ತುಪ್ಪದ ಜೊತೆ ಬಾಳೆಹಣ್ಣು ಸೇವಿಸಿದ್ರೆ ಎಷ್ಟೊಂದು ಪ್ರಯೋಜನ ಗೊತ್ತಾ?

ಬಡವರ ಬಾದಾಮಿ ಕಡಲೆ ಕಾಯಿ ಎನ್ನುವಂತೆ.. ಕೈಗೆಟುಕುವ ದರದಲ್ಲಿ ಸಿಗುವ ಹಾಗೂ ಹೆಚ್ಚು ಪೋಷಕಾಂಶವಿರುವ ಒಂದೇ ಒಂದು ಹಣ್ಣು ಎಂದರೆ ಅದು ಬಾಳೆ ಹಣ್ಣು. ಎಲ್ಲರ ಮನೆಯಲ್ಲೂ ಬಾಳೆಹಣ್ಣು ಇದ್ದೇ ಇದೆ. ಬಾಳೆಹಣ್ಣು ಜೊತೆ ತುಪ್ಪ ಸೇವಿಸಿದ್ರೆ ಸಾಕಷ್ಟು ಆರೋಗ್ಯ ಲಾಭಗಳಿವೆ.
ಇದನ್ನೂ ಓದಿ:ಈ ಸಮಸ್ಯೆ ಇದ್ರೆ ಅಪ್ಪಿತಪ್ಪಿಯೂ ಐಸ್‌ಕ್ರೀಂ ತಿನ್ನಬೇಡಿ! – ಐಸ್ ಕ್ರೀಂ ಬದಲು ಈ ಆಹಾರ ಸೇವಿಸಿ!
ಬಾಳೆಹಣ್ಣು ಮತ್ತು ದೇಸಿ ತುಪ್ಪ ಎರಡೂ ಅತ್ಯಧಿಕ ಪೋಷಕಾಂಶಗಳನ್ನು ಹೊಂದಿದೆ. ಇದರ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ದೇಹವನ್ನು ಬಲಪಡಿಸುವ ಸಲುವಾಗಿ ಹಲವರು ಬಾಳೆಹಣ್ಣನ್ನು ಹಾಲಿನೊಂದಿಗೆ ತಿನ್ನುತ್ತಾರೆ. ಹಾಲಿನ ಪರ್ಯಾಯವಾಗಿ ತುಪ್ಪದೊಂದಿಗೆ ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಅರೋಗ್ಯ ಪ್ರಯೋಜನಗಳಿದೆ ಹಾಗೂ ಯಾವೆಲ್ಲಾ ದೌರ್ಬಲ್ಯಗಳನ್ನು ನಮ್ಮಿಂದ ದೂರ ಮಾಡುತ್ತದೆ ಎಂಬ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಇದು ದೇಹದಲ್ಲಿ ಆರೋಗ್ಯಕರ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.
ಬಾಳೆಹಣ್ಣು ಆರೋಗ್ಯಕರ ಕ್ಯಾಲೊರಿಯನ್ನು ಹಾಗೂ ನೈಸರ್ಗಿಕ ಸಕ್ಕರೆಯನ್ನು ಒದಗಿಸುತ್ತದೆ. ಇದು ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಇತರ ಖನಿಜಗಳನ್ನು ಹೊಂದಿರುತ್ತದೆ. ಆರೋಗ್ಯಕರ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಹೆಚ್ಚಿಸುತ್ತದೆ.
ಬಾಳೆಹಣ್ಣು ಫೈಬರ್‌ನ ಉತ್ತಮ ಮೂಲವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಡುತ್ತದೆ. ದೇಸಿ ತುಪ್ಪ ಕರುಳನ್ನು ಉತ್ತಮವಾಗಿರಿಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಮಲಬದ್ಧತೆಯಂತಹ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬಾಳೆಹಣ್ಣು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ಗಳ ಅತ್ಯುತ್ತಮ ಮೂಲವಾಗಿದೆ, ಇದು ಬಲವಾದ ಮೂಳೆಗಳಿಗೆ ಅವಶ್ಯಕವಾಗಿದೆ. ದೇಸಿ ತುಪ್ಪದೊಂದಿಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಮೂಳೆಗಳನ್ನು ಬಲಪಡಿಸುತ್ತದೆ.
ದೇಸಿ ತುಪ್ಪದಲ್ಲಿ ವಿಟಮಿನ್ ಎ, ಡಿ, ಇ, ಕೆ ಮತ್ತು ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್ ಇದೆ. ಈ ಎಲ್ಲಾ ಪೋಷಕಾಂಶಗಳು ಒಟ್ಟಾಗಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇವೆರಡರ ಮಿಶ್ರಣವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.
ಬಾಳೆಹಣ್ಣು ಮತ್ತು ತುಪ್ಪವನ್ನು ಒಟ್ಟಿಗೆ ತಿನ್ನುವುದು ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರಿಗೆ ಒಳ್ಳೆಯದು. ಬಾಳೆಹಣ್ಣು ಮತ್ತು ತುಪ್ಪವನ್ನು ಸೇವಿಸುವುದು ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.
ಬಾಳೆಹಣ್ಣು ಮತ್ತು ತುಪ್ಪದ ಮಿಶ್ರಣ ತಿನ್ನುವುದರಿಂದ ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ. ಚರ್ಮದ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ.

ನೋಡಿರಿ

