ಅದೃಷ್ಟ ಕೈ ಹಿಡಿಯಬೇಕಾ?- ಗುರುವಾರ ನಿಮ್ಮ ಪರ್ಸ್ನಲ್ಲಿ ತಾಮ್ರದಿಂದ ಮಾಡಿದ ಕುಬೇರ ಯಂತ್ರವನ್ನು ಪೂಜೆ ಮಾಡಿ

ಹಿಂದೂ ಧರ್ಮದಲ್ಲಿ ಗುರುವಾರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ಈ ದಿನದಂದು ವಿಷ್ಣು ದೇವನನ್ನು ಪೂಜೆಯ ವಿಧಿ – ವಿಧಾನಗಳನ್ನು ಅನುಸರಿಸಿಕೊಂಡು ಪೂಜಿಸಲಾಗುತ್ತದೆ. ಗುರುವಾರ ಪೂಜೆ ಮಾಡುವುದರ ಜೊತೆಗೆ, ಕೆಲವು ಕೆಲಸಗಳನ್ನು ಸಹ ನಾವು ಮಾಡಬೇಕು. ಗುರುವಾರದ ದಿನದಂದು ನಾವು ಈ ಕೆಲಸಗಳನ್ನು ಮಾಡುವುದರಿಂದ ಅದೃಷ್ಟ ಪ್ರಾಪ್ತವಾಗುವುದು. ಹಣೆಬರಹವೇ ಬದಲಾಗುವುದು.
ಗುರುವಾರದ ದಿನದಂದು ನೀವು ವಿಷ್ಣು ದೇವನನ್ನು ಪೂಜಿಸುವುದರ ಜೊತೆಗೆ ಆತನನ್ನು ಪೂಜಿಸುವ ಸಮಯದಲ್ಲಿ ಶಂಖ ನಾದವನ್ನು ಕೂಡ ಮಾಡಬೇಕು. ವಿಷ್ಣುವನ್ನು ಪೂಜಿಸುವಾಗ ಶಂಖವನ್ನು ಊದುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದರಿಂದ ವಿಷ್ಣು ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ. ಅಲ್ಲದೆ, ಶಂಖದ ಶಬ್ದವು ಸುತ್ತಲಿನ ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಮತ್ತು ಸಕಾರಾತ್ಮಕತೆಯು ಮನೆಯೊಳಗೆ ಪ್ರವೇಶಿಸುವಂತೆ ಮಾಡುತ್ತದೆ ಎನ್ನುವ ನಂಬಿಕೆಯಿದೆ.
ಗುರುವಾರ ನಿಮ್ಮ ಪರ್ಸ್ನಲ್ಲಿ ತಾಮ್ರದಿಂದ ಮಾಡಿದ ಕುಬೇರ ಯಂತ್ರವನ್ನು ಪೂಜೆ ಮಾಡಿ ಇಟ್ಟುಕೊಳ್ಳಬೇಕು. ಈ ಕುಬೇರ ಯಂತ್ರದೊಂದಿಗೆ ಕವಡೆ, ಕುಂಕುಮ ಮತ್ತು ಅರಿಶಿನದ ಗಂಟು ಇಡುವುದು ಸಹ ಶುಭವೆಂದು ಪರಿಣಿಸಲಾಗುತ್ತದೆ. ಈ ಎಲ್ಲಾ ವಸ್ತುಗಳನ್ನು ಪರ್ಸ್ನಲ್ಲಿ ಇಡುವ ಮೊದಲು, ಅವುಗಳನ್ನು ಸ್ವಲ್ಪ ಸಮಯದವರೆಗೆ ವಿಷ್ಣುವಿನ ಪಾದಗಳಲ್ಲಿ ಇಡಬೇಕು. ನಂತರ ಅದನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳಬೇಕು.
ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಗುರುವಾರ ಉಪವಾಸ ವ್ರತವನ್ನು ಆಚರಿಸಬೇಕು ಮತ್ತು ಬಾಳೆ ಮರವನ್ನು ಪೂಜಿಸಬೇಕು. ಆದರೆ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯು ತಪ್ಪಾಗಿ ಬಾಳೆಹಣ್ಣನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ದಿನ ಉಪವಾಸ ಮಾಡುವ ವ್ಯಕ್ತಿ ಮಾತ್ರವಲ್ಲ, ಉಪವಾಸವನ್ನು ಮಾಡದೇ ಇರುವವರು ಕೂಡ ಬಾಳೆ ಹಣ್ಣುಗಳನ್ನು ಸೇವಿಸಬಾರದು. ಈ ದಿನ ವಿಷ್ಣುವಿನ ಪೂಜೆಯಲ್ಲಿ ಬಾಳೆಹಣ್ಣುಗಳನ್ನು ಅರ್ಪಿಸಬೇಕು.

ನೋಡಿರಿ

