ಗೃಹಲಕ್ಷ್ಮಿ ಫಲಾನುಭವಿಗಳಿಗೆ BIG UPDATE! ರಿ-ವೆರಿಫಿಕೇಶನ್ ಅರ್ಜಿ ಸಲ್ಲಿಸೋದು ಹೇಗೆ?
ಅಂಗನವಾಡಿಗೆ ಕೊಡಿ ಈ ದಾಖಲೆ

ಗೃಹಲಕ್ಷ್ಮಿ ಫಲಾನುಭವಿಗಳಿಗೆ BIG UPDATE!  ರಿ-ವೆರಿಫಿಕೇಶನ್ ಅರ್ಜಿ ಸಲ್ಲಿಸೋದು ಹೇಗೆ?ಅಂಗನವಾಡಿಗೆ ಕೊಡಿ ಈ ದಾಖಲೆ

ಗೃಹಲಕ್ಷ್ಮಿ ಕೇವಲ ಒಂದು ಯೋಜನೆಯಾಗಿ ಉಳಿದಿಲ್ಲ, ಕೋಟ್ಯಾಂತರ ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಈಗ ಇದೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದೆ.  ಯೋಜನೆಯಲ್ಲಿ ನಡೆಯುತ್ತಿರುವ ಬೃಹತ್ ಮಟ್ಟದ ಅಕ್ರಮಗಳನ್ನು ತಡೆಯಲು ಸರ್ಕಾರ ಈಗ ಮರುಪರಿಶೀಲನೆ ಅಥವಾ ರಿ-ವೆರಿಫಿಕೇಶನ್’ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಾಗಿದ್ರೆ ಈ  ರಿ-ವೆರಿಫಿಕೇಶನ್ ಹೇಗೆ ನಡೆಯುತ್ತೆ ಅನ್ನೋದ್ದನ್ನ ನೋಡೋಣ..

ಮನೆ ಮನೆಗೆ ಬರ್ತಾರೆ ಅಧಿಕಾರಿಗಳು 

ಅಕ್ರಮ ಹಣ ಸಂದಾಯ ತಡೆಗಟ್ಟಲು ಇನ್ಮುಂದೆ ‘ಒನ್‌-ಟೈಮ್‌ ಬಯೋಮೆಟ್ರಿಕ್‌’ ವ್ಯವಸ್ಥೆಯನ್ನ ಜಾರಿಗೆ ತರಲಾಗುತ್ತಿದೆ. ಇದು ಹೇಗೆ ನಡೆಯುತ್ತೆ ಅಂದ್ರೆ, ಡಿಕೆ ಶಿವಕುಮಾರ್ ಹೇಳಿದ ಪ್ರಕಾರ ಮನೆ ಮನೆಗೆ ಅಧಿಕಾರಿಗಳು ಬರ್ತಾರೆ, ನಿಮ್ಮ ಬಯೋಮೆಟ್ರಿಕ್ ಅಥವಾ ಫೇಸ್ ಅಥೆಂಟಿಕೇಶನ್ ಕೇಳ್ತಾರೆ ಅಂತ.. ಸದನದಲ್ಲಿ ಈ ಬಗ್ಗೆ ಮಾತನಾಡಿದ ಡಿಕೆಶಿ ಗೃಹಲಕ್ಷ್ಮಿ ಅಕ್ರಮವನ್ನ ಪತ್ತೆ ಹಚ್ಚುವ ಉದ್ದೇಶಕ್ಕಾಗಿ ಮೊಬೈಲ್ ಆ್ಯಪ್ ಮತ್ತು ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಅವುಗಳ ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ ಅಂತ ತಿಳಿಸಿದ್ದಾರೆ.

ಹೊಸ ಅರ್ಜಿ ಎಲ್ಲಿ ಸಲ್ಲಿಸಬೇಕು? ಏನೆಲ್ಲಾ ದಾಖಲೆ ಬೇಕು?

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಸಲ್ಲಿಕೆ ಕಡ್ಡಾಯ ಮಾಡಿದೆ. ನೀವು ಅರ್ಜಿಯನ್ನ ಸರ್ಕಾರ ನೇಮಕ ಮಾಡಿದ ಅಧಿಕಾರಿಗಳ ಬಳಿ ನೀಡಬೇಕು. ಬಹುತೇಕ ಕಡೆ ಅಂಗನವಾಡಿ ಶಿಕ್ಷಕರೇ ಈ ಅರ್ಜಿಯ ಮರು ಪರಿಶೀಲನೆ ಮಾಡುತ್ತಿದ್ದಾರೆ. ನೀವು ಅವರ ಬಳಿಯೇ ಮಾಹಿತಿ ನೀಡಬೇಕು. ಯಾವುದೇ ಗ್ರಾಮ್‌ಓನ್ , ಬೆಂಗಳೂರು ಓನ್‌, ಕರ್ನಾಟಕ ಓನ್‌ಗಳಲ್ಲಿ ಈ ಅರ್ಜಿ ಸಲ್ಲಿಸೋಕೆ ಅವಕಾಶ ಇಲ್ಲ. ಹಾಗಿದ್ರೆ ನಾವು ಏನೆಲ್ಲಾ ದಾಖಲೆ ನೀಡಬೇಕು ಅನ್ನೋದ್ದನ್ನ ನೋಡೋಣ.

ಗೃಹಲಕ್ಷ್ಮಿಗೆ ಏನೆಲ್ಲಾ ದಾಖಲೆ ನೀಡಬೇಕು?

  • ಮನೆ ಯಜಮಾನಿ ಯಾರು?
  • ಆಧಾರ್ ಸಂಖ್ಯೆ ಏನು?
  • ಮನೆಯ ಯಜಮಾನಿ ಬ್ಯಾಂಕ್ ಖಾತೆ ವಿವರ
  • ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತಿತ್ತು
  • ಮನೆಯ ಯಜಮಾನಿ ಪತಿಯ ಹೆಸರು ? ಆಧಾರ್ ಸಂಖ್ಯೆ ?
  • ಆಧಾರ್ ಕಾರ್ಡ್ ದಾಖಲಾತಿ ನಕಲು ಪ್ರತಿ ಸಲ್ಲಿಸಬೇಕು
  • ನೀವು ಐಟಿ ಮತ್ತು ಜಿಎಸ್ ಟಿ ಪಾವತಿದಾರರ ?
  • ನಿಮ್ಮ ಬಳಿ APL ಕಾರ್ಡ್ ಅಥವಾ BPL ಕಾರ್ಡ್ ಇದೆಯಾ?
  • ವೋಟರ್ ಐಡಿ
  • ಪಾನ್ ಕಾರ್ಡ್

Kishor KV