HITಮ್ಯಾನ್ ಸಮರಾಭ್ಯಾಸ ಶುರು – ವಿಶ್ವಕಪ್ ನಲ್ಲಿ ಓಪನರ್ ಸ್ಲಾಟ್ ಫಿಕ್ಸ್
ರೋಹಿತ್ ಬಿಟ್ಟು ಆಡಲ್ವಾ BCCI?

HITಮ್ಯಾನ್ ಸಮರಾಭ್ಯಾಸ ಶುರು – ವಿಶ್ವಕಪ್ ನಲ್ಲಿ ಓಪನರ್ ಸ್ಲಾಟ್ ಫಿಕ್ಸ್ರೋಹಿತ್ ಬಿಟ್ಟು ಆಡಲ್ವಾ BCCI?

ಟೀಂ ಇಂಡಿಯಾ ಆಟಗಾರರು ಒಂದ್ಕಡೆ ಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದ್ರೆ ಅತ್ತ ಹಿಟ್​ಮ್ಯಾನ್ ರೋಹಿತ್ ಶರ್ಮಾ ಮೈದಾನದಲ್ಲಿ ಬೆವರಿಳಿಸೋಕೆ ಶುರು ಮಾಡಿದ್ದಾರೆ. ಶತಾಯ ಗತಾಯ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಆಡಲೇಬೇಕು ಅಂತಾ ಪಣ ತೊಟ್ಟಿರೋ ರೋಹಿತ್ ಶರ್ಮಾ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಮುಂದಿನ ಏಕದಿನ ಸರಣಿ ಬಳಿಕ ರೋಹಿತ್ ಭವಿಷ್ಯ ನಿರ್ಧಾರ ಆಗುತ್ತೆ ಅನ್ನೋ ಚರ್ಚೆಗಳ ನಡುವೆ ರೋಹಿತ್​ರ ಸಮರಾಭ್ಯಾಸ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಮೊದಲ ಟೆಸ್ಟ್‌ನಲ್ಲಿ ಲಂಕಾ ಬೇಟೆಯಾಡಿದ ಟೀಮ್ ಇಂಡಿಯಾ – 10 ವಿಕೆಟ್ ಕಬಳಿಸಿದ ಮಾನವ್ ಸುತಾರ್

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮುಂಬೈನ ಬಿಕೆಸಿಯಲ್ಲಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​ನಲ್ಲಿ ಭರ್ಜರಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಮುಂದಿನ ಸರಣಿಗೆ ಈಗಲೇ ಸಿದ್ಧತೆ ಆರಂಭಿರೋ ರೋಹಿತ್​ರ ಫೋಟೊಗಳು ಹಾಗೇ ವಿಡಿಯೋಗಳು ವೈರಲ್ ಆಗಿವೆ. ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತಿ ಪಡೆದಿರೋ ರೋಹಿತ್ ಕೇವಲ ಏಕದಿನ ಕ್ರಿಕೆಟ್ ಮಾತ್ರ ಆಡ್ತಿದ್ದಾರೆ. ಅದ್ರಲ್ಲೂ  2027ರ ಏಕದಿನ ವಿಶ್ವಕಪ್‌ನಲ್ಲಿ ಆಡಲೇಬೇಕು ಅನ್ನೋ ಟಾರ್ಗೆಟ್​ನಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಅಭ್ಯಾಸ ಶುರು ಮಾಡಿದ್ದಾರೆ.

ವಿಂಡೀಸ್ ಸರಣಿಗಾಗಿ ಸಿದ್ಧತೆ ಶುರು ಮಾಡಿದ ಹಿಟ್ ಮ್ಯಾನ್!

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ 2027 ರ ಏಕದಿನ ವಿಶ್ವಕಪ್‌ ನಡೆಯಲಿದ್ದು, ಭಾರತದ ಪರ ರೋಹಿತ್ ಅವರ ಸ್ಥಾನದ ವಿಚಾರ ಬಾರೀ ಚರ್ಚೆಯಲ್ಲಿದೆ. ಟೆಸ್ಟ್ ಮತ್ತು ಟಿ20ಐ ಫಾರ್ಮೆಟ್​ನಿಂದ ಶಾಶ್ವತವಾಗಿ ಹೊರಬಂದಿದ್ರೂ 2027 ರ ಏಕದಿನ ವಿಶ್ವಕಪ್‌ನಲ್ಲಿ ಇನ್ನೂ ಭಾಗವಹಿಸುವ ಉದ್ದೇಶ ಹೊಂದಿದ್ದಾರೆ. ಹಾಗೇ ಅವ್ರ ಕೆರಿಯರ್​ನ ಪರಮಗುರಿಯೇ ವಿಶ್ವಕಪ್ ಗೆಲ್ಲೋದು. ಇದಕ್ಕಾಗಿ ಭಾರತದ ಪರ ನಡೆಯುವ ಪ್ರತೀ ಏಕದಿನ ಸರಣಿಗಳಲ್ಲೂ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟು ಸೀಟ್ ರಿಸರ್ವ್ ಮಾಡಿಕೊಳ್ಬೇಕು ಅಂತಾ ಅಂತಾ ಹಿಟ್​ಮ್ಯಾನ್ ತಯಾರಿ ನಡೆಸಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯು ಸೆಪ್ಟೆಂಡರ್ ಎಂಡ್​ನಲ್ಲಿ ನಡೆಯಲಿದೆ.  ಸೆಪ್ಟೆಂಬರ್ 27 ರಂದು ತಿರುವನಂತಪುರದಲ್ಲಿ ಆರಂಭವಾಗಲಿದ್ದು, ಎರಡನೇ ಏಕದಿನ ಪಂದ್ಯ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಮತ್ತು ಮೂರನೇ ಪಂದ್ಯ ಅಕ್ಟೋಬರ್ 3 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಇದೇ ಸರಣಿಗಾಗಿ ಮುಂಬೈನಲ್ಲಿ ತಮ್ಮ ತರಬೇತಿಯನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ಮುಂಬೈನ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ  ಮಾಜಿ ಸಹ-ಆಟಗಾರ ಧವಳ್ ಕುಲಕರ್ಣಿ ಅವರೊಂದಿಗೆ ಕಸರತ್ತು ನಡೆಸ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ರೋಹಿತ್ ಶರ್ಮಾ ಉತ್ತಮ ಫಾರ್ಮ್​ನಲ್ಲೇ ಇದ್ದು ತಮ್ಮ ಬ್ಯಾಟಿಂಗ್ ಮೂಲಕವೇ ಅದನ್ನ ಪ್ರೂವ್ ಮಾಡ್ತಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲೂ ಶತಕ ಬಾರಿಸಿದ್ದ ರೋಹಿತ್!

ಕಳೆದ ಜುಲೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ರು. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ 11 ಮತ್ತು 26 ರನ್ ಗಳಿಸಿದ್ದ ರೋಹಿತ್ ಲಾರ್ಡ್ಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ರು. 110 ಎಸೆತಗಳಲ್ಲಿ 17 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 138 ರನ್ ಗಳಿಸಿದರು. ಕಳೆದ 11 ಏಕದಿನ ಪಂದ್ಯಗಳಲ್ಲಿ ಇದು ಅವರ ಮೊದಲ ಶತಕವಾಗಿತ್ತು. ಲಾರ್ಡ್ಸ್‌ ಶತಕದ ನಂತರವೂ, 50 ಓವರ್‌ಗಳ ತಂಡದಲ್ಲಿ ಅವರ ಪ್ರಸೆನ್ಸ್ ಬಗ್ಗೆ ಊಹಾಪೋಹಗಳು ನಡೀತಾನೇ ಇದೆ. ರೋಹಿತ್ ವಯಸ್ಸು ಮತ್ತು ತಂಡದ ಭವಿಷ್ಯದ ದೃಷ್ಟಿಯಿಂದ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡ್ಬೇಕು ಅನ್ನೋ ಒತ್ತಾಯಗಳಿವೆ. ಆದ್ರೆ ರೋಹಿತ್​ರನ್ನ ಬಿಟ್ಟು ಬಿಸಿಸಿಐ ವಿಶ್ವಕಪ್ ಆಡೋದು ಸುಲಭದ ಮಾತಲ್ಲ. ರೋಹಿತ್ ತಂಡದಲ್ಲಿ ಇದ್ದಷ್ಟೂ ಲಾಭವೇ ಇದೆ. ಹಿರಿಯ ಆಟಗಾರ, ಸಾಕಷ್ಟು ಎಕ್ಸ್​ಪೀರಿಯನ್ಸ್ ಇದೆ, ಕಳೆದ ವಿಶ್ವಕಪ್​ನಲ್ಲಿ ಕ್ಯಾಪ್ಟನ್ ಆಗಿ ಫೈನಲ್​ಗೆ ಕೊಂಡೊಯ್ದಿದ್ರು, ಬ್ಯಾಟಿಂಗ್ ಕೂಡ ಚೆನ್ನಾಗಿ ಇರೋದ್ರಿಂದ ರೋಹಿತ್ ಆಡ್ಬೇಕು ಅಂತಾ ಎಲ್ರೂ ಬೆನ್ನಿಗೆ ನಿಂತಿದ್ದಾರೆ. ಮಾಜಿ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಆಕಾಶ್ ಚೋಪ್ರಾ ಅವರು ರೋಹಿತ್ ಶರ್ಮಾ ಅವರ ಫಿಟ್ನೆಸ್ ಮತ್ತು ಇತ್ತೀಚಿನ ಫಾರ್ಮ್ ಅನ್ನು ಗಮನಿಸಿ, 2027ರ ವಿಶ್ವಕಪ್‌ನಲ್ಲಿ ಆಡಲೇಬೇಕು ಎಂದಿದ್ದಾರೆ. ಇನ್ನು ರೋಹಿತ್​ರ ಏಕದಿನ ಪಂದ್ಯಗಳ ಸ್ಟಾಟ್ಸ್ ನೊಡೋದಾದ್ರೆ 288 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 48.95 ಸರಾಸರಿಯಲ್ಲಿ 34 ಶತಕಗಳು ಮತ್ತು 62 ಅರ್ಧಶತಕಗಳೊಂದಿಗೆ 11895 ರನ್ ಗಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಅವರ 264 ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಮುಂದಿನ ವಿಶ್ವಕಪ್​ನಲ್ಲೂ ಟ್ರೋಫಿ ಗೆಲ್ಬೇಕು ಅಂತಾ ಟಾರ್ಗೆಟ್​ನಲ್ಲಿರೋ ಹಿಟ್​ಮ್ಯಾನ್ ಈಗಾಗ್ಲೇ ಭರ್ಜರಿ ಪ್ರಾಕ್ಟೀಸ್​ನೂ ಆರಂಭಿಸಿದ್ದಾರೆ. ಒಟ್ನಲ್ಲಿ ರೋಹಿತ್​ ವಿಶ್ವಕಪ್ ಆಡೋದ್ರಿಂದ ಎಲ್ಲರಿಗೂ ಲಾಭವೇ ಇದೆ. ಹೀಗಾಗಿ ಬಿಸಿಸಿಐ ಮೊಂಡಾಟ ಬಿಟ್ಟು ಅವ್ರ ವಿಚಾರದಲ್ಲಿ ಸ್ಪಷ್ಟನೆ ನೀಡ್ಬೇಕಿದೆ.

Shantha Kumari

Leave a Reply

Your email address will not be published. Required fields are marked *