ಸಚಿನ್ Vs ಕೊಹ್ಲಿ.. ಯಾರು ಗ್ರೇಟ್? – ದೇವರನ್ನೇ ಮೀರಿಸಿದ್ರಾ KING?
ಕಿಡಿ ಹಚ್ಚಿದ ಎಬಿಡಿ!

ಸಚಿನ್ Vs ಕೊಹ್ಲಿ.. ಯಾರು ಗ್ರೇಟ್? – ದೇವರನ್ನೇ ಮೀರಿಸಿದ್ರಾ KING?ಕಿಡಿ ಹಚ್ಚಿದ ಎಬಿಡಿ!

ಸಚಿನ್ ತೆಂಡೂಲ್ಕರ್ ವರ್ಸಸ್ ವಿರಾಟ್ ಕೊಹ್ಲಿ. ಒಬ್ರು ಕ್ರಿಕೆಟ್ ದೇವರು ಮತ್ತೊಬ್ರು ಕ್ರಿಕೆಟ್​ ಲೋಕದ ದೊರೆ. ಆದ್ರೆ ಈ ಇಬ್ಬರಲ್ಲಿ ಟೆಸ್ಟ್ ಕ್ರಿಕೆಟ್​ ನಲ್ಲಿ ಯಾರು ಬೆಸ್ಟ್ ಎನ್ನುವಂಥ ಚರ್ಚೆಯೊಂದು ಕಳೆದ ಮೂರ್ನಾಲ್ಕು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ. ಅಷ್ಟಕ್ಕೂ ಈ ಕಿಡಿ ಹಚ್ಚಿದ್ದೇ ಸೌತ್ ಆಫ್ರಿಕಾದ ಲೆಜೆಂಡರಿ ಪ್ಲೇಯರ್ ಎಬಿಡಿವಿಲಿಯರ್ಸ್.

ಇದನ್ನೂ ಓದಿ : ಆನ್ ಫೀಲ್ಡ್ ನಲ್ಲೇ IPL ಆಫರ್ – ಜೈಸ್ವಾಲ್ ಮಾಡಿದ್ದು ಸರಿನಾ?

ದಾಖಲೆಗಳ ಸಾಮ್ರಾಟ ಸಚಿನ್ ತೆಂಡೂಲ್ಕರ್ ಆಗಿದ್ರೆ ಆಕ್ರಮಣಕಾಗಿ ಬ್ಯಾಟಿಂಗ್ ಪಿತಾಮಹ ವಿರಾಟ್ ಕೊಹ್ಲಿ.  ಎರಡು ವಿಭಿನ್ನ ಯುಗಗಳ ದಿಗ್ಗಜ ಆಟಗಾರರು. ಟೀಂ ಇಂಡಿಯಾವನ್ನು ವಿಶ್ವಕ್ರಿಕೆಟ್​ನ ಬಾಸ್ ಮಾಡುವಲ್ಲಿ ಇವ್ರಿಬ್ಬರ ಪಾತ್ರ ತುಂಬಾನೇ ದೊಡ್ಡದಿದೆ. ಆದ್ರೆ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್  ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇವ್ರಿಬ್ಬರ ವಿಚಾರವನ್ನ ಪ್ರಸ್ತಾಪ ಮಾಡಿದ್ರು. ವಿದೇಶಿ ನೆಲ ಅಂದ್ರೆ ಓವರ್​ಸೀಸ್ ಪಿಚ್​ಗಳಲ್ಲಿ ಟೆಸ್ಟ್ ಮಾದರಿ ಅಂತಾ ಬಂದಾಗ ಸಚಿನ್ ತೆಂಡೂಲ್ಕರ್‌ಗಿಂತ ವಿರಾಟ್ ಕೊಹ್ಲಿ ಅವರೇ ಹೆಚ್ಚು ಶ್ರೇಷ್ಠ ಹಾಗೂ ಬಲಿಷ್ಠ ಆಟಗಾರ ಅಂದಿದ್ದಾರೆ. ಎಬಿಡಿ ನೀಡಿದ್ದ ಇದೇ ಹೇಳಿಕೆಯೇ ಈಗ ಪರವಿರೋಧದ ಬಿರುಗಾಳಿ ಎಬ್ಬಿಸಿದೆ.

ಸಚಿನ್ ಟ್ರೆಂಡ್ ಸೆಟ್ಟರ್.. ಯಶಸ್ಸು ಸಾಧಿಸಿದ ಕೊಹ್ಲಿ!

ಟೆಸ್ಟ್ ಕ್ರಿಕೆಟ್​​ನಲ್ಲಿ ಭಾರತ ಹೇಗೆ ಡೇಂಜರಸ್ ಟೀಂ ಆಯ್ತು ಅನ್ನೋ ಬಗ್ಗೆ ಮಾತ್ನಾಡಿದ ಎಬಿಡಿ ಭಾರತದ ಬ್ಯಾಟರ್​ಗಳು ವಿದೇಶದ ಬೌನ್ಸಿ ಹಾಗೂ ಸೀಮಿಂಗ್ ಪಿಚ್‌ಗಳಲ್ಲೂ ಅತ್ಯುತ್ತಮವಾಗಿ ಆಡಬಹುದು ಎಂಬುದನ್ನು ಮೊದಲು ತೋರಿಸಿಕೊಟ್ಟವರು ಸಚಿನ್ ತೆಂಡೂಲ್ಕರ್. ಸಚಿನ್ ಟ್ರೆಂಡ್ ಸೆಟ್ಟರ್. ಸಚಿನ್ ಹಾಕಿಕೊಟ್ಟ ಆ ಹಾದಿಯನ್ನು ವಿರಾಟ್ ಕೊಹ್ಲಿ ಮತ್ತೊಂದು ಹಂತಕ್ಕೆ ಕೊಂಡೊಯ್ದರು. ವಿದೇಶಿ ಮಣ್ಣಿನಲ್ಲಿ ಕೊಹ್ಲಿ ಸಚಿನ್‌ಗಿಂತಲೂ ಹೆಚ್ಚು ಬಲಿಷ್ಠವಾಗಿ ಪ್ರದರ್ಶನ ನೀಡಿ, ತಂಡವನ್ನ ಯಶಸ್ವೀ ಟೀಂ ಮಾಡಿದ್ರು. ಕೊಹ್ಲಿ ಮತ್ತು ಸಚಿನ್ ವಿದೇಶದಲ್ಲಿ ಸೃಷ್ಟಿಸಿದ ಈ ಸುನಾಮಿಯಿಂದಲೇ ಈಗ ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಯುವ ಆಟಗಾರರು ವಿದೇಶಿ ಟೆಸ್ಟ್‌ನಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಗುತ್ತಿದೆ ಎಂದು ಎಬಿಡಿ ಹೇಳಿದ್ರು.  ಡಿವಿಲಿಯರ್ಸ್ ಅವರ ಇದೇ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ರಿಕೆಟ್ ಎಕ್ಸ್​ಪರ್ಟ್ಸ್, ಫ್ಯಾನ್ಸ್, ಮಾಜಿ ಕ್ರಿಕೆಟರ್ಸ್ ಎಲ್ರೂ ಅಂಕಿಅಂಶಗಳನ್ನ ಮುಂದಿಟ್ಟು ಕೊಹ್ಲಿಗಿಂದಲೂ ಸಚಿನ್ ಗ್ರೇಟ್ ಅಂತಿದ್ದಾರೆ.

ದೇವರು ಮತ್ತು ರಾಜನ ಸಾಧನೆ!

ದಾಖಲೆ                                  ಸಚಿನ್ ತೆಂಡೂಲ್ಕರ್                    ವಿರಾಟ್ ಕೊಹ್ಲಿ

ಟೆಸ್ಟ್ ಪಂದ್ಯಗಳು                            200                                        123

ಇನ್ನಿಂಗ್ಸ್                                         329                                           210

ರನ್                                                  15,921                                      9,230

ಬ್ಯಾಟಿಂಗ್ ಸರಾಸರಿ                       53.78                                      46.85

ಗರಿಷ್ಠ ಸ್ಕೋರ್                             248*                                         254*

ಶತಕಗಳು                                        51                                           30

ಅರ್ಧಶತಕಗಳು                            68                                            31

ದ್ವಿಶತಕಗಳು                                 6                                                  7

ವಿದೇಶಿ ಟೆಸ್ಟ್‌ಗಳು                         63                                             66

ರನ್                                                8,705                                     4,774

ಸರಾಸರಿ                                        51.30                                      42.08

ಶತಕಗಳು                                          17                                        12

ವಿದೇಶಿ ನೆಲದಲ್ಲಿ ಪರ್ಫಾಮೆನ್ಸ್ ನೋಡಿದಾಗ್ಲೂ ಸಚಿನ್ ಕೊಹ್ಲಿಗಿಂತ ಮುಂದಿದ್ದಾರೆ.  ಸಚಿನ್ ತೆಂಡೂಲ್ಕರ್ ಸುಮಾರು 24 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದರು. ವೆಸ್ಟ್ ಇಂಡೀಸ್‌ನ ವೇಗದ ಬೌಲರ್‌ಗಳಿಂದ ಹಿಡಿದು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನ ಬೌಲಿಂಗ್ ಅಟ್ಯಾಕ್​ಗಳನ್ನೂ ಸಮರ್ಥವಾಗಿ ಎದುರಿಸಿ ಲಾಂಗ್ ಟೈಂ ಯಶಸ್ವೀ ಬ್ಯಾಟರ್ ಆಗಿದ್ರು. 1989ರ ನವೆಂಬರ್ 15 ರಂದು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಆರಂಭಿಸಿದ ಸಚಿನ್ 2013ರ ನವೆಂಬರ್ 16ಕ್ಕೆ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ರು. ಇನ್ನು ವಿರಾಟ್ ಕೊಹ್ಲಿ ಬಗ್ಗೆ ನೋಡೋದಾದ್ರೆ 2011ರ ಜೂನ್ 20ರಂದು ತಮ್ಮ ಮೊದಲ ಟೆಸ್ಟ್ ಪಂದ್ಯ ಆಡಿದ್ರು. ಹಾಗೇ 2025ರ ಮೇ 12ರಂದು ಅಧಿಕೃತವಾಗಿ ಟೆಸ್ಟ್​​ಗೆ ನಿವೃತ್ತಿ ಘೋಷಣೆ ಮಾಡಿದ್ರು.  ಇನ್ನು ವಿರಾಟ್ ಕೊಹ್ಲಿಯವ್ರ ಅತಿದೊಡ್ಡ ಪ್ಲಸ್ ಪಾಯಿಂಟ್ ಆಧುನಿಕ ಕ್ರಿಕೆಟ್​ನಲ್ಲಿ ಫಿಟ್ನೆಸ್ ಕ್ರಾಂತಿ ಮಾಡಿದ್ದು, ಆಕ್ರಮಣಕಾರಿ ಮನೋಭಾವ ಮತ್ತು ವಿದೇಶಿ ಟೆಸ್ಟ್ ಕ್ರಿಕೆಟ್‌ನಲ್ಲಿನ ಬಿಗ್ ಇಂಪ್ಯಾಕ್ಟ್.. ಅದ್ರಲ್ಲೂ  ನಾಯಕನಾಗಿ ಭಾರತವನ್ನು ವಿದೇಶಗಳಲ್ಲಿ ಟಫ್ ಕಾಂಪಿಟೇಟರ್ ಆಗಿ ರೂಪಿಸುವಲ್ಲಿ ಕೊಹ್ಲಿ ಪಾತ್ರ ತುಂಬಾನೇ ದೊಡ್ಡದಿದೆ. ಹೀಗಾಗಿ ಕ್ರಿಕೆಟ್ ಅಂತಾ ಬಂದಾಗ ಭಾರತದ ಪಾಲಿಗೆ ಸಚಿನ್ ಮತ್ತು ಕೊಹ್ಲಿ ಇಬ್ಬರೂ ಗ್ರೇಟೇ. ಅವ್ರು ಹೆಚ್ಚು ಇವ್ರು ಕಮ್ಮಿ ಅನ್ನೋ ಆಗಿಲ್ಲ. ಭಾರತದ ಪರ ಆಡಿರುವ ಪ್ರತಿಯೊಬ್ಬ ಆಟಗಾರನೂ ತನ್ನದೇ ಆದ ಕೊಡುಗೆ ನೀಡಿದ್ರಿಂದಲೇ ಭಾರತ ಇವತ್ತು ವಿಶ್ವಕ್ರಿಕೆಟ್ ನ ಬಾಸ್ ಆಗಿದೆ.

Shantha Kumari