ಚಿನ್ನುಮರಿಯನ್ನ ಮತ್ತೆ ಕಾಡಿದ ಸೈಕೋ ಜಯಂತ್ – ಕೆಲಸ ಕೊಟ್ಟವನಿಗೆ ಜಯಂತ್ ಟಾರ್ಚರ್

ಚಿನ್ನುಮರಿಯನ್ನ ಮತ್ತೆ ಕಾಡಿದ ಸೈಕೋ ಜಯಂತ್ – ಕೆಲಸ ಕೊಟ್ಟವನಿಗೆ ಜಯಂತ್ ಟಾರ್ಚರ್

ಲಕ್ಷ್ಮೀ ನಿವಾಸ ಸೀರಿಯಲ್ ಇದೀಗ ಮತ್ತೊಂದು ರೋಚಕ ಘಟ್ಟ ತಲುಪಿದೆ. ಸೈಕೋ ಜಯಂತ್ ಮತ್ತೆ ತನ್ನ ಆಟ ಶುರುಮಾಡಿದ್ದಾನೆ. ತನ್ನ ವಿರುದ್ಧ ನಿಂತ ಚಿನ್ನುಮರಿಯನ್ನ ಮತ್ತೆ ಸತಾಯಿಸುತ್ತಿದ್ದಾನೆ ಸೈಕೋ ಜಯಂತ್.

ಇದನ್ನೂ ಓದಿ​:ಕೇಡಿ ಜೈದೇವ್ ವಿರುದ್ಧ ಮಲ್ಲಿ ವ್ಯೂಹ – ಭೂಮಿಕಾ, ಜೀವ ಪ್ಲ್ಯಾನ್ ಸಕ್ಸಸ್ ಆಗುತ್ತಾ?

​ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಒಂದೆಡೆ ಭಾವನಾ ತನ್ನ ಅತ್ತೆ ಮಾವನ ಮನಸೆಳೆಯಲು ಪ್ರಯತ್ನಿಸುತ್ತಿದ್ದಾಳೆ. ಇತ್ತ ಜಾಹ್ನವಿ ಕೆಲಸಕ್ಕೆ ಸೇರಿ ತನ್ನ ಕಾಲ ಮೇಲೆ ತಾನು ನಿಲ್ಲುವ ಪ್ರಯತ್ನದಲ್ಲಿದ್ದಾಳೆ. ಆದರೆ ಜಾಹ್ನವಿ ಅದೆಷ್ಟೇ ಎಚ್ಚರಿಕೆಯ ಹೆಜ್ಜೆ ಇಟ್ಟರೂ ಕೂಡಾ ಸೈಕೋ ಜಯಂತ್ ಪದೇ ಪದೇ ಕಾಡುತ್ತಿರುತ್ತಾನೆ. ಕ್ಷಣ ಕ್ಷಣವೂ ಪತ್ನಿಗೆ ಪ್ರೀತಿಯ ಹೆಸರಿನಲ್ಲಿ ಟಾರ್ಚರ್​ ಕೊಡುತ್ತಿದ್ದ ಸೈಕೋ ಜಯಂತ್​ನಿಂದ ಚಿನ್ನುಮರಿ ದೂರ ಆದರೂ ಕೂಡಾ ಆತನ ಸೈಕೋ ಮನಸ್ಥಿತಿ ಈಕೆಯನ್ನು ಹಿಂಬಾಲಿಸುತ್ತಲೇ ಇದೆ.

ಹೆಣ್ಣಿಗೆ ಬದುಕಲು ಗಂಡು ಬೇಕೇ ಬೇಕು, ಹೆಣ್ಣು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು ಸಾಧ್ಯವಿಲ್ಲ ಎನ್ನೋದು ಜಯಂತ್ ವಾದ. ಅದಕ್ಕೆ ತಿರುಗೇಟು ನೀಡಿ, ಕೆಲಸ ಪಡೆದುಕೊಂಡಿದ್ದಳು ಜಾನು. ಇದೀಗ ಜಾಹ್ನವಿಯನ್ನ ಕೆಲಸಕ್ಕೆ ತೆಗೆದುಕೊಳ್ಳಬೇಡ ಎಂದು ಹೇಳಿದರೂ ಕೆಲಸಕ್ಕೆ ತೆಗೆದುಕೊಂಡವನಿಗೆ ಆಪತ್ತು ಕಾದಿದೆ.  ತಾನು ಬೇಡ ಎಂದರೂ ಅವನು ಕೆಲಸ ಕೊಟ್ಟ ಎಂದು ಮ್ಯಾನೇಜರ್​ ಅನ್ನೇ ಅಡ್ಡ ಹಾಕಿದ್ದಾನೆ ಜಯಂತ್​. ನನ್ನ ಹೆಂಡತಿಗೆ ಕೆಲಸ ಕೊಡಬೇಡ ಅಂದರೂ ಕೊಟ್ಟಿದ್ಯಾಕೆ ಎಂದು ದರ್ಪ ಮೆರೆದ ಜಯಂತ್ ಆತನ ಕಥೆ ಮುಗಿಸುವ ಹಂತಕ್ಕೂ ಹೋಗಲು ರೆಡಿ ಅನ್ನೋ ರೀತಿ ವರ್ತಿಸುತ್ತಾನೆ. ಇದರಿಂದ ಹೆದರಿದ ಮ್ಯಾನೇಜರ್, ಕೊನೆಗೆ ನೀನು ಹೇಳಿದಂತೆ ಮಾಡುತ್ತೇನೆ. ನನ್ನನ್ನು ಏನೂ ಮಾಡಬೇಡ ಎಂದು ಮ್ಯಾನೇಜರ್​ ಕೇಳಿದಾಗ, ಜಯಂತ್​, ನಿನ್ನ ಕಂಪೆನಿಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದಾಗ, ಜೀವ ಉಳಿದರೆ ಸಾಕು ಎಂದು ಆತ ಓಕೆ ಎಂದಿದ್ದಾನೆ.

Sulekha

Leave a Reply

Your email address will not be published. Required fields are marked *