ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯ ಬೇಕಾ? – ಶನಿವಾರ ಈ ಕೆಲಸಗಳನ್ನ ಮಾಡಿ

ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯ ಬೇಕಾ? – ಶನಿವಾರ ಈ ಕೆಲಸಗಳನ್ನ ಮಾಡಿ

ಶನಿವಾರವನ್ನು ನ್ಯಾಯದ ದೇವನೆಂದು ಗುರುತಿಸಲಾಗುವ ಶನಿದೇವನಿಗೆ ಸಮರ್ಪಿಸಲಾಗಿದೆ. ಈ ದಿನ ಶನಿದೇವನನ್ನು ಶಾಸ್ತ್ರೋಕ್ತವಾಗಿ ಪೂಜಿಸಲಾಗುತ್ತದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ತಕ್ಕಂತೆ ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತಾನೆ ಎನ್ನುವ ನಂಬಿಕೆಯಿದೆ. ಶನಿವಾರದಂದು ಈ ಕೆಲಸಗಳನ್ನು ಮಾಡುವುದರಿಂದ ಶನಿಯು ಶೀಘ್ರದಲ್ಲೇ ನಮ್ಮ ಮೇಲೆ ಸಂತೋಷದ ಮಳೆಯನ್ನೇ ಸುರಿಸುತ್ತಾನೆ.

ಇದನ್ನೂ ಓದಿ: ಆಂಜನೇಯ ಸ್ವಾಮಿ ಕೃಪೆ ನಿಮ್ಮ ಮೇಲೆ ಇರಬೇಕಾ? – ಮಂಗಳವಾರ ಈ ಸಿಹಿಯನ್ನ ಹಂಚಿ

ಶನಿವಾರದಂದು ಶನಿ ಯಂತ್ರವನ್ನು ಬಳಸುವುದರಿಂದ ಶನಿದೇವನ ಆಶೀರ್ವಾದವು ಸದಾ ನಿಮಗೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಈ ದಿನ ಕಪ್ಪು ಹಸುವಿಗೆ ಉದ್ದಿನಬೇಳೆ ಅಥವಾ ಎಳ್ಳನ್ನು ಕೂಡ ತಿನ್ನಲು ನೀಡಬೇಕು. ಇದನ್ನು ಮಾಡುವುದರಿಂದ ಒಬ್ಬ ವ್ಯಕ್ತಿಯು ಆರ್ಥಿಕ ಲಾಭವನ್ನು ಪಡೆದುಕೊಳ್ಳುತ್ತಾನೆ.

ಶನಿವಾರದಂದು ಎಳ್ಳು, ಕಪ್ಪು ಉದ್ದು, ಎಣ್ಣೆ, ಬೆಲ್ಲ, ಕಪ್ಪು ಬಟ್ಟೆ ಅಥವಾ ಕಬ್ಬಿಣವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ದಾನ ಮಾಡುವುದರಿಂದ ಆ ವ್ಯಕ್ತಿಯು ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾನೆ.

ಶನಿವಾರದಂದು ಸೂರ್ಯೋದಯಕ್ಕೆ ಮೊದಲು ಎದ್ದು ಶುದ್ಧರಾಗಿ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು. ಈ ಸಮಯದಲ್ಲಿ, ‘ಓಂ ಶಂ ಶನೈಶ್ಚರಾಯ ನಮಃ’ ಎನ್ನುವ ಶನಿ ಮಂತ್ರವನ್ನು ಪಠಿಸಿ. ಈ ರೀತಿ ಮಾಡುವುದರಿಂದ ಶನಿದೇವನಿಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಲಾಗುತ್ತದೆ.

ಶನಿವಾರದಂದು ಅರಳಿ ಮರದ ಕೆಳಗೆ ಒಂಬತ್ತು ಸಾಸಿವೆ ಎಣ್ಣೆಯ ದೀಪಗಳನ್ನು ಬೆಳಗಿಸಬೇಕು ಎನ್ನುವ ನಂಬಿಕೆಯಿದೆ. ಇದರೊಂದಿಗೆ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಬೇಕು. ಹೀಗೆ ಮಾಡುವುದರಿಂದ ಜನರು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

Kishor KV

One thought on “ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯ ಬೇಕಾ? – ಶನಿವಾರ ಈ ಕೆಲಸಗಳನ್ನ ಮಾಡಿ

Leave a Reply

Your email address will not be published. Required fields are marked *