ಕೇಡಿ ಜೈದೇವ್ ವಿರುದ್ಧ ಮಲ್ಲಿ ವ್ಯೂಹ – ಭೂಮಿಕಾ, ಜೀವ ಪ್ಲ್ಯಾನ್ ಸಕ್ಸಸ್ ಆಗುತ್ತಾ?

ಕೇಡಿ ಜೈದೇವ್ ವಿರುದ್ಧ ಮಲ್ಲಿ ವ್ಯೂಹ – ಭೂಮಿಕಾ, ಜೀವ ಪ್ಲ್ಯಾನ್ ಸಕ್ಸಸ್ ಆಗುತ್ತಾ?

ಅಮೃತಧಾರೆ ಧಾರಾವಾಹಿಯಲ್ಲಿ ಕೇಡಿ ಜೇಡಿ ವಿರುದ್ಧ IPS ಮಲ್ಲಿ ತನಿಖೆ ಮುಂದುವರೆದಿದೆ. ಇದೀಗ ಜೈದೇವ್ ಮಾಡಿರುವ ದುಷ್ಟ ಕೆಲಸಗಳನ್ನು ಅವನ ಬಾಯಿಂದಲೇ ಬಿಡಿಸಲು ಪ್ಲ್ಯಾನ್ ನಡೆಯುತ್ತಿದೆ. ಜೈದೇವ್‌ ರಹಸ್ಯಗಳನ್ನು ಬಯಲಿಗೆಳೆಯಲು ಮಲ್ಲಿ, ಜೀವ ಮತ್ತು ಭೂಮಿಕಾ ಸ್ಪೆಷಲ್ ಮೀಟಿಂಗ್ ಮಾಡಿದ್ದಾರೆ.

ಇದನ್ನೂ ಓದಿ:ಕರ್ಣನಿಗೆ ಸ್ವಂತ ತಾಯಿ ಸಿಕ್ಕಾಯ್ತು! – ಸೀತಾ, ರಮೇಶ್ ಮುಖಾಮುಖಿ ಯಾವಾಗ?

ಕೆಡಿ ಜೇಡಿ ವಿರುದ್ಧ ಮಲ್ಲಿ, ಜೀವ ಮತ್ತು ಭೂಮಿಕಾ ಹೊಸ ವ್ಯೂಹವೊಂದನ್ನು ರಚಿಸಿದ್ದಾರೆ.  ಮ ಜೈದೇವ್ ಗೆಳತಿ ದಿಯಾ ಜೊತೆ ಮದುವೆಯಾಗಿದ್ದ. ಬೇಬಿ ಬೇಬಿ ಎಂದು ಆಕೆ ಹಿಂದೆಯೇ ಸುತ್ತುತ್ತಿದ್ದ. ನಂತರ ದಿಯಾ ದಿಢೀರ್ ಕಣ್ಮರೆಯಾದಳು. ಅನು ಎಂಬ ಯುವತಿ ಕೂಡಾ ಕಾಣೆಯಾಗಿದ್ದಳು. ಪೊಲೀಸ್ ಅಧಿಕಾರಿಯಾಗಿದ್ದ ಮಲ್ಲಿ ಇವರಿಬ್ಬರ ಹುಡುಕಾಟಕ್ಕೆ ಮುಂದಾಗಿದ್ದಾಳೆ. ಆರಂಭದಲ್ಲಿ ಲಕ್ಷ್ಮೀಕಾಂತ್‌ನನ್ನು ಜೈದೇವ್ ಮನೆಗೆ ಭೂಮಿಕಾ ಕಳುಹಿಸಿದ್ದಳು. ಆದ್ರೆ ಕಂಠ ಪೂರ್ತಿ ಕುಡಿದ್ರೂ ಜೈದೇವ್ ಅಲರ್ಟ್ ಆಗಿದ್ದರಿಂದ ಯಾವುದೇ ವಿಷಯ ಬಿಟ್ಟುಕೊಟ್ಟಿರಲಿಲ್ಲ.

ಆ ಯೋಜನೆ ಠುಸ್ ಆದರೂ ಮತ್ತೊಂದು ಪ್ಲ್ಯಾನ್ ಜಾರಿಗೆ ತರಲು ಯತ್ನಿಸಿದ್ದಾರೆ ಮಲ್ಲಿ, ಭೂಮಿಕಾ, ಮತ್ತು ಜೀವ. ಮನೆಯಲ್ಲಿ ಮಾತನಾಡಿದ್ರೆ ವಿಷಯ ಲೀಕ್ ಆಗಬಹುದು ಎಂದು ಭೂಮಿಕಾ ಎಲ್ಲರನ್ನೂ ಹೋಟೆಲ್‌ಗೆ ಕರೆಸಿಕೊಂಡು ಚರ್ಚೆ ನಡೆಸಿದ್ದಾಳೆ. ಮೂವರು ಸೇರಿಕೊಂಡು ಹೋಟೆಲ್‌ನಲ್ಲಿ ಚರ್ಚೆ ನಡೆಸಿದ್ದಾರೆ. ಕೆಡಿ ಜೈದೇವ್‌ಗೆ ಎರಡು ವೀಕ್‌ನೆಸ್, ಒಂದು ಎಣ್ಣೆ ಮತ್ತೊಂದು ಹೆಣ್ಣು. ಮೊದಲಿಗೆ ಎಣ್ಣೆ ಕುಡಿಸುತ್ತಾ ಬಾಯಿ ಬಿಡಿಸಲು ಲಕ್ಷ್ಮೀಕಾಂತ್ ಮೂಲಕ ಪ್ರಯತ್ನಿಸಲಾಗಿತ್ತು. ಆದ್ರೆ ನಶೆಯಲ್ಲಿದ್ರೂ ಜೈದೇವ್ ಅಲರ್ಟ್ ಆಗಿದ್ರಿಂದ ಯಾವುದೇ ವಿಷಯ ಗೊತ್ತಾಗಿರಲಿಲ್ಲ. ಹಾಗಾಗಿ ಇದೀಗ ಎರಡನೇ ವೀಕ್‌ನೆಸ್ ಮುಂದಿಟ್ಟುಕೊಂಡು ರಹಸ್ಯ ಬೇಧಿಸಲು ಮಲ್ಲಿ ಮುಂದಾಗಿದ್ದಾಳೆ. ಇದಕ್ಕಾಗಿ ಮಲ್ಲಿ ತನ್ನ ಸಹೋದ್ಯೋಗಿ ಮಧುರಾ ಎಂಬಾಕೆಯನ್ನು ಕರೆಸಿಕೊಂಡಿದ್ದಾಳೆ. ಜೈದೇವ್ ಎಷ್ಟು ದುಷ್ಟ ಎಂಬುದನ್ನು ವಿವರಿಸಿ, ಆತನ ಸ್ನೇಹ ಬೆಳೆಸಿ ನಂಬಿಕೆ ಗಳಿಸಬೇಕು. ನಂತರ ಆತನ ಬಾಯಿಂದಲೇ ದಿಯಾ ಮತ್ತು ಅನು ಎಲ್ಲಿ ಹೋದರು ಎಂಬುದನ್ನ ಹೇಳಿಸಬೇಕು ಎಂಬ ಟಾಸ್ಕ್ ನೀಡಿದ್ದಾಳೆ.

Sulekha

Leave a Reply

Your email address will not be published. Required fields are marked *