ಹೊಸಕೋಟೆ ಬಿರಿಯಾನಿ ತಿನ್ನಲು 6 ಗಂಟೆಗೆ ಹೋದರೆ ಸಾಕು – ಮುಂಜಾನೆಯೇ ಸಿಗಲ್ಲ ನಿಮ್ಮ ನೆಚ್ಚಿನ ಬಿರಿಯಾನಿ

ಹೊಸಕೋಟೆ ಬಿರಿಯಾನಿ ತಿನ್ನಲು 6 ಗಂಟೆಗೆ ಹೋದರೆ ಸಾಕು – ಮುಂಜಾನೆಯೇ ಸಿಗಲ್ಲ ನಿಮ್ಮ ನೆಚ್ಚಿನ ಬಿರಿಯಾನಿ

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ​ ಹೊಸಕೋಟೆಯ ಬಿರಿಯಾನಿ ತಿನ್ನೋಕೆ ನೂರಾರು ಕಿಲೋ ಮೀಟರ್​ ಗಳಿಂದ  ಬೆಳಗ್ಗೆ 4 ಗಂಟೆಯೇ ಬಂದು ಕ್ಯೂ ನಿಲ್ಲುತ್ತಿದ್ದ ಗ್ರಾಹಕರು ಈ ಸುದ್ದಿ ಓದಲೇಬೇಕು.

ಇದನ್ನೂ ಓದಿ:ಹಾವೇರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ -ಭೀಕರ ಅಪಘಾತದಲ್ಲಿ ಐವರು ಸಾ*ವು!

ಮುಂಜಾನೆ 4 ಗಂಟೆಗೆ ಹೊಸಕೋಟೆಗೆ ಹೋಗುವುದು. ಅಲ್ಲಿ ಬಿಸಿ ಬಿಸಿ ಬಿರಿಯಾನಿ ತಿನ್ನುವುದು ಒಂಥರಾ ಖುಷಿ. ಇದಕ್ಕಾಗಿಯೇ ಹೊಸಕೋಟೆ ಬಿರಿಯಾನಿ ಕೂಡ ಫುಲ್ ಫೇಮಸ್​ ಆಗಿದೆ. ಆದ್ರೆ ಇದೀಗ ಈ ಹೊಸಕೋಟೆ ಬಿರಿಯಾನಿ ಕ್ರೇಜ್‌ಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಹೊಸಕೋಟೆ ಬಿರಿಯಾನಿ ತಿನ್ನಲು ಬೆಂಗಳೂರು ಸೇರಿದಂತೆ ವಿವಿದೆಡೆಗಳಿಂದ ಬೆಳಗ್ಗೆ 4 ಗಂಟೆಗೆ ಹೋಟೆಲ್ ಮುಂದೆ ಕ್ಯೂ ನಿಲ್ಲುವ ಗ್ರಾಹಕರಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಇದಕ್ಕೆ ಕಾರಣವೂ ಇದೆ. ಹೊಸಕೋಟೆಯ ಬಿರಿಯಾನಿ ತಿನ್ನೋಕೆ ನೂರಾರು ಕಿಲೋ ಮೀಟರ್​ ಗಳಿಂದ ಜನ ಬರ್ತಾರೆ. ಗುಂಪು-ಗುಂಪಾಗಿ ಜನ ಸೇರುತ್ತಿದ್ದರು. ಜೊತೆಗೆ ನೂರಾರು ವಾಹನಗಳು ರಸ್ತೆ ಬದಿ ನಿಲ್ಲುತ್ತಿದ್ದವು. ಅದು ಕೂಡಾ ಬಿರಿಯಾನಿ ಹೋಟೆಲ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವ ಗಡಿಬಿಡಿಯಲ್ಲಿ ತಮ್ಮ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರು. ಇದೇ ಕಾರಣದಿಂದಾಗಿ ರಸ್ತೆ ಅಪಘಾತಗಳು ಹೆಚ್ಚಾಗಿವೆಯಂತೆ. ಹೀಗಾಗಿ ಪೊಲೀಸರು ಮುಂಜಾನೆ 4 ಗಂಟೆಗೆ ಬಿರಿಯಾನಿ ಮಾರಾಟ ಮಾಡುವಂತಿಲ್ಲ ಎಂದು ಖಡಕ್ ಸಂದೇಶ ಕೊಟ್ಟಿದ್ದಾರೆ.

ಇನ್ಮುಂದೆ 6 ಗಂಟೆ ನಂತರವೇ ಬಿರಿಯಾನಿ ಮಾರಾಟ ಮಾಡಬೇಕು ಎಂದು ಹೊಸಕೋಟೆ ಠಾಣಾ ನಿರೀಕ್ಷಕ ಬಿ.ಟಿ.ಗೋವಿಂದ್ ತಿಳಿಸಿದ್ದಾರೆ. ನಗರದ ಪೊಲೀಸ್ ಠಾಣೆಯಲ್ಲಿ ಬಿರಿಯಾನಿ ಹೋಟೆಲ್ ಮಾಲೀಕರು ಹಾಗೂ ಹೆದ್ದಾರಿ ರಸ್ತೆ ಬದಿ ವ್ಯಾಪಾರಿಗಳ ಸಭೆಯಲ್ಲಿ ಖಡಕ್ ಸೂಚನೆ ನೀಡಿದ್ದಾರೆ. ಇನ್ಮುಂದೆ 6 ಗಂಟೆ ನಂತರ ಮಾತ್ರ ಬಿರಿಯಾನಿ ದೊರೆಯಲಿದೆ ಎಂದು ಸೂಚನಾ ಫಲಕಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

Sulekha

Leave a Reply

Your email address will not be published. Required fields are marked *