‘ಸಾಲಬಾಧೆಯಿಂದ ನಾವು ಸಾ*ವಿನ ಮೊರೆ ಹೋಗುತ್ತಿದ್ದೇವೆ’ – ಡೆತ್‌ನೋಟ್‌ ಬರೆದಿಟ್ಟು ಫ್ಯಾಮೀಲಿ ಹೋಗಿದ್ದೆಲ್ಲಿಗೆ?

‘ಸಾಲಬಾಧೆಯಿಂದ ನಾವು ಸಾ*ವಿನ ಮೊರೆ ಹೋಗುತ್ತಿದ್ದೇವೆ’ –   ಡೆತ್‌ನೋಟ್‌ ಬರೆದಿಟ್ಟು ಫ್ಯಾಮೀಲಿ ಹೋಗಿದ್ದೆಲ್ಲಿಗೆ?

ಒಂದೇ ಕುಟುಂಬದ ನಾಲ್ವರು ನಾಪತ್ತೆಯಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಬನಶಂಕರಿ ಬಡಾವಣೆ ನಿವಾಸಿ ಕೆ.ಬಿ. ರಮೇಶ್‌ಕುಮಾರ್ (38) ಅವರು ಪತ್ನಿ ಜಯಶೀಲಾ (36), ಪುತ್ರ ಹಿತೇಶ್ (9) ಮತ್ತು ಪುತ್ರಿ ಪ್ರೇರಣಾ (3) ಜೊತೆ ನಾಪತ್ತೆಯಾಗಿದ್ದಾರೆ.

ಮಗ ಮತ್ತು ಸೊಸೆಯ ಫೋನ್​ ನಿರಂತರವಾಗಿ ಸ್ವಿಚ್​ ಆಫ್​ ಬರುತ್ತಿರುವುದರಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ತಾಯಿ ಲಲಿತಮ್ಮ ಮನೆಗೆ ಬಂದು ತಮ್ಮ ಬಳಿ ಇದ್ದ ಮತ್ತೊಂದು ಬೀಗದಿಂದ ಬಾಗಿಲು ತೆರೆದು ಒಳಗೆ ಹೋಗಿದ್ದಾರೆ. ಆ ವೇಳೆ ಮನೆಯಲ್ಲಿಯೇ ಫೋನ್‌ಗಳು ಇದ್ದು, ಡೆತ್‌ನೋಟ್ ಸಹ ಪತ್ತೆಯಾಗಿದೆ. ‘ಸಾಲಬಾಧೆಯಿಂದ ನಾವು ಸಾ*ವಿನ ಮೊರೆ ಹೋಗುತ್ತಿದ್ದೇವೆ’ ಎಂದು ಡೆತ್‌ನೋಟ್‌ನಲ್ಲಿ ಬರೆಯಲಾಗಿತ್ತು. ಮನೆಯ ಆವರಣದಲ್ಲೇ ಕಾರು ಮತ್ತು ದ್ವಿಚಕ್ರ ವಾಹನಗಳು ನಿಂತಿದ್ದವು. ಆದ್ರೆ ಅವರು ಎಲ್ಲಿಗೆ ಹೋಗಿ ಏನು ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಾಗಿಲ್ಲ.

ಇದನ್ನೂ ಓದಿ: ಹಾವೇರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ -ಭೀಕರ ಅಪಘಾತದಲ್ಲಿ ಮೂವರು ಸಾ*ವು!

ಸೊಸೆ ಮತ್ತು ಮೊಮ್ಮಕ್ಕಳು ನಾಪತ್ತೆಯಾದ ಬಗ್ಗೆ ತಾಯಿ ಲಲಿತಮ್ಮ ಅವರು ದೂರು ನೀಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾಲ್ವರು ನಾಪತ್ತೆಯಾಗಿರುವುದರಿಂದ ಕುಟುಂಬದವರಲ್ಲಿ ತೀವ್ರ ಆತಂಕ ಕಂಡುಬಂದಿದೆ. ಚಿಕ್ಕ ವಯಸ್ಸಿನ ಮಕ್ಕಳು ಸಹ ಜೊತೆಯಲ್ಲಿರುವುದರಿಂದ ಹುಡುಕಾಟಕ್ಕೆ ಆದ್ಯತೆ ನೀಡಲಾಗಿದೆ. ಪೊಲೀಸರು ಸಾಕ್ಷಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ ಮತ್ತು ಸಂಬಂಧಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ದಾವಣಗೆರೆ ಬನಶಂಕರಿ ಬಡಾವಣೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ನಾಪತ್ತೆಯಾದವರು ಸುರಕ್ಷಿತವಾಗಿ ಹಿಂತಿರುಗಲಿ ಎಂದು ಕುಟುಂಬದವರು ಆಶಿಸುತ್ತಿದ್ದಾರೆ. ಪೊಲೀಸರು ತನಿಖೆಯನ್ನು ವೇಗವಾಗಿ ಮುಂದುವರಿಸಿದ್ದಾರೆ

Kishor KV

Leave a Reply

Your email address will not be published. Required fields are marked *