ಮನಸ್ಸಿನ ಒತ್ತಡ ಕಡಿಮೆಯಾಗಿ, ಏಕಾಗ್ರತೆ ಹೆಚ್ಚಾಗ ಬೇಕಾ? – ಶಿವನ ಈ ಮಂತ್ರವನ್ನ ದಿನನಿತ್ಯ ಪಠಿಸಿ

ಸೋಮವಾರ ಶಿವನ ವಾರ, ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿನ ಕಷ್ಟಗಳು ದೂರವಾಗಿ ಸುಖ-ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.ಈ ದಿನ ಉಪವಾಸವಿದ್ದು ಅಥವಾ ಶಿವನಿಗೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸುವುದರಿಂದ ಶಿವನು ಬೇಗ ಪ್ರಸನ್ನನಾಗುತ್ತಾನೆ. ಈ ದಿನ ಭಕ್ತಿಯಿಂದ ಪೂಜಿಸಿದರೆ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು, ಆರ್ಥಿಕ ತೊಂದರೆಗಳು ಮತ್ತು ವೃತ್ತಿಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ. ಹಾಗೇ ಶಿವ ಮಂತ್ರ ಹೇಳುವುದ್ದರಿಂದ ನಮ್ಮಲ್ಲಿ ಒಂದು ರೀತಿಯ ದೈವಿಕ ಶಕ್ತಿ ಬರುತ್ತೆ. ಹಾಗಿದ್ರೆ ಆ ಮಂತ್ರ ಯಾವುದು ಅನ್ನೋದ್ದನ್ನ ನೋಡೋದಾದ್ರೆ.
ಓಂ ನಮಃ ಶಿವಾಯ
ಈ ಮಂತ್ರವು ಪಂಚಾಕ್ಷರಿ ಮಂತ್ರ ಎಂದೂ ಪ್ರಸಿದ್ಧವಾಗಿದೆ. ಇದು ಶಿವನ ಪೂಜೆಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಮೂಲ ಮಂತ್ರ. ಈ ಮಂತ್ರವನ್ನು ಪ್ರತಿದಿನವೂ ಅಥವಾ ಸೋಮವಾರದಂದು ವಿಶೇಷವಾಗಿ 108 ಬಾರಿ ಜಪಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ, ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಮೂಡುತ್ತವೆ.
ಈ ಮಂತ್ರದ ಲಾಭಗಳನ್ನ ನೋಡೋಣ ಬನ್ನಿ.
* ನಿಯಮಿತವಾಗಿ ಮಂತ್ರ ಪಠಿಸುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗಿ, ಏಕಾಗ್ರತೆ ಹೆಚ್ಚುತ್ತದೆ.
*ಈ ಮಂತ್ರ ಪಠಣದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ.
*ಜೀವನದಲ್ಲಿ ಎದುರಾಗುವ ಸವಾಲುಗಳು ಮತ್ತು ಅಡೆತಡೆಗಳು ದೂರವಾಗುತ್ತವೆ.
* ಶಿವನ ಕೃಪೆಯಿಂದ ಆರ್ಥಿಕ ಸ್ಥಿತಿ ಸುಧಾರಿಸಿ, ಸಮೃದ್ಧಿ ಹೆಚ್ಚುತ್ತದೆ.
*ಈ ಮಂತ್ರವು ಹಿಂದಿನ ಪಾಪಗಳಿಂದ ಮುಕ್ತಿ ನೀಡಿ ಪುಣ್ಯದ ಫಲವನ್ನು ನೀಡುತ್ತದೆ.

ನೋಡಿರಿ

