ಕ್ರಿಕೆಟ್‌ಗೆ ಗುಡ್‌ಬಾಯ್ ಹೇಳಿದ ಕರಣ್ ಶರ್ಮಾ – ಐಪಿಎಲ್ ಹೀರೋ ನಿವೃತ್ತಿ ಕೊಟ್ಟಿದ್ದೇಕೆ?

ಕ್ರಿಕೆಟ್‌ಗೆ ಗುಡ್‌ಬಾಯ್ ಹೇಳಿದ ಕರಣ್ ಶರ್ಮಾ – ಐಪಿಎಲ್ ಹೀರೋ ನಿವೃತ್ತಿ ಕೊಟ್ಟಿದ್ದೇಕೆ?

ಭಾರತದ ಅನುಭವಿ ಸ್ಪಿನ್ನರ್ ಕರಣ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಕರಣ್ ಶರ್ಮಾ ತಮ್ಮ ವೃತ್ತಿಜೀವನದುದ್ದಕ್ಕೂ ಭಾರತ ತಂಡಕ್ಕಾಗಿ 1 ಟೆಸ್ಟ್, 1 ಟಿ20ಐ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಾಲ್ಕು ಐಪಿಎಲ್‌ ಟ್ರೋಫಿಯನ್ನು ಗೆದ್ದಿದ್ದಾರೆ. ಕಾನ್ಪುರ್ ಸೂಪರ್‌ಸ್ಟಾರ್ಸ್ ಮತ್ತು ಮೀರತ್ ಮಾವೆರಿಕ್ಸ್ ನಡುವಿನ ಯುಪಿಟಿ 20 ಲೀಗ್ ಪಂದ್ಯದ ನಂತರ ಕರಣ್ ಶರ್ಮಾ ನಿವೃತ್ತಿಯನ್ನು ಅಧಿಕೃತಗೊಳಿಸಿದರು.

ಇದನ್ನೂ ಓದಿ: IPLನಲ್ಲಿ 9 ಟೀಂ ಬದಲಿಸಿದ ಪಿಂಚ್ – ಆಸ್ಟ್ರೇಲಿಯನ್ ಬ್ಯಾಟರ್ ಜಂಪಿಂಗ್ ಸ್ಟಾರ್ ಆಗಿದ್ದೇಗೆ?

ಕರ್ಣ್ ಶರ್ಮಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ದೀರ್ಘವಾಗಿರಲಿಲ್ಲ. ಆದಾಗ್ಯೂ ಅವರು ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದರು. 2014 ರ ಐಪಿಎಲ್ ಆವೃತ್ತಿಯಲ್ಲಿ ಅದ್ಭುತ ನೀಡಿದ್ದ ಕರ್ಣ್​ಗೆ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಆ ಪಂದ್ಯದಲ್ಲಿ ಅವರು ಜೋ ರೂಟ್ ಅವರ ನಿರ್ಣಾಯಕ ವಿಕೆಟ್ ಕೂಡ ಪಡೆದಿದ್ದರು. ನಂತರ ಕೋಲ್ಕತ್ತಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೂಲಕ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಯ 264 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ನಂತರ ವಿರಾಟ್ ಕೊಹ್ಲಿ ತಮ್ಮ ಮೊದಲ ಟೆಸ್ಟ್ ನಾಯಕತ್ವ ಪಂದ್ಯದಲ್ಲಿ ಅನುಭವಿ ರವಿಚಂದ್ರನ್ ಅಶ್ವಿನ್ ಬದಲಿಗೆ ಕರ್ಣ್ ಶರ್ಮಾ ಅವರನ್ನು ತಂಡದಲ್ಲಿ ಆಡಿಸಿದ್ದರು. ಆ ಟೆಸ್ಟ್‌ನಲ್ಲಿ ಕರ್ಣ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಅದೇ ಕರ್ಣ್​ ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು. ಏಕೆಂದರೆ ಆ ಪಂದ್ಯದ ಬಳಿಕ ಕರ್ಣ್​ಗೆ ಆಡುವ ಅವಕಾಶ ಸಿಗಲಿಲ್ಲ.

97 ಪ್ರಥಮ ದರ್ಜೆ ಪಂದ್ಯಗಳು, 123 ಲಿಸ್ಟ್ ಎ ಪಂದ್ಯಗಳು ಮತ್ತು 191 ಟಿ20 ಪಂದ್ಯಗಳನ್ನು ಆಡಿರುವ ಶರ್ಮಾ, ದೇಶೀಯ ಕ್ರಿಕೆಟ್‌ನಲ್ಲಿ ಕ್ರಮವಾಗಿ 270, 153 ಮತ್ತು 168 ವಿಕೆಟ್‌ಗಳನ್ನು ಕಬಳಿಸಿ ಸಾಕಷ್ಟು ಹೆಸರು ಮಾಡಿದ್ದಾರೆ.

“ನಾನು ಈಗ ನಿವೃತ್ತಿ ಹೊಂದಲು ಬಯಸುತ್ತೇನೆ… ನನ್ನ ಕುಟುಂಬ, ಬಿಸಿಸಿಐ, ರೈಲ್ವೇಸ್, ಯುಪಿಸಿಎ, ಆಂಧ್ರ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಮತ್ತು ಈ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇನ್ನು ಮುಂದೆ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ತರಬೇತಿ ಮತ್ತು ಇತರ ಜವಾಬ್ದಾರಿಗಳಿಗೆ ನಾನು ಲಭ್ಯವಿರುತ್ತೇನೆ” ಎಂದು ಕರಣ್ ಶರ್ಮಾ ಹೇಳಿದರು.

 

Kishor KV

Leave a Reply

Your email address will not be published. Required fields are marked *