‘ನನ್ನ ಸಾ*ವಿಗೆ ಪತ್ನಿಯ ಅ*ನೈತಿಕ ಸಂಬಂಧವೇ ಕಾರಣ’ – ಡೆ*ತ್‌ನೋಟ್‌ ಬರೆದಿಟ್ಟು ಗಂಡ್ ಸೂಸೈ*ಡ್

‘ನನ್ನ ಸಾ*ವಿಗೆ ಪತ್ನಿಯ ಅ*ನೈತಿಕ ಸಂಬಂಧವೇ ಕಾರಣ’  –  ಡೆ*ತ್‌ನೋಟ್‌ ಬರೆದಿಟ್ಟು ಗಂಡ್ ಸೂಸೈ*ಡ್

ಪತ್ನಿಯ ಅಕ್ರಮ ಸಂಬಂಧಕ್ಕೆ ಮನನೊಂದು ಪತಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ನೆಲಮಂಗಲ ತಾಲ್ಲೂಕಿನ ಮಣ್ಣೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 53 ವರ್ಷದ ಲಕ್ಷ್ಮೀಪ್ರಸಾದ್ ಅವರು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಇವರು ಮಧುಗಿರಿ ಬಳಿಯ ಒಂದು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು. ‘ನನ್ನ ಸಾವಿಗೆ ಪತ್ನಿಯ ಅನೈತಿಕ ಸಂಬಂಧವೇ ಕಾರಣ’ ಎಂದು ಡೆತ್‌ನೋಟ್ ಬರೆೆದಿಟ್ಟಿದ್ದಾರೆ. ಅಲ್ಲದೇ ನನ್ನ ಸಾವಿಗೆ ಕಾಯುತ್ತಿದ್ದ ನಿಮಗೆ ಶುಭವಾಗಲಿ ಎಂದು ಬರೆದಿದ್ದರು. ಬೇರೊಬ್ಬ ವ್ಯಕ್ತಿಯ ಜೊತೆ ಪತ್ನಿಯ ಸಂಬಂಧದಿಂದ ಬೇಸತ್ತು ಅವರು ಈ ಹೆಜ್ಜೆ ಇಟ್ಟಿದ್ದಾರೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ‘ಸಾಲಬಾಧೆಯಿಂದ ನಾವು ಸಾ*ವಿನ ಮೊರೆ ಹೋಗುತ್ತಿದ್ದೇವೆ’ – ಡೆತ್‌ನೋಟ್‌ ಬರೆದಿಟ್ಟು ಫ್ಯಾಮೀಲಿ ಹೋಗಿದ್ದೆಲ್ಲಿಗೆ?

ಆದರೆ ಪತ್ನಿ ಚಂದ್ರಕಲಾ ಅವರು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪತ್ನಿ, ‘ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ನನ್ನ ಗಂಡನ ಸಾವಿಗೆ ಅವರ ಮನೆಯವರೇ ಕಾರಣ’ ಎಂದಿದ್ದಾರೆ. ಗಂಡ ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದರು. ಸಂಬಳ ಸರಿಯಾಗಿ ಬರುತ್ತಿರಲಿಲ್ಲ. ಕಳೆದ ಐದು ತಿಂಗಳಿಂದ ಸಂಬಳವೇ ಇರಲಿಲ್ಲ. ಆದ್ದರಿಂದ ಮನೆಯ ಎಲ್ಲ ಖರ್ಚುಗಳನ್ನು ತಾನೇ ನೋಡಿಕೊಳ್ಳುತ್ತಿದ್ದೆ ಎಂದು ಚಂದ್ರಕಲಾ ಹೇಳಿದ್ದಾರೆ.

ಪೊಲೀಸರು ಎರಡೂ ಕಡೆಯ ವಾದಗಳನ್ನು ಪರಿಶೀಲಿಸುತ್ತಿದ್ದಾರೆ. ಸಾಕ್ಷಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ಡೆತ್ ನೋಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಮಣ್ಣೆ ಗ್ರಾಮದ ಜನರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

Kishor KV

Leave a Reply

Your email address will not be published. Required fields are marked *