಮವನ್ನು ತರಬೇಕು ಎಂದು ಅವರು ಐಸಿಸಿಗೆ ಸಾಯಿರಾಜ್ ಸಲಹೆ ನೀಡಿದ್ದಾರೆ. ಯಾಕಂದ್ರೆ ಟಿ-20ಐ ಮತ್ತು ಏಕದಿನದಲ್ಲಿ ನೋ ಬಾಲ್ ಆದರೆ ಆ ಎಸೆತವನ್ನ ಬೌಲರ್ ಮತ್ತೆ ಹಾಕ್ಬೇಕು ಆಗ ಅದು ಫ್ರೀ ಹಿಟ್ ಆಗುತ್ತೆ. ಆದ್ರೆ ಟೆಸ್ಟ್ ಕ್ರಿಕೆಟ್ನಲ್ಲಿ ನೋ ಬಾಲ್ ಆದ್ರೆ ನೆಕ್ಸ್ಟ್ ಬಾಲ್ ಫ್ರೀ ಹಿಟ್ ಇರೋದಿಲ್ಲ. ಟೆಸ್ಟ್ನಲ್ಲಿ ನೋ-ಬಾಲ್ನ ಲಾಸ್ ಅಂದ್ರೆ 1 ಹೆಚ್ಚುವರಿ ರನ್ + ಹೆಚ್ಚುವರಿ ಬಾಲ್ + ಸಿಗಬಹುದಾದ ವಿಕೆಟ್ ಕೈತಪ್ಪುವುದು. ಆದರೆ T20/ODIನಲ್ಲಿ ಇದಕ್ಕೆ ಹೆಚ್ಚುವರಿಯಾಗಿ Free Hitನಿಂದ ದೊಡ್ಡ ಬೌಂಡರಿ/ಸಿಕ್ಸರ್ ಹೊಡೆಯುವ ಅವಕಾಶ ಕೂಡ ಸಿಗುತ್ತದೆ. ಹೀಗಾಗಿ ಟೆಸ್ಟ್ನಲ್ಲೂ ಫ್ರೀ-ಹಿಟ್ ನಿಯಮ ಜಾರಿಗೆ ಬಂದರೆ, ಯಾವುದೇ ತಂಡವು ಹೆಚ್ಚುವರಿ ರನ್ ಹಾಗೂ ಬಾಲ್ ಹಾಕೋಕೆ ಹೆದರುತ್ತಾರೆ. ಆಗ ನೋ-ಬಾಲ್ ಎಸೆಯುವುದನ್ನು ಕಡ್ಡಾಯವಾಗಿ ನಿಯಂತ್ರಿಸುತ್ತಾರೆ ಅನ್ನೋದು ಅವ್ರ ಮಾತಿನ ಉದ್ದೇಶ. ಒಟ್ನಲ್ಲಿ ಗಾಲೆಯಲ್ಲಿ ಸ್ಪಿನ್ ಬೌಲರ್ಗಳ ಅಬ್ಬರದಲ್ಲೇ ಗೆದ್ದಿದ್ದ ಭಾರತ ಈಗ ಕೊಲೊಂಬೊದಲ್ಲಿ ಅದೇ ಬೌಲರ್ಸ್ ಗಳಿಂದ ಗೆಲ್ಲೋ ಪಂದ್ಯವನ್ನ ಡ್ರಾ ಮಾಡಿಕೊಳ್ಳೋ ಸ್ಥಿತಿಗೆ ಬಂದಿದೆ.

ನೋಡಿರಿ

