ಬ್ರಹ್ಮಾವರದಲ್ಲಿ ಮಗನಿಂದಲೇ ತಂದೆ ತಾಯಿಯ ಕೊ*ಲೆ – ಸುತ್ತಿಗೆಯಿಂದ ಹೊಡೆದು ಹೆತ್ತವರ ಹ*ತ್ಯೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಬೈಕಾಡಿಯಲ್ಲಿ ಘನಘೋರ ಘಟನೆ ನಡೆದಿದೆ. ಹೆತ್ತ ಮಗನೇ ತಂದೆ-ತಾಯಿಯನ್ನೇ ಕೊಂ*ದಿದ್ದಾನೆ. ಅದು ಕೂಡಾ ಸುತ್ತಿಗೆಯಿಂದ ಹೆತ್ತವರನ್ನು ಹೊಡೆದು ಸಾಯಿ*ಸಿದ್ದಾನೆ.
ಇದನ್ನೂ ಓದಿ:ಔಷಧಿ ವಿಚಾರಕ್ಕೆ ಗಂಡ- ಹೆಂಡತಿ ಜಗಳ – ಅಳಿಯ ಕಥೆಯನ್ನೇ ಮುಗಿಸಿದ ಮಾವ
ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಬೈಕಾಡಿಯ ಮನೆಯೊಂದರಲ್ಲಿ ಮಗನೇ ತಂದೆ ತಾಯಿಯನ್ನ ಕೊ*ಲೆ ಮಾಡಿರುವ ಘೋರ ಘಟನೆ ನಡೆದಿದೆ.. ಗಾಂಧಿನಗರ ನಿವಾಸಿ ಮೆಹಬೂಬ್, ಸಂಶದ್ ಬೇಗಂ ಕೊ*ಲೆಯಾದ ಹೆತ್ತವರು. 31 ವರ್ಷದ ಮಗ ಶಾಹಿದ್ ಅಲಿ ಎಂಬಾತ ತನ್ನ ತಂದೆ ಮೆಹಬೂಬ್, ತಾಯಿ ಸಂಶದ್ ಬೇಗಂ ಇಬ್ಬರನ್ನ ಸುತ್ತಿಗೆಯಿಂದ ಹೊಡೆದು ಕೊಲೆ*ಗೈದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ಪೊಲೀಸರು ಪಾಪಿ ಪುತ್ರನನ್ನು ವಶಕ್ಕೆ ಪಡೆದಿದ್ದಾರೆ.
ಮೆಹಬೂಬ್ ಅಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರವಿವಾರ ರಾತ್ರಿ ತಂದೆ-ತಾಯಿಯೊಂದಿಗೆ ಯಾವುದೋ ವಿಚಾರಕ್ಕೆ ಜಗಳವಾಗಿದ್ದು, ಈ ವೇಳೆ ಸಿಟ್ಟಿಗೆದ್ದ ಶಾಹಿದ್ ಅಲಿ ಸುತ್ತಿಗೆಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ದಂಪತಿ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಶಾಹಿದ್ ಅಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನೋಡಿರಿ

