40 ದಿನಗಳಿಂದಲೂ ‘ಹುಚ್ಚು ದೊರೆ’ ನಾಪತ್ತೆ – ಅನಾರೋಗ್ಯವೋ.. ಶಕ್ತಿಪ್ರದರ್ಶನದ ತಂತ್ರವೋ..!?

40 ದಿನಗಳಿಂದಲೂ ‘ಹುಚ್ಚು ದೊರೆ’ ನಾಪತ್ತೆ – ಅನಾರೋಗ್ಯವೋ.. ಶಕ್ತಿಪ್ರದರ್ಶನದ ತಂತ್ರವೋ..!?

ಸದಾ ವಿವಾದಗಳ ಸುತ್ತಲೇ ಗಿರಕಿ ಹೊಡೆಯುತ್ತಾ ಹುಚ್ಚು ದೊರೆ ಅಂತಾ ಕರೆಸಿಕೊಳ್ಳೋ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬೃಹತ್ ಸೇನಾ ಮೆರವಣಿಗೆಗೂ ಮುನ್ನ ಕಿಮ್ ನಾಪತ್ತೆಯಾಗಿದ್ದಾರೆ. ಕಳೆದ 40 ದಿನಗಳಿಂದಲೂ ಕಿಮ್ ಎಲ್ಲೂ ಕಾಣಿಸಿಕೊಂಡಿಲ್ಲ. ಭಾನುವಾರ ನಡೆದ ಕಮ್ಯುನಿಸ್ಟ್ ಪಕ್ಷದ ಸಭೆಗೂ ಕಿಮ್ ಜಾಂಗ್ ಹಾಜರಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದ್ದು, ಮತ್ತೆ ಆರೋಗ್ಯದ ಬಗ್ಗೆ ಊಹಾಪೋಹಗಳೆದ್ದಿವೆ. ಈ ಮಹತ್ವದ ಸಭೆಗೆ ಕಿಮ್ ಜಾಂಗ್ ಉನ್ ಗೈರಾಗಿರುವುದು ಇದು ಮೂರನೇ ಬಾರಿ. ಹೀಗಿರುವಾಗ ಅವರ ಆರೋಗ್ಯದ ಬಗ್ಗೆ ಈಗ ಚರ್ಚೆ ನಡೆದಿದೆ.

ಇದನ್ನೂ ಓದಿ : ಅನ್ಯಕೋಮಿನ ಯುವಕನ ಕಗ್ಗೊಲೆ.. ಭುಗಿಲೆದ್ದ ಜ್ವಾಲೆ- ಫೇಸ್ ಬುಕ್, ವಾಟ್ಸ್ ಆ್ಯಪ್ ಸೇರಿ 23 ಆ್ಯಪ್ ಗಳಿಗೆ ನಿಷೇಧ!

ಫೆಬ್ರವರಿ 8ರಂದು ಕೊರಿಯನ್ ಪೀಪಲ್ಸ್ ಆರ್ಮಿ ಸ್ಥಾಪನೆಯ 75 ನೇ ವಾರ್ಷಿಕೋತ್ಸವ ಇದೆ.. ಅಂದ್ರೆ ನಾಳೆ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದ್ರೆ ಕಿಮ್ ಜಾಂಗ್ ಈ ಪರೇಡ್ ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಚರ್ಚೆ ನಡೆಯುತ್ತಿದೆ. ಕಿಮ್ ಜಾಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ಹೇಳಿವೆ.

ಮೂಲಗಳ ಪ್ರಕಾರ ಫೆಬ್ರವರಿ 8 ರಂದು ನಡೆಯಲಿರುವ ಮಿಲಿಟರಿ ಪರೇಡ್‌ನಲ್ಲಿ ಕಿಮ್ ಜಾಂಗ್ ಉನ್ ಭಾಗವಹಿಸಬಹುದು. ಈ ಮೆರವಣಿಗೆಯೊಂದಿಗೆ ತನ್ನ ಪರಮಾಣು ಸಾಮರ್ಥ್ಯವನ್ನು ಅಮೆರಿಕ ಮತ್ತು ಏಷ್ಯಾದ ಇತರ ಮಿತ್ರರಾಷ್ಟ್ರಗಳಿಗೆ ತೋರಿಸಲಿದ್ದಾರೆ ಎನ್ನಲಾಗಿದೆ. ಉತ್ತರ ಕೊರಿಯಾ 2022 ರಲ್ಲಿ 70 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ವರದಿಗಳ ಪ್ರಕಾರ, ಈ ಕ್ಷಿಪಣಿಗಳನ್ನು ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಲು ಅಥವಾ ಅಮೆರಿಕದ ಮುಖ್ಯ ಭೂಭಾಗವನ್ನು ವಶಪಡಿಸಿಕೊಳ್ಳಲು ಸಿದ್ಧಗೊಳಿಸಿರಬಹುದು ಎಂದು ಅಂದಾಜಿಸಲಾಗದೆ. ಕಿಮ್ ಜಾಂಗ್ ಉನ್​ರ ಸೇನಾ ಕಾರ್ಯಾಚರಣೆಯನ್ನು ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾ ನಿರಂತರವಾಗಿ ಪ್ರಶ್ನಿಸುತ್ತಿರುವುದಕ್ಕೆ ಇದೇ ಕಾರಣ.

ಕಿಮ್ ಜಾಂಗ್ ಉನ್ ಹೀಗೆ ನಾಪತ್ತೆಯಾಗಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅವರು 40 ದಿನಗಳ ಕಾಲ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿರಲಿಲ್ಲ. 2021 ರ ಅಂತ್ಯದ ವೇಳೆಯೂ ಸುಮಾರು 30 ದಿನಗಳವರೆಗೆ ನಾಪತ್ತೆಯಾಗಿದ್ದರು. ಹಾಗೇ ಮೇ 2021 ಮತ್ತು ಏಪ್ರಿಲ್ 2020 ರಲ್ಲಿ ಕಿಮ್ ಜಾಂಗ್ ಬಹಳ ಸಮಯದವರೆಗೆ ಕಾಣೆಯಾಗಿದ್ದರು. ಆಗಲೂ ಅವರ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿದ್ದವು.

suddiyaana