ಆಗ ವೈಭವ್.. ಈಗ ಜೈಸ್ವಾಲ್ – ಪಂದ್ಯದಿಂದ ನಿಷೇಧ ಮಾಡ್ಬೇಕಿತ್ತಾ?
ICC ದಂಡಾಸ್ತ್ರದಿಂದ ಅಡ್ಡದಾರಿ!

ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಆಡ್ಬೇಕು ಅನ್ನೋದೇನೋ ಸರಿ. ಆದ್ರೆ ಅದಕ್ಕೂ ಒಂದಷ್ಟು ಲಿಮಿಟ್ಸ್ ಅಂತಾ ಇರುತ್ತೆ. ಅದನ್ನ ಮೀರಿ ಪರಸ್ಪರ ಆಟಗಾರರು ಫಿಸಿಕಲ್ ಅಸಲ್ಟ್ವರೆಗೂ ಹೋಗ್ತಿರೋದು ಡೇಂಜರಸ್ ಬೆಳವಣಿಗೆ. ಇತ್ತೀಚೆಗೆ ಲಂಕಾ ಸರಣಿ ವೇಳೆ ಯಶಸ್ವಿ ಜೈಸ್ವಾಲ್ ವರ್ತನೆ ಬಗ್ಗೆಯೂ ಅಸಮಾಧಾನ ಕೇಳಿ ಬಂದಿತ್ತು. ಆದ್ರೆ ಈ ಥರನಾದ ಬಿಹೇವಿಯರ್ಗೆ ಸಿಗ್ತಿರೋ ಪನಿಷ್ಮೆಂಟ್ ಕೂಡ ಚರ್ಚೆಗೆ ಗ್ರಾಸವಾಗಿದೆ. ವೈಭವ್ ಸೂರ್ಯವಂಶಿ ಹೆಸರೂ ಥಳಕು ಹಾಕಿಕೊಂಡಿದೆ.
ಇದನ್ನೂ ಓದಿ : 4 ವಿಕೆಟ್.. ಭಾರತಕ್ಕೆ ಗೆಲುವು – ಡ್ರಾ ಟಾರ್ಗೆಟ್ ನಲ್ಲಿದ್ಯಾ ಲಂಕಾ?
ಟೀಂ ಇಂಡಿಯಾದಲ್ಲಿ ಈಗ ಯುವಆಟಗಾರರದ್ದೇ ದರ್ಬಾರ್. ಅದ್ರಲ್ಲೂ ಟಿ-20ಐ ಮತ್ತು ಟೆಸ್ಟ್ ಫಾರ್ಮೆಟ್ನಲ್ಲಂತೂ ಯಂಗ್ಸ್ಟರ್ಗಳೇ ತುಂಬಿದ್ದಾರೆ. ಈಗಷ್ಟೇ ಕೆರಿಯರ್ ಗ್ರೋತ್ ಆಗ್ತಿದ್ದು ಇಂಥಾ ಟೈಮಲ್ಲಿ ಅವ್ರ ವರ್ತನೆಗಳು ಸರಿಯಾಗಿ ಇರಬೇಕು ಅನ್ನೋದು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ವಾದ. ಅದ್ರಲ್ಲೂ ವೈಭವ್ ಸೂರ್ಯವಂಶಿ ಮತ್ತು ಯಶಸ್ವೀ ಜೈಸ್ವಾಲ್ ಹೆಸರನ್ನ ಪ್ರಸ್ತಾಪಿಸಿ ವಾರ್ನಿಂಗ್ ಕೊಟ್ಟಿದ್ದಾರೆ.
ದಂಡ ಸಾಕಾಗಲ್ಲ.. ಕಟ್ಟುನಿಟ್ಟಿನ ಶಿಕ್ಷೆ ಕೊಡಿ ಎಂದ ಮಂಜ್ರೇಕರ್!
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ಅಸಿತಾ ಫರ್ನಾಂಡೋ ನಡುವೆ ಕ್ಲಾಶ್ ಆಗಿತ್ತು. ಫರ್ನಾಂಡೋ ಟೀಸ್ ಮಾಡಿದ್ರೆ ಜೈಸ್ವಾಲ್ ಹೆಲ್ಮೆಟ್ನಿಂದ ಡಿಚ್ಚಿ ಕೊಟ್ಟಿದ್ರು. ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಇವರಿಬ್ಬರಿಗೂ ಅವರ ಪಂದ್ಯದ ಸಂಭಾವನೆ ಶೇ 25ರಷ್ಟು ದಂಡ ವಿಧಿಸಲಾಗಿದೆ. ಒಂದೊಂದು ಡಿಮೆರಿಟ್ ಅಂಕ ನೀಡ್ಲಾಗಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ತಮ್ಮ ಒಪೀನಿಯನ್ ಶೇರ್ ಮಾಡಿರೋ ಮಂಜ್ರೇಕರ್, ಈ ದಂಡವು ಸಾಕಾಗುವುದಿಲ್ಲ. ಕ್ರಿಕೆಟ್ನಲ್ಲಿ ಯಾವುದೇ ರೀತಿಯ ಫಿಸಿಕಲ್ ಅಸಲ್ಟ್ಗೆ ಅವಕಾಶವಿರದಂತೆ ನೋಡಿಕೊಳ್ಳಲು ಕಠಿಣ ಶಿಕ್ಷೆಯನ್ನೇ ನೀಡ್ಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೇ ವೈಭವ್ ಸೂರ್ಯವಂಶಿ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ವರ್ಷದ ಆರಂಭದಲ್ಲಿ ಎ ತಂಡಗಳ ತ್ರಿಕೋನ ಸರಣಿಯ ವೇಳೆ ಶ್ರೀಲಂಕಾ ‘ಎ’ ತಂಡದ ಆಟಗಾರರೊಂದಿಗೆ ವೈಭವ್ ಸೂರ್ಯವಂಶಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ರು. ಆಗಲೂ ಕೂಡ ಸಣ್ಣಪುಟ್ಟ ದಂಡ ವಿಧಿಸಿದ್ರು. ಇಂತಹ ವರ್ತನೆಯನ್ನು ಹೀಗೆಯೇ ಮುಂದುವರಿಯಲು ಬಿಟ್ಟರೆ, ಅವರು ಅಂತಹ ವರ್ತನೆಯನ್ನೇ ಪುನರಾವರ್ತಿಸುವಂತೆ ನೀವು ಅವರನ್ನು ಟ್ರೇನ್ ಮಾಡಿದಂತಾಗುತ್ತೆ. ಇದು ಕ್ರೀಡೆಗೆ ಅದ್ರಲ್ಲೂ ಮುಖ್ಯವಾಗಿ ಭವಿಷ್ಯಕ್ಕೂ ಒಳ್ಳೆಯದಲ್ಲ ಎಂದಿದ್ದಾರೆ.
ಸೂರ್ಯವಂಶಿಯನ್ನ ಪಂದ್ಯದಿಂದಲೇ ಕೈಬಿಡುತ್ತಿದ್ರಾ ಮಂಜ್ರೇಕರ್?
ಅಷ್ಟಕ್ಕೂ ವೈಭವ್ ಸೂರ್ಯವಂಶಿ ವರ್ತನೆ ಬಗ್ಗೆ ಮಂಜ್ರೇಕರ್ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ರು. ಇಂಡಿಯಾ ‘A’ ಪರ ಆಡುತ್ತಿದ್ದ ವೇಳೆ ಶ್ರೀಲಂಕಾ ‘A’ ವಿರುದ್ಧದ ಪಂದ್ಯದಲ್ಲಿ ವಿಷೆನ್ ಹಲಂಬಾಗೆ ಜೊತೆ ವೈಭವ್ ಕಿರಕ್ ಮಾಡ್ಕೊಂಡಿದ್ರು. ಸೂಪರ್ ಓವರ್ ಬಳಿಕ ನಡೆದ ಈ ಘಟನೆಯಲ್ಲಿ ತಳ್ಳಾಟದ ದೃಶ್ಯಗಳು ಭಾರೀ ಚರ್ಚೆಗೆ ಕಾರಣವಾಗಿದ್ದವು. ನಂತ್ರ ವೈಭವ್ ಸೇರಿದಂತೆ ಕೆಲ ಆಟಗಾರರಿಗೆ ದಂಡ ವಿಧಿಸಲಾಗಿತ್ತು. ಆದ್ರೆ ಮಂಜ್ರೇಕರ್ ತಾವು ಇಂಡಿಯಾ ‘A’ ಮ್ಯಾನೇಜ್ಮೆಂಟ್ನಲ್ಲಿದ್ದರೆ, ಮುಂದಿನ ಪಂದ್ಯದಿಂದ ವೈಭವ್ ಅವರನ್ನು ಕೈಬಿಡುತ್ತಿದ್ದೆ ಎಂದಿದ್ರು. ಯುವ ಆಟಗಾರರಿಗೆ ಆನ್ ಫೀಲ್ಡ್ ಬಿಹೇವಿಯರ್ ಬಗ್ಗೆ ಸ್ಪಷ್ಟ ಸಂದೇಶ ನೀಡ್ಬೇಕು ಅನ್ನೋದು ಅವ್ರ ಮಾತಿನ ಉದ್ದೇವಾಗಿತ್ತು. ಈಗ ಜೈಸ್ವಾಲ್ ವಿಚಾರದಲ್ಲೂ ಜೈಸ್ವಾಲ್ ಮತ್ತು ಫೆರ್ನಾಂಡೊ ಇಬ್ಬರಿಗೂ 25% ಮ್ಯಾಚ್ ಫೀ ದಂಡ ಹಾಗೂ ತಲಾ ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ. ಆದ್ರೆ ಇಷ್ಟೇ ಸಾಕಾಗಲ್ಲ ಎಂದಿದ್ದಾರೆ. ಅಷ್ಟಕ್ಕೂ ಇಲ್ಲಿ ಮಂಜ್ರೇಕರ್ ಇದನ್ನ ಅಷ್ಟೊಂದು ಹೈಲೆಟ್ ಮಾಡೋಕೆ ಕಾರಣವೂ ಇದೆ. ಆನ್ಫೀಲ್ಡ್ನಲ್ಲಿ ಪ್ರೆಶರ್ ಕ್ರಿಯೇಟ್ ಮಾಡೋದು, ಸ್ಲೆಡ್ಜಿಂಗ್ ಮಾಡುವುದು, ಎಮೋಷನ್ ತೋರಿಸುವುದು ಇದೆಲ್ಲಾ ಕಾಮನ್. ಆದ್ರೆ ಫಿಸಿಕಲ್ ಕ್ಲಾಶ್, ತಳ್ಳಾಟ, ಹೆಲ್ಮೆಟ್ನಿಂದ ಡಿಚ್ಚಿ ಹೊಡ್ಯೋದು ಇವೆಲ್ಲಾ ಸಾಮಾನ್ಯ ಅಗ್ರೆಷನ್ ಎಂದು ಪರಿಗಣಿಸೋಕೆ ಸಾಧ್ಯನೇ ಇಲ್ಲ. ಯಾಕಂದ್ರೆ ಯುವ ಆಟಗಾರರನ್ನು ನೋಡಿಕೊಂಡು ಮುಂದಿನ ಪೀಳಿಗೆ ಬೆಳೆಯುತ್ತದೆ. ಹೀಗಾಗಿ ಸಣ್ಣಪುಟ್ಟ ತಪ್ಪು ಎಂದು ನಿರ್ಲಕ್ಷಿಸಿದರೆ, ನಾಳೆ ಅದೇ ವರ್ತನೆ ದೊಡ್ಡ ಸಮಸ್ಯೆಯಾಗಿ ಬದಲಾಗಬಹುದು ಅನ್ನೋದು ಅವ್ರ ಕನ್ಸರ್ನ್.

ನೋಡಿರಿ

