ಧನಂಜಯ , ಮಹೇಂದ್ರ , ಏಕಲವ್ಯ ಈ ಮೂರು ಆನೆಗಳಲ್ಲಿಈ ಸಲ ಅಂಬಾರಿ ಹೊರುವ ಆನೆ ಯಾವುದು?

ಧನಂಜಯ , ಮಹೇಂದ್ರ , ಏಕಲವ್ಯ  ಈ ಮೂರು ಆನೆಗಳಲ್ಲಿಈ ಸಲ ಅಂಬಾರಿ ಹೊರುವ ಆನೆ ಯಾವುದು?

ಆರು ವರ್ಷಗಳಿಂದ ಅಂಬಾರಿ  ಹೊತ್ತುಕೊಂಡು ಬಂದ ಅಭಿಮನ್ಯು  ಆನೆಗೆ (61) ವಯಸ್ಸಾಗಿದೆ. ಆದರಿಂದ ಕಳೆದ ಆರು ವರ್ಷಗಳಿಂದ ಅಂಬಾರಿ ಹೊತ್ತ ಅಭಿಮನ್ಯು ಆನೆಗೆ ವಿಶ್ರಾಂತಿ ನೀಡಲಾಗಿದೆ. ಈ ಬಾರಿ ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿಯನ್ನು ಹೊರುವ ಹೊಸ ಆನೆಯನ್ನು ಅರಣ್ಯ ಇಲಾಖೆ ಶೀಘ್ರದಲ್ಲೇ ಆಯ್ಕೆ ಮಾಡಲಿದೆ.

ಇದನ್ನೂ ಓದಿ: ಆಂಜನೇಯ ಸ್ವಾಮಿ ಕೃಪೆ ನಿಮ್ಮ ಮೇಲೆ ಇರಬೇಕಾ? – ಮಂಗಳವಾರ ಈ ಸಿಹಿಯನ್ನ ಹಂಚಿ

ಆಗಸ್ಟ್ 26ರಂದು ಹುಣಸೂರು ತಾಲೂಕಿನ ವೀರನ ಹೊಸಳ್ಳಿಯಿಂದ ಮೊದಲ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ. ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ ಮತ್ತು ಮತ್ತಿಗೋಡು ಶಿಬಿರದ ಏಕಲವ್ಯ ಆನೆಗಳು ಇವೆ.

ಅಭಿಮನ್ಯು ಆನೆಗೆ ವಿಶ್ರಾಂತಿ ನೀಡಿರುವುದರಿಂದ, ಅರಣ್ಯ ಇಲಾಖೆಯು ಅಂಬಾರಿ ಹೊರುವ ಹೊಸ ಆನೆಯನ್ನು ಆನೆಯನ್ನು ಸಿದ್ಧಪಡಿಸುತ್ತಿದೆ. ಈ ಬಗ್ಗೆ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಸಿಎಫ್) ಎಸ್.ಎಸ್. ರವಿಶಂಕರ್ ಅವರು ಮಾಹಿತಿ ನೀಡಿದ್ದಾರೆ. ಈ ಬಾರಿ ಅಂಬಾರಿ ಹೊರಲು ಧನಂಜಯ, ಮಹೇಂದ್ರ, ಏಕಲವ್ಯ ಆನೆಗಳು ಸ್ಪರ್ಧೆಯಲ್ಲಿವೆ.

ಯಾರಿಗೆ ಹೆಚ್ಚಿನ ಅವಕಾಶವಿದೆ।ಈ ಮೂರು ಆನೆಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಧನಂಜಯವನ್ನು ಮೊದಲ ಆಯ್ಕೆಯಾಗಿ, ಮಹೇಂದ್ರವನ್ನು ಎರಡನೇ ಆಯ್ಕೆಯಾಗಿ ಮತ್ತು ಏಕಲವ್ಯವನ್ನು ಮೂರನೇ ಆಯ್ಕೆಯಾಗಿ ಪರಿಗಣಿಸಲಾಗಿದೆ. ಅಂತಿಮ ಆಯ್ಕೆ ಪೂರ್ವಾಭ್ಯಾಸದ ಸಮಯದಲ್ಲಿ ವಿಶೇಷವಾಗಿ ದೊಡ್ಡ ಜನಸಂದಣಿಯಲ್ಲಿ ಆನೆಗಳು ಆಜ್ಞೆಗಳಿಗೆ ಎಷ್ಟು ಶಾಂತವಾಗಿ ಮತ್ತು ವಿಧೇಯತೆಯಿಂದ ಪ್ರತಿಕ್ರಿಯಿಸುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ .

Kishor KV

Leave a Reply

Your email address will not be published. Required fields are marked *