ಪತ್ನಿ ಮೇಲೆ ಪೇಂಟ್ ಥಿನ್ನರ್ ಸುರಿದು ಬೆ*ಕಿ ಹಚ್ಚಿದ ಪತಿ – ನೇಪಾಳದ ಪಾಪಿ ಗಂಡ ಖಾಕಿ ವಶ

ಪತ್ನಿ ಮೇಲೆ ಪೇಂಟ್ ಥಿನ್ನರ್ ಸುರಿದು ಬೆ*ಕಿ ಹಚ್ಚಿದ ಪತಿ – ನೇಪಾಳದ ಪಾಪಿ ಗಂಡ ಖಾಕಿ ವಶ

ಪತ್ನಿ ಮೇಲೆ ಐದು ಲೀಟರ್ ಪೇಂಟ್ ಥಿನ್ನರ್ ಸುರಿದ ಪತಿ  ಬೆಂಕಿ ಹಚ್ಚಿ, ಹತ್ಯೆ ಮಾಡಲು ಯತ್ನಿಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.  ಸೋಮವಾರ  ಸೂರ್ಯನಗರ ಪೊಲೀಸ್ ವ್ಯಾಪ್ತಿಯ ಚಂದಾಪುರ ವೃತ್ತದ ಬಳಿ  ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನದಂತಹ ಲೋಹದ ಪುಡಿ ಪತ್ತೆ – ಇಬ್ಬರು ಪ್ರಯಾಣಿಕರು ಏರ್‌ಪೋರ್ಟ್ ಪೊಲೀಸ್ ವಶಕ್ಕೆ

ಸಂತ್ರಸ್ತ ಮಹಿಳೆಯನ್ನು ನೇಪಾಳ ಮೂಲದ ಗಂಗಾ ಕುಮಾರಿ (29) ಎಂದು ಗುರ್ತಿಸಲಾಗಿದೆ. ಪತಿ ಬೆಂಕಿ ಹಚ್ಚುತ್ತಿದ್ದಂತೆಯೇ ಗಂಗಾ ಅವರು ಮನೆಯಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ನೀರಿನಿಂದ ಬೆಂಕಿ ನಂದಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಆಕೆಯ ನೆರವಿಗೆ ಬಂದಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿಯನ್ನು ಮಹೇಶ್ ಬಹದ್ದೂರ್ ಎಂದು ಗುರ್ತಿಸಲಾಗಿದ್ದು, ಈತ ಮದ್ಯವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ದಂಪತಿಗಳು 10 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಕುಮಾರಿಯ ಇಬ್ಬರು ಮಕ್ಕಳು ನೇಪಾಳದಲ್ಲಿದ್ದಾರೆ.

Kishor KV

Leave a Reply

Your email address will not be published. Required fields are marked *