ಮಹಿಳಾ ಪ್ರೀಮಿಯರ್ ಲೀಗ್ಗೆ ಮುಹೂರ್ತ ಫಿಕ್ಸ್ – ಮಾರ್ಚ್ 4ರಿಂದ ಶುರುವಾಗಲಿದೆ ಮ್ಯಾಚ್
ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ಗೆ ಮುಹೂರ್ತ ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚೊಚ್ಚಲ ಆವೃತ್ತಿಯ ಡಬ್ಲ್ಯೂಪಿಎಲ್ ಇದೇ ಮಾರ್ಚ್ 4ರಿಂದ ಆರಂಭಗೊಳ್ಳಲಿದೆ. ಮಹಿಳಾ ಐಪಿಎಲ್ಗಾಗಿ ಈಗಾಗಲೇ ಐದು ತಂಡಗಳು ಫ್ರಾಂಚೈಸಿ ಹಕ್ಕು ಪಡೆದುಕೊಂಡಿವೆ. ನೂರಾರು ಮಹಿಳಾ ಕ್ರಿಕೆಟಿಗರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹರಾಜು ದಿನಾಂಕ ಕೂಡ ಪ್ರಕಟವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ – ಫುಟ್ಬಾಲ್ ತಾರೆ ‘ಮೆಸ್ಸಿ’ ಜೆರ್ಸಿ ಗಿಫ್ಟ್
ಮಹಿಳಾ ಪ್ರೀಮಿಯರ್ ಲೀಗ್ ಕುರಿತು ಮಾಹಿತಿ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಅರುಣ್ ಧುಮಾಲ್, ಈ ಟೂರ್ನಿ ಮಾರ್ಚ್ 4 ರಂದು ಆರಂಭಗೊಂಡು ಮಾರ್ಚ್ 24ರಂದು ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ. ಚೊಚ್ಚಲ ಆವೃತ್ತಿ ಸಂಪೂರ್ಣ ಮುಂಬೈನ ಎರಡು ಕ್ರೀಡಾಂಗಣ ಬ್ರಬೊರ್ನ್ ಹಾಗೂ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಈಗಾಗಲೇ ಸುಮಾರು 1500 ಆಟಗಾರ್ತಿಯರು ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ ಗರಿಷ್ಠ 90 ಆಟಗಾರರು ಮಾತ್ರ ಆಡುವ ಅವಕಾಶ ಪಡೆಯಲಿದ್ದಾರೆ. ಪ್ರತಿ ತಂಡಕ್ಕೂ 12 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಫ್ರಾಂಚೈಸಿಗಳು ಕನಿಷ್ಠ 15 ಪ್ಲೇಯರ್ಗಳನ್ನು ಗರಿಷ್ಠ 18 ಆಟಗಾರ್ತಿಯರನ್ನು ಖರೀಸಲು ಅವಕಾಶವಿದೆ. ಪ್ರತಿ ತಂಡಗಳು ಐದು ವಿದೇಶಿ ಆಟಗಾರರನ್ನು ಹೊಂದಬಹುದು. ಈ ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿದೆ.