ಟಾಕ್ಸಿಕ್ ಮೊದಲ ದಿನದ ಗಳಿಕೆ ಎಷ್ಟು? – ನಟ ಯಶ್ ಹವಾ ಹೇಗಿದೆ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಮೊದಲ ದಿನವೇ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಮೊದಲ ದಿನವೇ ಟಾಕ್ಸಿಕ್ ಸಿನಿಮಾ ಕೋಟ್ಯಂತರ ರೂಪಾಯಿ ಗಳಿಕೆ ಕಂಡಿದೆ.
ಇದನ್ನೂ ಓದಿ:ಅಕ್ಕನ ತ್ಯಾಗ, ತಮ್ಮನ ಹಠ – ಟಾಕ್ಸಿಕ್ ಅನ್ನೋ ಭ್ರಮೆ! TOXIC FIRST REVIEW
ಟಾಕ್ಸಿಕ್ ಸಿನಿಮಾದ ಮೊದಲ ದಿನ ಭರ್ಜರಿ ಕಮಾಯಿ ಮಾಡಿದೆ. ಬಾಕ್ಸ್‌ಆಫೀಸ್ ಗಲ್ಲಾಪೆಟ್ಟಿಗೆ ಅಲ್ಲಾಡಿದೆ. ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಆ ಪೈಕಿ ಕರ್ನಾಟಕದಲ್ಲಿ 30.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 18.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ತಮಿಳುನಾಡಿನಲ್ಲಿ 6.75 ಕೋಟಿ ಕಲೆಕ್ಷನ್ ಮಾಡಿದರೆ ಕೇರಳದಲ್ಲಿ 2.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ.ವಿದೇಶಗಳಲ್ಲಿ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಮೂಲಕ ನಿನ್ನೆ ಒಂದು ದಿನ 24579 ಶೋಗಳಿಂದ ಅಂದಾಜು 140 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ.
ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಹೊರಡಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ಟಾಕ್ಸಿಕ್ ಸಿನಿಮಾ ತನ್ನ ಮೊದಲ ದಿನ ವಿಶ್ವಾದ್ಯಂತ 301.69 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಿಕೊಂಡಿದೆ. ಆ ಮೂಲಕ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಅತ್ಯಧಿಕ ಕಲೆಕ್ಷನ್ ಮಾಡಿದ ಭಾರತದ ಮೊಟ್ಟ ಮೊದಲ ಸಿನಿಮಾ ಟಾಕ್ಸಿಕ್ ಎಂದು ಕೆವಿಎನ್ ಸಂಸ್ಥೆ ಹೇಳಿಕೊಂಡಿದೆ.
ಭಾರತದಾದ್ಯಂತ ಸಂಜೆ 4 ಗಂಟೆಯ ವೇಳೆಗೆ ದೇಶಾದ್ಯಂತ ₹72.84 ಕೋಟಿ ನಿವ್ವಳ ಗಳಿಕೆಯನ್ನು ಕಂಡಿದೆ. ಇದರಲ್ಲಿ ಹಿಂದಿ ವರ್ಸನ್ ನಲ್ಲಿ ₹40 ಕೋಟಿ ಇತ್ತು. ಕನ್ನಡದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ₹14 ಕೋಟಿ ಗಳಿಕೆಯನ್ನು ದಾಟಿತು. ಬೆಳಗಿನ ಪ್ರದರ್ಶನಗಳಲ್ಲಿ ಶೇ. 85ರಷ್ಟು ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿದ್ದವು.
ಬಾಲಿವುಡ್ ಸಿನಿಮಾ ಧುರಂಧರ್ ಕಳೆದ ವರ್ಷ ₹1300 ಕೋಟಿ ಗಳಿಕೆಯೊಂದಿಗೆ ಬ್ಲಾಕ್‌ಬಸ್ಟರ್ ಆಗಿತ್ತು ಮತ್ತು ಆ ವರ್ಷದ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರವಾಗಿತ್ತು. ಧುರಂಧರ್ ಸಿನಿಮಾ ಡಿಸೆಂಬರ್‌ನಲ್ಲಿ ₹28 ಕೋಟಿ ನಿವ್ವಳ ಗಳಿಕೆಯೊಂದಿಗೆ ಆರಂಭಗೊಂಡು, ನಂತರ ಜನರ ಬಾಯಮಾತಿನ ಪ್ರಚಾರದ ಮೂಲಕ ಉತ್ತಮ ಯಶಸ್ಸು ಕಂಡಿತ್ತು. ಆದರೆ ಟಾಕ್ಸಿಕ್ ಕೇವಲ ಬೆಳಗಿನ ಪ್ರದರ್ಶನಗಳಲ್ಲೇ ‘ಧುರಂಧರ್’ನ ಮೊದಲ ದಿನದ ಒಟ್ಟು ಗಳಿಕೆಯನ್ನು ಮೀರಿದೆ. ಜೊತೆಗೆ ಮಧ್ಯಾಹ್ನದ ಪ್ರದರ್ಶನಗಳ ವೇಳೆಗೆ ‘ಪಠಾಣ್’ ಚಿತ್ರದ ಗಳಿಕೆಯನ್ನೂ ಹಿಂದಿಕ್ಕಿದೆ.
ಕೆವಿಎನ್ ಸಂಸ್ಥೆ ನಿರ್ಮಿಸಿರುವಂತಹ ಟಾಕ್ಸಿಕ್ ಸಿನಿಮಾದ ಬಜೆಟ್ ಎಷ್ಟು ಕೋಟಿ ಅನ್ನೋದರ ಬಗ್ಗೆ ಜನರಲ್ಲಿ ಪ್ರಶ್ನೆ ಇದೆ. ಈ ಬಗ್ಗೆ ಇದುವರೆಗೆ ಚಿತ್ರತಂಡ ಅಧಿಕೃತವಾಗಿ ಸಿನಿಮಾದ ಬಜೆಟ್ ಅನೌನ್ಸ್ ಮಾಡದೇ ಇದ್ದರೂ ಸಹ ವರದಿಗಳ ಪ್ರಕಾರ ಟಾಕ್ಸಿಕ್ ಬಜೆಟ್ 300ರಿಂದ 500 ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಟಾಕ್ಸಿಕ್ ಚಿತ್ರವನ್ನು ಬೆಂಗಳೂರು, ಮುಂಬೈ, ಗೋವಾ, ತೂತುಕುಡಿ ಮತ್ತು ಜೈಪುರದಲ್ಲಿ ಚಿತ್ರೀಕರಿಸಲಾಗಿದೆ. 1940-1970ರ ದಶಕದ ಅವಧಿಯನ್ನು ಜೀವಂತಗೊಳಿಸಲು ಒಂದು ದೊಡ್ಡ ಸೆಟ್ ಅನ್ನು ಸಹ ರಚಿಸಲಾಗಿದೆಯಂತೆ.

ನೋಡಿರಿ

