3 ಇನ್ನಿಂಗ್ಸ್.. 328 ರನ್ಸ್ – DDP ಫೈರ್ ಗೆ ಸಾಯಿ ಸುದರ್ಶನ್ ಸುಸ್ತು
ಯಾರಿಗೆ ಸಿಗುತ್ತೆ BCCI ಟಿಕೆಟ್?

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರ ದೇವದತ್ ಪಡಿಕ್ಕಲ್ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ್ದಾರೆ. ಡಿಡಿಪಿಯ ಪವರ್ ಶೋಗೆ ಟೀಂ ಮ್ಯಾನೇಜ್ಮೆಂಟ್, ಟೀಂ ಇಂಡಿಯಾ ಫ್ಯಾನ್ಸ್, ಮಾಜಿ ಕ್ರಿಕೆಟರ್ಸ್ ಹೀಗೆ ಎಲ್ರೂ ಫುಲ್ ಖುಷಿಯಾಗಿದ್ದಾರೆ. ಆದ್ರೆ ಅದೊಬ್ಬ ಆಟಗಾರನಿಗೆ ಮಾತ್ರ ಟೆನ್ಷನ್ ಶುರುವಾಗಿದೆ. ತನ್ನ ಸ್ಲಾಟ್ನೇ ಕಳ್ಕೊಳ್ಳೋ ಆತಂಕ ಕಾಡ್ತಿದೆ. ಆ ಆಟಗಾರನೇ ಸಾಯಿ ಸುದರ್ಶನ್. ಇಂಜುರಿ ಕಾರಣಕ್ಕೆ ಸರಣಿಯಿಂದ ಹೊರಗುಳಿದಿರೋ ಸುದರ್ಶನ್ ಈಗ ಮತ್ತೆ ಮೈದಾನಕ್ಕಿಳಿಯೋಕೆ ಸವಾಲ್ ಎದುರಾಗಿದೆ.
ಇದನ್ನೂ ಓದಿ : ಬೌಲರ್‌ಗೆ ಹೆಲ್ಮೆಟ್‌ನಲ್ಲಿ ಗುದ್ದಿದ ಜೈಸ್ವಾಲ್‌ಗೆ ಶಿಕ್ಷೆ ಏನು? – ಯಶಸ್ವಿ ವೃತ್ತಿಜೀವನಕ್ಕೆ ಸಂಕಷ್ಟ..?
ಒಬ್ಬರ ಇಂಜುರಿ ಮತ್ತೊಬ್ಬರಿಗೆ ವರವಾಗುತ್ತೆ ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್ ನೋಡಿ. ದೇವದತ್ ಪಡಿಕ್ಕಲ್ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಅಬ್ಬರಿಸಿ ಬೊಬ್ಬಿರಿದ್ರೂ ಭಾರತದ ಪರ ಅವಕಾಶಗಳು ಸಿಕ್ಕಿದ್ದು ಅಷ್ಟ್ರಲ್ಲೇ ಇದೆ. ಟ್ಯಾಲೆಂಟ್ ಇದ್ರೂ ಆಪರ್ಚುನಿಟೀಸ್ ಇರ್ಲಿಲ್ಲ. ಆದ್ರೆ ಯಾವಾಗ ಸಾಯಿ ಸುದರ್ಶನ್ ಇಂಜುರಿಯಿಂದ ಸರಣಿಯಿಂದ ಹೊರಗುಳಿದ್ರೋ ಪಡಿಕ್ಕಲ್ ತಾನೆಂಥಾ ಪರಾಕ್ರಮಿ ಅನ್ನೋದನ್ನ ಇಡೀ ಕ್ರಿಕೆಟ್ ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.
ಪಡಿಕ್ಕಲ್ ಅಬ್ಬರಕ್ಕೆ ಸ್ಲಾಟ್ ಕಳ್ಕೊಳ್ತಾರಾ ಸುದರ್ಶನ್?
ಶ್ರೀಲಂಕಾ ನೆಲದಲ್ಲಿ ಬ್ಯಾಟ್ ಹಿಡಿದು ದೇವದತ್ ಪಡಿಕ್ಕಲ್ ಪರಾಕ್ರಮ ತೋರಿಸ್ತಿದ್ರೆ ಸಾಯಿ ಸುದರ್ಶನ್ಗೆ ಒಳಗೊಳಗೇ ಆತಂಕ ಶುರುವಾಗಿದೆ. ಯಾಕಂದ್ರೆ ಗಾಲೆ ಮತ್ತೊ ಕೊಲೊಂಬೋ ಎರಡೂ ಪಂದ್ಯಗಳಲ್ಲಿ ಪಡಿಕ್ಕಲ್ ನಂಬರ್ 3 ಸ್ಲಾಟ್ನಲ್ಲೇ ಶತಕ ಬಾರಿಸಿದ್ದಾರೆ. ಅದ್ರಲ್ಲೂ ಗಾಲೆಯಲ್ಲಿ 167 ರನ್ಗಳ ಇನ್ನಿಂಗ್ಸ್ ಬರೀ ನಂಬರ್ಸ್ ಆಗಿರಲಿಲ್ಲ. ಶ್ರೀಲಂಕಾದ ಸ್ಪಿನ್ ದಾಳಿಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಎದುರಿಸಿದ ಪಡಿಕ್ಕಲ್ ಭಾರತದ ಗೆಲುವಿನ ರೂವಾರಿಯಾದ್ರು. ಹಾಗೇ ಎರಡನೇ ಇನ್ನಿಂಗ್ಸ್ನಲ್ಲಿ 44 ರನ್ಸ್ ಬಾರಿಸಿದ್ರು. ಒಟ್ಟು 211 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದ್ರು. ಇನ್ನು ಕೊಲಂಬೊದಲ್ಲೂ 117 ರನ್ಸ್ ಬಾರಿಸಿದ್ರು. ಸೋ ಅಲ್ಲಿಗೆ ಎರಡು ಪಂದ್ಯ, ಮೂರು ಇನ್ನಿಂಗ್ಸ್ಗಳಲ್ಲೇ 328 ರನ್ಸ್ ಕಲೆ ಹಾಕಿದ್ದಾರೆ. ಆದ್ರೆ ಇದೇ ಸಾಯಿ ಸುದರ್ಶನ್ ಭಾರತದ ಪರ ಒಟ್ಟಾರೆಯಾಗಿ 7 ಪಂದ್ಯಗಳ 12 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದು 383 ರನ್ಸ್ ಕಲೆ ಹಾಕಿದ್ದಾರೆ. 3 ಅರ್ಧಶತಕಗಳಿದೆ. ಌಂಡ್ 87 ರನ್ಸ್ ಬಾರಿಸಿರೋದೇ ಹೈಯೆಸ್ಟ್ ಇಂಡಿವಿಶ್ಯೂಯಲ್ ಸ್ಕೋರ್. ಇದೇ ಪರ್ಫಾಮೆನ್ಸ್ ನೋಡ್ಕೊಂಡೇ ನಂಬರ್ 3 ಸ್ಲಾಟ್ಗೆ ಸುದರ್ಶನ್ಗಿಂತ ಪಡಿಕ್ಕಲ್ ಬೆಸ್ಟ್ ಅನ್ನೋ ವಾದ ಶುರುವಾಗಿದೆ. ಹಾಗಂತ ಈ ಎರಡು ಪಂದ್ಯಗಳ ರನ್ಸ್ ಅಷ್ಟೇ ಅಲ್ಲದೆ ಪಡಿಕ್ಕಲ್ ಈಸ್ ಬೆಸ್ಟ್ ಅನ್ನೋದಕ್ಕೆ ಬೇರೆ ರೀಸನ್ಸ್ ಕೂಡ ಇದೆ.
ಪಡಿಕ್ಕಲ್ ಯಾಕೆ ಆಡಬೇಕು?
ಅವಕಾಶ ಸಿಕ್ಕ ಕೂಡದೇ ಬ್ಯಾಟಿಂಗ್ ಮೂಲಕವೇ ಉತ್ತರ
ಶ್ರೀಲಂಕಾದ ಸ್ಪಿನ್ ಫ್ರೆಂಡ್ಲಿ ಪಿಚ್ ನಲ್ಲೂ ಅದ್ಭುತ ಬ್ಯಾಟಿಂಗ್
ಒತ್ತಡದ ಸಮಯದಲ್ಲೇ ಸೆಂಚುರಿ ಬಾರಿಸಿ ಬಿಗ್ ಇನ್ನಿಂಗ್ಸ್
ಮಾಜಿ ಕ್ರಿಕೆಟರ್ಸ್ ಕಡೆಯಿಂದಲೂ ಪಡಿಕ್ಕಲ್ ಗೆ ಸಪೋರ್ಟ್
ಅವಕಾಶ ಸಿಗ್ಬೇಕು ಅಂದ್ರೆ ಪ್ರದರ್ಶನವೇ ಮಾನದಂಡ ಆಗುತ್ತೆ. ಹಾಗಂತ ಸಾಯಿ ಸುದರ್ಶನ್ರನ್ನ ದಿಢೀರ್ ಅಂತಾ ಹೊರಗಿಡೋಕೆ ಆಗಲ್ಲ. ಸುದರ್ಶನ್ ಕಳೆದೊಂದು ವರ್ಷದಿಂದ ಭಾರತ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಪ್ರಸ್ತುತ ಅವ್ರಿಗೆ ಇಂಜುರಿ ಅನ್ನೋ ಕಾರಣಕ್ಕಷ್ಟೇ ಹೊರಗಿಟ್ಟಿರೋದು ಫಾರ್ಮ್ನಿಂದ ಅಲ್ಲ. ನಂಬರ್ 3ನಲ್ಲಿ ಆಡಿದ ಅನುಭವವೂ ಇದೆ. ಹೀಗಾಗಿ ಬಿಸಿಸಿಐಗೆ ಮುಂದಿನ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್ ವರ್ಸಸ್ ಪಡಿಕ್ಕಲ್ ನಡುವೆ ಯಾರನ್ನ ಸೆಲೆಕ್ಟ್ ಮಾಡ್ಬೇಕು ಅನ್ನೋ ತಲೆಬಿಸಿ ಶುರುವಾಗಲಿದೆ. ಯಾಕಂದ್ರೆ ಉಳಿದ ಯಾವ ಸ್ಲಾಟ್ನಲ್ಲೂ ಇವ್ರನ್ನ ಆಡ್ಸೋಕೆ ಆಗಲ್ಲ. ಬೇರೆ ಬದಲಾವಣೆನೂ ಕಷ್ಟ ಸಾಧ್ಯ.

ನೋಡಿರಿ

