ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಈ ಪನ್ನೀರು ರಾಜ್ಯದಲ್ಲಿ ಒಂದು ವರ್ಷ ಬ್ಯಾನ್‌

 ಪನ್ನೀರ್ ಪ್ರಿಯರಿಗೆ ಬಿಗ್ ಶಾಕ್ – ಈ ಪನ್ನೀರು ರಾಜ್ಯದಲ್ಲಿ ಒಂದು ವರ್ಷ ಬ್ಯಾನ್‌

 ಪನ್ನೀರ್ ಪ್ರಿಯರಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಹೋಟೆಲ್, ರೆಸ್ಟೋರೆಂಟ್ ಹಾಗೂ ಆಹಾರ ಸಂಸ್ಥೆಗಳಲ್ಲಿ ಕೃತಕವಾಗಿ ತಯಾರಿಸುವ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದ ಹಲವು ಹೋಟೆಲ್, ರೆಸ್ಟೋರೆಂಟ್ ಹಾಗೂ ಧಾಬಾಗಳಲ್ಲಿ ಅಸಲಿ ಡೈರಿ ಪನ್ನೀರ್ ಬದಲಿಗೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಕೃತಕ ಅನಲಾಗ್ ಪನ್ನೀರ್ ಅನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಅನಲಾಗ್ ಪನ್ನೀರ್ ಮಾರಾಟ ಮಾಡುವ ಹಾಗೂ ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಛತ್ತೀಸ್‌ಗಢ, ಮಹಾರಾಷ್ಟ್ರ, ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ಬಳಿಕ ಇದೀಗ ಕರ್ನಾಟಕದಲ್ಲೂ ನಕಲಿ ಮತ್ತು ಕೃತಕ ಪನ್ನೀರ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಏನಿದು ಅನಲಾಗ್ ಪನ್ನೀರ್

ನೋಡಲು ತದ್ರೂಪು ಅಸಲಿ ಪನ್ನೀರ್‌ನಂತೆಯೇ ಕಾಣುವ ಇದು, ವಾಸ್ತವವಾಗಿ ಅಸಲಿ ಹಾಲಿನಿಂದ ತಯಾರಿಸಿದ್ದಲ್ಲ.  ಹಾಲಿನ ಬದಲಾಗಿ ಆರೋಗ್ಯಕ್ಕೆ ಹಾನಿಕಾರಕವಾದ ಪಾಮ್ ಆಯಿಲ್, ಸಸ್ಯಜನ್ಯ ಕೊಬ್ಬು (Vegetable Fat), ರಾಸಾಯನಿಕಗಳು ಮತ್ತು ಎಮಲ್ಸಿಫೈಯರ್‌ಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದು ಅಸಲಿ ಪನ್ನೀರ್‌ಗಿಂತ ಅತ್ಯಂತ ಅಗ್ಗವಾಗಿದ್ದು, ಹೆಚ್ಚಿನ ದಿನಗಳ ಕಾಲ ಹಾಳಾಗದಂತೆ ಸಂಗ್ರಹಿಸಿಡಬಹುದು. ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಸುಲಭವಾಗಿ ಕೆಡುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಲಾಭದ ಆಸೆಗೆ ಬಿದ್ದು, ಗ್ರಾಹಕರಿಗೆ ಅಸಲಿ ಪನ್ನೀರ್ ಎಂದು ನಂಬಿಸಿದೆ.

ಹಾಲಿನ ಉತ್ಪನ್ನವೇ ಕಡ್ಡಾಯ: ಪನ್ನೀರ್ ತಯಾರಿಕೆಗೆ ಕಡ್ಡಾಯವಾಗಿ ಶುದ್ಧ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಸಬೇಕು.

 

Kishor KV

Leave a Reply

Your email address will not be published. Required fields are marked *