ಬೌಲರ್‌ಗೆ ಹೆಲ್ಮೆಟ್‌ನಲ್ಲಿ ಗುದ್ದಿದ ಜೈಸ್ವಾಲ್‌ಗೆ ಶಿಕ್ಷೆ ಏನು? – ಯಶಸ್ವಿ ವೃತ್ತಿಜೀವನಕ್ಕೆ ಸಂಕಷ್ಟ..?

ಬೌಲರ್‌ಗೆ ಹೆಲ್ಮೆಟ್‌ನಲ್ಲಿ ಗುದ್ದಿದ ಜೈಸ್ವಾಲ್‌ಗೆ ಶಿಕ್ಷೆ ಏನು? – ಯಶಸ್ವಿ ವೃತ್ತಿಜೀವನಕ್ಕೆ ಸಂಕಷ್ಟ..?

ಮ್ ಇಂಡಿಯಾ ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಮೈದಾನದಲ್ಲಿ ತೋರಿದ ದರ್ಪ ಅವರ ವೃತ್ತಿಜೀವನಕ್ಕೆ ದೊಡ್ಡ ಸಂಕಷ್ಟ ತಂದಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಸಿತಾ ಫೆರ್ನಾಂಡೊಗೆ ಹೆಲ್ಮೆಟ್‌ನಿಂದ ಗುದ್ದಿದ್ದು ಐಸಿಸಿ ಗಂಭೀರವಾಗಿ ಪರಿಗಣಿಸಿದೆ.

ಇದನ್ನೂ ಓದಿ:ರೋಹಿತ್ ಮತ್ತು ಸೂರ್ಯವಂಶಿ ವಿಶ್ವಕಪ್ ಓಪನರ್ಸ್ – ಟೀಂ ಇಂಡಿಯಾಗೆ ಭುವನೇಶ್ವರ್ ಕಂ ಬ್ಯಾಕ್?

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್  ಡಿಚ್ಚಿ ಪ್ರಸಂಗ ದೊಡ್ಡ ವಿವಾದ ಸೃಷ್ಟಿಸಿದೆ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್ 45 ರನ್​ಗಳ ಇನ್ನಿಂಗ್ಸ್ ಆಡಿದರು. ಅಸಿತ ಫರ್ನಾಂಡೋ ಎಸೆತದಲ್ಲಿ ಜೈಸ್ವಾಲ್ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಬೌಲರ್ ಸೇರಿದಂತೆ ಲಂಕಾ ಕ್ರಿಕೆಟಿಗರು ಸಂಭ್ರಮಾಚರಣೆ ಮಾಡಿದರು. ಆಗ ಬೌಲರ್  ಅತಿರೇಕದ ಸಂಭ್ರಮಾಚರಣೆಗೆ ಕೆರಳಿದ ಜೈಸ್ವಾಲ್, ಪೆವಿಲಿಯನ್ ಕಡೆಗೆ ಹೋಗುವುದನ್ನು ಬಿಟ್ಟು ವಾಪಸ್ ಬೌಲರ್ ಬಳಿಗೆ ಬರುತ್ತಾರೆ. ಫರ್ನಾಂಡೋ ಅವರ ಮುಖಕ್ಕೆ ಮುಖವನ್ನಿಟ್ಟು, ಹೆಲ್ಮೆಟ್‌ನಿಂದ ಡಿಚ್ಚಿ ಕೊಡುತ್ತಾರೆ. ಔಟಾದ ಹತಾಶೆಯಿಂದಲೋ, ಎದುರಾಳಿ ತಂಡದ ಬೌಲರ್​ ಕೆಣಕ್ಕಿದ ಎಂತಲೋ ತಾಳ್ಮೆ ಕಳೆದುಕೊಂಡ ಜೈಸ್ವಾಲ್ ಮಾಡಿದ್ದು ಮಾತ್ರ ದೊಡ್ಡ ತಪ್ಪು.

ವಾಸ್ತವವಾಗಿ ಲಂಕಾ ವೇಗಿ ಅಸಿತಾ ಫೆರ್ನಾಂಡೊ ಬೌಲ್ ಮಾಡಿದ 17 ನೇ ಓವರ್‌ನ ಕೊನೆಯ ಎಸೆತದಲ್ಲಿ ಜೈಸ್ವಾಲ್ ಔಟಾದರು. ಔಟಾಗುವುದಕ್ಕೂ ಮುನ್ನ ಜೈಸ್ವಾಲ್ ಅದೇ ಓವರ್​ನಲ್ಲಿ ಬೌಂಡರಿಗಳ ಮಳೆಗರೆದಿದ್ದರು. ಹೀಗಾಗಿ ಜೈಸ್ವಾಲ್​ರನ್ನು ಔಟ್ ಮಾಡಿದ ಕೂಡಲೇ ಫೆರ್ನಾಂಡೊ ಆಕ್ರಮಣಕಾರಿಯಾಗಿ ಸಂಭ್ರಮಿಸಿದರು. ಅಲ್ಲದೆ ಜೈಸ್ವಾಲ್ ಪೆವಿಲಿಯನತ್ತ ಹೆಜ್ಜೆ ಹಾಕುತ್ತಿರುವಾಗಲೂ ಕೆಣಕುವ ರೀತಿಯಲ್ಲೇ ಸಂಭ್ರಮಿಸಿದರು. ಇದಕ್ಕೆ ಜೈಸ್ವಾಲ್‌ ಕೂಡಾ ಕೆರಳಿದ್ದರು.

ಲಂಕಾ ಬೌಲರ್‌ಗೆ ಹೆಲ್ಮೆಟ್​ನಿಂದ ಜೈಸ್ವಾಲ್ ಗುದ್ದಿರುವುದು ಕೂಡಾ ತಪ್ಪೇ. ಜೈಸ್ವಾಲ್ ಅವರ ಈ ನಡೆ ಐಸಿಸಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ. ಐಸಿಸಿ ನಿಯಮಗಳ ಪ್ರಕಾರ, ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ದೈಹಿಕ ಹಲ್ಲೆ, ಗಾಯಗೊಳಿಸುವುದು ಅಥವಾ ಹಿಂಸಾಚಾರದಲ್ಲಿ ತೊಡಗಿಕೊಳ್ಳುವುದು ಲೆವೆಲ್ 4 ಅಪರಾಧವೆಂದು ಪರಿಗಣಿಸಲಾಗುತ್ತದೆ. ಈ ಲೆವೆಲ್ 4 ಉಲ್ಲಂಘನೆಗೆ ಅತ್ಯಂತ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಲೆವೆಲ್ 4 ನಿಯಮವನ್ನು ಉಲ್ಲಂಘಿಸಿದ ಆಟಗಾರನಿಗೆ ಐದು ಟೆಸ್ಟ್ ಪಂದ್ಯಗಳು ಅಥವಾ 10 ಏಕದಿನ ಪಂದ್ಯಗಳ ನಿಷೇಧದಿಂದ ಹಿಡಿದು ಜೀವಾವಧಿ ನಿಷೇಧದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಇದೀಗ ಯಶಸ್ವಿ ಜೈಸ್ವಾಲ್ ವಿಚಾರದಲ್ಲಿ ಐಸಿಸಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಅನ್ನೋ ಪ್ರಶ್ನೆ ಎಲ್ಲರದ್ದು.

Sulekha

Leave a Reply

Your email address will not be published. Required fields are marked *