ಮರಿಯಾನೆಗೆ ಸೊಂಡಿಲಿನಲ್ಲಿ ನೀರು ಕುಡಿಯುವ ಪಾಠ – ತಾಯಾನೆ ಮಮತೆ ನೆಟ್ಟಿಗರು ಫಿದಾ!

ಮರಿಯಾನೆಗೆ ಸೊಂಡಿಲಿನಲ್ಲಿ ನೀರು ಕುಡಿಯುವ ಪಾಠ – ತಾಯಾನೆ ಮಮತೆ ನೆಟ್ಟಿಗರು ಫಿದಾ!

ತಾಯಿ ಮತ್ತು ಮಗು ನಡುವಿನ ಬಾಂಧವ್ಯವನ್ನು ಪದಗಳಲ್ಲಿ ವಿವರಿಸುವುದು ಸುಲಭವಲ್ಲ. ಪ್ರತಿಯೊಂದು ಮಗುವಿನ ಜೀವನದಲ್ಲೂ ತಾಯಿ ಪ್ರಮುಖ ಪಾತ್ರವಹಿಸಿದ್ದಾಳೆ. ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ತಾಯಿಯ ಪ್ರೀತಿ, ಕಾಳಜಿ ಮತ್ತು ಮಮತೆ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಇದೀಗ ಇಲ್ಲೊಂದು ಕಡೆ ತಾಯಾನೆ, ಮರಿಯಾನೆಗೆ ನೀರು ಕುಡಿಯುವುದನ್ನ ಕಲಿಸಿಕೊಡುತ್ತಿದೆ. ಈ ಸುಂದರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ:   ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಈ ಪನ್ನೀರು ರಾಜ್ಯದಲ್ಲಿ ಒಂದು ವರ್ಷ ಬ್ಯಾನ್‌

ಆನೆ ಮರಿಗಳ ಆಟ, ತುಂಟಾಟಗಳ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಯಾದಲ್ಲಿ ಭಾರಿ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ತಾಯಾನೆ ತನ್ನ ಮರಿಗೆ ಸೊಂಡಿಲಿನಲ್ಲಿ ನೀರುಕುಡಿಯುವುದನ್ನ ಹೇಳಿಕೊಡುತ್ತಿದೆ. ತಾಯಾನೆ ಹೇಳಿಕೊಟ್ಟಂತೆ ಮರಿಯಾನೆ ಕೂಡ ಅದನ್ನ ಚಾಚುತಪ್ಪದೇ ಫಾಲೋ ಮಾಡಿದೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡಿದೆ.

ಈ ಮುದ್ದಾದ ವಿಡಿಯೋವನ್ನು ಮೀವಾಯ್ಸ್‌ಆಫ್‌ಭಾರತ್‌.ಇನ್‌ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋದಲ್ಲಿ ತಾಯಾನೆಯೊಂದು ಬಕೆಟ್ ನಲ್ಲಿಟ್ಟ ನೀರು ಕುಡಿಯುತ್ತಿದೆ. ಮರಿಯಾನೆಯು ತನ್ನ ಅಮ್ಮನ ಬಳಿಗೆ ಬಂದು ನೀರು ಬೇಕು ಎನ್ನುವಂತೆ ಸನ್ನೆ ಮಾಡಿದೆ. ಇದನ್ನರಿತ ತಾಯಾನೆ ತನ್ನ ಕಂದಮ್ಮನಿಗೆ ಸೊಂಡಿಲಿನಿಂದ ನೀರು ಹೇಗೆ ಕುಡಿಯಬೇಕೆಂದು ಕಲಿಸಿ ಕೊಟ್ಟಿದೆ. ತದನಂತರದಲ್ಲಿ ಮರಿಯಾನೆ ತನ್ನ ಪುಟಾಣಿ ಸೊಂಡಿಲಿನಿಂದ ನೀರು ಕುಡಿಯುವುದನ್ನು ನೋಡಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ಕಮೆಂಟ್ಸ್‌ ಮಾಡ್ತಿದ್ದಾರೆ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು ಎಂಬ ಮಾತಿನಂತೆ ಈಗ ತಾಯಾನೆ ಮರಿಯಾನೆಗೆ ಜೀವನ ಪಾಠ ಹೇಳಿಕೊಡುತ್ತಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೂ ಕೆಲವರು ತುಂಬಾ ಮುದ್ದಾಗಿದೆ. ತಾಯಿ ಪ್ರೀತಿಗೆ ಬೇರೆ ಹೋಲಿಕೆ ಇಲ್ಲ. ಮೂಕ ಪ್ರಾಣಿಗಳ ಕಾಳಜಿ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *