ಸಚಿವ ಬಿ.ನಾಗೇಂದ್ರಗೆ ಸಿಬಿಐ ಶಾಕ್ –  ಮತ್ತೆ ವಿಚಾರಣೆ ನೆಡಸಲು ರಾಜ್ಯಪಾಲರಿಗೆ ಪತ್ರ

  ಸಚಿವ ಬಿ.ನಾಗೇಂದ್ರಗೆ ಸಿಬಿಐ ಶಾಕ್ –  ಮತ್ತೆ ವಿಚಾರಣೆ ನೆಡಸಲು ರಾಜ್ಯಪಾಲರಿಗೆ ಪತ್ರ

ವಿಧಾನಸಭೆ ಅಧಿವೇಶನ ಆರಂಭವಾದ ದಿನದಿಂದ  ಸಚಿನ ಬಿ.ನಾಗೇಂದ್ರ ರಾಜೀನಾಮೆಗೆ ವಿರೋಧ ಪಕ್ಷ ಪಟ್ಟು ಹಿಡಿದು ಕೂತಿದೆ.  ನಿರಂತರ ಧರಣಿಯ ನಡುವೆಯೇ, ನಾಗೇಂದ್ರ ಅವರಿಗೆ ಸಿಬಿಐ ‘ಪ್ರಾಸಿಕ್ಯೂ ಷನ್’ ಶಾಕ್ ನೀಡಿದೆ. ಭಾರೀ ವಿವಾದಕ್ಕೆ ಕಾರಣವಾಗಿರುವ ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಕಷ್ಟ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ನಾಗೇಂದ್ರ ಅವರನ್ನು ವಿಚಾರಣೆ ಗೊಳಪಡಿಸಲು ಹಾಗೂ ಕಾನೂನು ಕ್ರಮ ಮುಂದುವರಿಸಲು ರಾಜ್ಯಪಾಲರ ಅನುಮತಿ ಕೋರಿ ಪತ್ರ ಬರೆದಿದೆ ಎನ್ನಲಾಗಿದೆ. ನಿಗಮದ ಸುಮಾರು 89.63 ಕೋಟಿ ರು. ಗಳನ್ನು ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ ಮೂಲಕ ಅಕ್ರಮವಾಗಿ ವರ್ಗಾಯಿಸಿ, ನೂರಾರು ಬೇನಾಮಿ ಖಾತೆಗಳ ಮೂಲಕ ದುರ್ಬಳಕೆ ಮಾಡಲಾಗಿದೆ ಎಂಬುದು ತನಿಖೆಯ ಪ್ರಮುಖ ಆರೋಪವಾಗಿದೆ.

ಇದನ್ನೂ ಓದಿ: ಕಾವೇರಿ ಬಗ್ಗೆ ತಮಿಳುನಾಡು ಸಿಎಂ ವಿಜಯ್ ಮಾತು – ಡಿಕೆ ಶಿವಕುಮಾರ್ ಜೊತೆ ಏನೆಲ್ಲಾ ಮಾತುಕತೆ ನಡೀತು?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪಪಟ್ಟಿ ಸಲ್ಲಿಸಿದ್ದು, ನಾಗೇಂದ್ರ ಅವರನ್ನು ಪ್ರಮುಖ ಆರೋಪಿಗಳ ಪೈಕಿ ಒಬ್ಬರಾಗಿ ಉಖಿಸಿದೆ ಎನ್ನಲಾಗಿದೆ. ಆದ್ದರಿಂದ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿಚಾರಣೆ ಅಗತ್ಯವಿರುವುದರಿಂದ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ

ಒಂದು ವೇಳೆ ರಾಜ್ಯಪಾಲರಿಂದ ಅನುಮತಿ ದೊರೆತರೆ ನಾಗೇಂದ್ರ ವಿರುದ್ಧದ ಕಾನೂನು ಪ್ರಕ್ರಿಯೆಗೆ ವೇಗ ಸಿಗಲಿದ್ದು, ಇನ್ನೊಂದೆಡೆ ರಾಜಕೀಯವಾಗಿಯೂ ಕಾಂಗ್ರೆಸ್ ಗೆ ಬಹುದೊಡ್ಡ ಸವಾಲಾಗುವ ಸಾಧ್ಯತೆಯಿದೆ. ದೇಶಾದ್ಯಂತ ಸಂಚರಿಸಲು ನಾಗೇಂದ್ರಗೆ ಅನುಮತಿ ಈ ನಡುವೆ ಸಚಿವ ಬಿ.ನಾಗೇಂದ್ರ ಅವರು ದೇಶಾದ್ಯಂತ ಪ್ರಯಾಣಿಸಲು ಅನುಮತಿ ನೀಡಿರುವ ಹೈಕೋರ್ಟ್, ವಿಚಾ ರಣಾ ನ್ಯಾಯಾಲ ಯದ ಅನುಮತಿ ಪಡೆಯದೆ ವಿದೇಶಕ್ಕೆ ಹೋಗುವಂತಿಲ್ಲ ಎಂದು ಆದೇಶಿಸಿದೆ.

Kishor KV