ನಾಚಿಕೆ ಬಿಟ್ಟ KL ರಾಹುಲ್ – ಕಿರಿಯರಿಂದ ಕಲಿಯುತ್ತೇನೆ ಎಂದಿದ್ದೇಕೆ?
ಭಾರತದ ಡ್ರೆಸ್ಸಿಂಗ್ ರೂಂ ಹೀಗಿದ್ಯಾ?

ನಾಚಿಕೆ ಬಿಟ್ಟ KL ರಾಹುಲ್ – ಕಿರಿಯರಿಂದ ಕಲಿಯುತ್ತೇನೆ ಎಂದಿದ್ದೇಕೆ?ಭಾರತದ ಡ್ರೆಸ್ಸಿಂಗ್ ರೂಂ ಹೀಗಿದ್ಯಾ?

ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಯಲ್ಲೂ ಡ್ರೆಸ್ಸಿಂಗ್ ರೂಮ್ ಅಂದ್ರೆ ಕೇವಲ ಆಟಗಾರರು ಬಟ್ಟೆ ಬದಲಿಸೋ ಅಥವಾ ರೆಸ್ಟ್ ಮಾಡೋ ಜಾಗ ಅಲ್ಲ. ಇಡೀ ತಂಡದ ಯಶಸ್ಸಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಒಂದು ಪವಿತ್ರ ಜಾಗ ಅಂದ್ರೂ ತಪ್ಪಿಲ್ಲ. ಟೀಂ ಇಂಡಿಯಾದಲ್ಲಿ ಇಂಥಾ ಡ್ರೆಸ್ಸಿಂಗ್ ರೂಂ ಹೇಗಿದೆ ಅನ್ನೋ ಬಗ್ಗೆ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಹಲವು ವಿಚಾರಗಳನ್ನ ಶೇರ್ ಮಾಡಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಅಷ್ಟು ಸೀನಿಯರ್ ಆದ್ರೂ ಅದೆಷ್ಟು ಸಿಂಪಲ್ ಕೆಎಲ್ ಅನ್ನೋದೂ ಗೊತ್ತಾಗಿದೆ.

ಇದನ್ನೂ ಓದಿ : HITಮ್ಯಾನ್ ಸಮರಾಭ್ಯಾಸ ಶುರು – ವಿಶ್ವಕಪ್ ನಲ್ಲಿ ಓಪನರ್ ಸ್ಲಾಟ್ ಫಿಕ್ಸ್

2014ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೆಎಲ್ ರಾಹುಲ್, ಒಂದು ಕಾಲದಲ್ಲಿ ತಂಡದ ಅತ್ಯಂತ ಕಿರಿಯ ಆಟಗಾರನಾಗಿದ್ರು. ಆದ್ರೆ ಈಗ 26 ವರ್ಷದ ಶುಭಮನ್ ಗಿಲ್ ನಾಯಕತ್ವದ ತಂಡದಲ್ಲಿ ಅತ್ಯಂತ ಹಿರಿಯ ಬ್ಯಾಟರ್ ಆಗಿದ್ದಾರೆ. ಹೀಗಿದ್ರೂ ತಂಡದ ಕಿರಿಯ ಆಟಗಾರರಿಂದ ಕಲಿಯಲು ಅನುಭವ ಮತ್ತು ಹಿರಿತನ ಅಡ್ಡಿಯಾಗಬಾರದು ಎನ್ನೋ ಮೂಲಕ ತಮ್ಮ ಸಿಂಪ್ಲಿಸಿಟಿಯನ್ನೂ ರಿವೀಲ್ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಭಾರತದ ಡ್ರೆಸ್ಸಿಂಗ್ ರೂಂ ಬಗೆಗಿನ ಹಲವು ವಿಚಾರಗಳನ್ನ ಕೆಎಲ್ ರಾಹುಲ್ ಶೇರ್ ಮಾಡಿದ್ದಾರೆ.

ತಂಡದಲ್ಲಿ ನಿಮ್ಮಿಂದ ಕಲಿಯಲ್ಲ ಎನ್ನುವ ಅಹಂಕಾರ ಯಾರಲ್ಲೂ ಇಲ್ಲ!

ಭಾರತದ ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ ಮಾತನಾಡಿರೋ ರಾಹುಲ್, ತಂಡದಲ್ಲಿ ಯಾರೂ ಕೂಡ ‘ನಿಮ್ಮಿಂದ ನಾನು ಏನನ್ನೂ ಕಲಿಯಲಾರೆ’ ಎನ್ನುವ ಅಹಂಕಾರ ಅಥವಾ ‘ಅವರು ಅಷ್ಟೊಂದು ಪಂದ್ಯಗಳನ್ನು ಆಡಿದ್ದಾರೆ, ಅವರ ಬಳಿ ಹೋಗಿ ಹೇಗೆ ಮಾತನಾಡಲಿ  ಎಂಬ ಸಂಕೋಚವನ್ನು ಇಟ್ಟುಕೊಂಡಿಲ್ಲ ಎಂದಿದ್ದಾರೆ.   ಭಾರತ ತಂಡದ ಡ್ರೆಸ್ಸಿಂಗ್ ರೂಮ್ ಯಾವಾಗಲೂ ಮುಕ್ತವಾಗಿದ್ದು, ಆಟಗಾರರು ವಯಸ್ಸು ಅಥವಾ ಸೀನಿಯಾರಿಟಿ ಲೆಕ್ಕಿಸದೆ ಪರಸ್ಪರರಿಂದ ಕಲಿಯುತ್ತಲೇ ಇರುತ್ತಾರೆ. ಹಿರಿಯ ಆಟಗಾರರಾಗಿರಲಿ ಅಥವಾ 20 ಟೆಸ್ಟ್ ಆಡಿರುವ 26 ವರ್ಷದ ಯುವ ಆಟಗಾರನೇ ಇರಲಿ, ಸಹ ಆಟಗಾರನಿಗೆ ಸಹಾಯ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಹಿರಿಯ ಆಟಗಾರರಿಗೂ ಹೊಸ ಆಟಗಾರರಿಂದ ಕಲಿಯಲು ಮುಕ್ತ ಅವಕಾಶವಿರುತ್ತದೆ. ನಾನು ಕೂಡ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಶಾಟ್‌ಗಳ ಬಗ್ಗೆ ಚರ್ಚಿಸುತ್ತೇನೆ ಎನ್ನುವ ಮೂಲಕ ಡ್ರೆಸ್ಸಿಂಗ್ ರೂಂ ಇಂಪಾರ್ಟೆನ್ಸ್ ಬಗ್ಗೆ ತಿಳಿಸಿದ್ದಾರೆ. ಹಾಗೇ ತಾವು ಟೆಸ್ಟ್ ತಂಡಕ್ಕೆ ಬಂದ ಆರಂಭದ ದಿನಗಳಲ್ಲಿ ಭಾರತೀಯ ತಂಡದಲ್ಲಿನ ತಮ್ಮ ಎಕ್ಸ್​ಪೀರಿಯನ್​​ನೂ ಶೇರ್ ಮಾಡಿದ್ದಾರೆ. ಅಲ್ಲಿ 60 ಅಥವಾ 70 ಟೆಸ್ಟ್‌ಗಳನ್ನು ಆಡಿದ ಆಟಗಾರರು 20 ಅಥವಾ 30 ಪಂದ್ಯಗಳನ್ನು ಆಡಿದ್ದರೂ ಅವರಿಂದ ಕಲಿಯಲು ಸಿದ್ಧರಿದ್ದರು. ಹೀಗಾಗಿ ನಾನು ಅವರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಲು ಆಟಗಾರರಲ್ಲಿ ಯಾವುದೇ ನಾಚಿಕೆ ಅಥವಾ ಅಹಂ ಇರಲಿಲ್ಲ. ಆದ್ದರಿಂದ ಇದು ಯಾವಾಗಲೂ ಮುಕ್ತ ಡ್ರೆಸ್ಸಿಂಗ್ ಕೋಣೆಯಾಗಿದೆ ಮತ್ತು ಆಟಗಾರರು ಪರಸ್ಪರ ಕಲಿಯುತ್ತಿದ್ದಾರೆ ಎಂದಿದ್ದಾರೆ. ಅಷ್ಟಕ್ಕೂ ರಾಹುಲ್ ಡ್ರೆಸ್ಸಿಂಗ್ ರೂಂ ಬಗ್ಗೆ ಇಷ್ಟೆಲ್ಲಾ ಹೇಳೋಕೆ ಕಾರಣವೂ ಇದೆ.

ಪಂದ್ಯದ ಯಶಸ್ಸು ನಿರ್ಧಾರ ಮಾಡುವುದೇ ಡ್ರೆಸ್ಸಿಂಗ್ ರೂಂ ರಣತಂತ್ರ!

ಆಟಗಾರರಿಗೆ ಡ್ರೆಸ್ಸಿಂಗ್ ರೂಂ ಅನ್ನೋದು ಒಂದು ಮನೆ ಇದ್ದಂತೆ. ಅಲ್ಲಿ ಎಲ್ಲವೂ ಬ್ಯಾಲೆನ್ಸ್ ಆಗಿದ್ದಾಗ ಪೀಸ್​ಫುಲ್ ಇದ್ದಾಗ ಮಾತ್ರವೇ ಆನ್ ಫೀಲ್ಡ್ ಪ್ರದರ್ಶನ ಕೂಡ ಅಂದುಕೊಂಡಂತೇ ಬರೋದು. ಅಲ್ಲಿ ನಡೆಯುವ ತಂತ್ರಗಾರಿಕೆಗಳೇ ಮೈದಾನದಲ್ಲಿ ಎಕ್ಸಿಕ್ಯೂಷನ್ ಆಗೋದು. ಇದೇ ಕಾರಣಕ್ಕೆ ಕ್ರಿಕೆಟ್‌ನಲ್ಲಿ ಡ್ರೆಸ್ಸಿಂಗ್ ರೂಮ್  ಅನ್ನು ತಂಡದ ಇಂಜಿನ್ ರೂಮ್ ಅಥವಾ ಪವಿತ್ರ ತಾಣ ಎನ್ನಲಾಗುತ್ತೆ. ಮೈದಾನದಲ್ಲಿ 11 ಆಟಗಾರರು ಮಾತ್ರ ಆಡಿದರೂ, ಆ 11 ಜನರ ಯಶಸ್ಸನ್ನು ನಿರ್ಧರಿಸುವುದು ಈ ನಾಲ್ಕು ಗೋಡೆಗಳ ಮಧ್ಯೆ ಇರುವ ವಾತಾವರಣ. ಟಾಸ್ ಇಂದ ಹಿಡ್ದು ಎದುರಾಳಿ ತಂಡದ ಪ್ರತೀ ಆಟಗಾರರನ ಬೇಟೆ, ಮ್ಯಾಚ್ ನಡೆಯುವಾಗಲೇ ಪಿಚ್​ನ ವರ್ತನೆ, ಪ್ರೆಶರ್​ನಿಂದ ಹೊರ ಬರಲು, ಕೋಚ್​ಗಳು ನೀಡುವ ಸಲಹೆಗಳು, ಸಹ ಆಟಗಾರರ ಜೊತೆಗಿನ ಫನ್ನಿ ಮೂಮೆಂಟ್ಸ್, ಸೀನಿಯರ್-ಜೂನಿಯರ್​ಗಳ ನಡುವಿನ ಬಾಂಡಿಂಗ್, ಪರಸ್ಪರ ಅನುಭವಗಳನ್ನ ಶೇರ್ ಮಾಡಿಕೊಳ್ಳೋದು, ಅಥವಾ ಯಾವುದೋ ಒಂದು ದೊಡ್ಡ ಸೋಲಿನ ಬಳಿಕ ನಡೆಯುವ ಸ್ಪೂರ್ತಿದಾಯಕ ಮಾತುಗಳೇ ಪ್ರತೀ ಆಟಗಾರರನ್ನ ಮತ್ತಷ್ಟು ಗಟ್ಟಿ ಮಾಡೋದು. ಇನ್ನೂ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ  ಡ್ರೆಸ್ಸಿಂಗ್ ರೂಮ್‌ನಲ್ಲಿ ನೆಮ್ಮದಿ ಮತ್ತು ಒಗ್ಗಟ್ಟು ಇದ್ದರೆ ಮಾತ್ರ, ಮೈದಾನದಲ್ಲಿ ಪಂದ್ಯಗಳನ್ನ ಗೆಲ್ಲೋಕೆ ಸಾಧ್ಯ. ಸೋ ಇದನ್ನೇ ಕೆಎಲ್ ರಾಹುಲ್ ಅಷ್ಟೊಂದು ಸುಂದರವಾಗಿ ಹೇಳಿದ್ದಾರೆ. ತಾವೊಬ್ಬ ಹಿರಿಯ ಆಟಗಾರನಾಗಿದ್ರೂ ಯಾವ ಹಮ್ಮೂಬಿಮ್ಮೂ ಇಲ್ಲದೆ ಈಗಲೂ ನಾನು ಕಲಿಯುತ್ತೇನೆ ಅನ್ನೋ ಮೂಲಕ ಎಲ್ಲರ ಮನಗೆದ್ದಿದ್ದಾರೆ.

Shantha Kumari

Leave a Reply

Your email address will not be published. Required fields are marked *