ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ ಹೇಗಿರಬೇಕು? – ಲಕ್ಷ್ಮಿಯನ್ನ ಹೇಗೆ ಪೂಜೆಸಬೇಕು ಗೊತ್ತಾ?

 ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ ಹೇಗಿರಬೇಕು? –  ಲಕ್ಷ್ಮಿಯನ್ನ ಹೇಗೆ ಪೂಜೆಸಬೇಕು ಗೊತ್ತಾ?

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ.  ವರಮಹಾಲಕ್ಷ್ಮಿ ವ್ರತದ ಕಥೆಯು ಚಾರುಮತಿ ಎಂಬ ಧರ್ಮನಿಷ್ಠೆ ಮತ್ತು ಪತಿವ್ರತಾ ಮಹಿಳೆಯ ಸುತ್ತ ಸುತ್ತುತ್ತದೆ. ಚಾರುಮತಿಯ ಭಕ್ತಿಗೆ ಮೆಚ್ಚಿದ ಲಕ್ಷ್ಮಿದೇವಿಯು ಆಕೆಯ ಕನಸಿನಲ್ಲಿ ಪ್ರತ್ಯಕ್ಷಳಾಗಿ, ಶ್ರಾವಣ ಮಾಸದ ಪೂರ್ಣಿಮೆಯ ಮುನ್ನ ಬರುವ ಶುಕ್ರವಾರದಂದು ಈ ವ್ರತವನ್ನು ಆಚರಿಸಿದರೆ ಸಕಲ ಐಶ್ವರ್ಯ, ಸೌಭಾಗ್ಯ ಮತ್ತು ಶ್ರೇಯಸ್ಸು ಸಿಗುವುದೆಂದು ಅಭಯ ನೀಡುತ್ತಾಳೆ. ಚಾರುಮತಿಯು ಇತರ ಮಹಿಳೆಯರೊಂದಿಗೆ ಸೇರಿ ಈ ವ್ರತವನ್ನು ನೆರವೇರಿಸಿ, ದೇವಿಯ ಕೃಪೆಯಿಂದ ಸಕಲ ಸಂಪತ್ತನ್ನು ಪಡೆಯುತ್ತಾಳೆ. ಅಂದಿನಿಂದ ಈ ಆಚರಣೆ ಪರಂಪರೆಯಾಗಿ ಬೆಳೆದುಬಂದಿದೆ.

ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಅಷ್ಟಲಕ್ಷ್ಮಿಯರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯಿದೆ. ಮನೆಯಲ್ಲಿ ಸುಖ, ಶಾಂತಿ, ಐಶ್ವರ್ಯ ಹಾಗೂ ಕುಟುಂಬದ ಸದಸ್ಯರಿಗೆ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ವಿಶೇಷವಾಗಿ ಮುತ್ತೈದೆಯರು ತಮ್ಮ ಮಾಂಗಲ್ಯ ಬಲಕ್ಕಾಗಿ ಮತ್ತು ಕುಟುಂಬದ ಅಭಿವೃದ್ಧಿಗಾಗಿ ಈ ಪೂಜೆಯನ್ನು ಕೈಗೊಳ್ಳುತ್ತಾರೆ.

ವರಮಹಾಲಕ್ಷ್ಮಿ ಸಿದ್ಧತೆ ಹೇಗಿರಬೇಕು

ಸಿದ್ಧತೆ:

ಮುಂಜಾನೆ ಬೇಗ ಎದ್ದು ಮನೆ ಹಾಗೂ ಪೂಜಾ ಕೊಠಡಿಯನ್ನು ಶುಚಿಗೊಳಿಸಿ, ಹೊಸ್ತಿಲಿಗೆ ರಂಗೋಲಿ ಹಾಕಿ ಶೃಂಗರಿಸಬೇಕು.

ಕಳಸ ಸ್ಥಾಪನೆ:

ಒಂದು ಬೆಳ್ಳಿ ಅಥವಾ ತಾಮ್ರದ ಚೊಂಬಿಗೆ ಅಕ್ಕಿ, ನಾಣ್ಯ, ಅರಿಶಿನ, ಕುಂಕುಮ, ಒಣದ್ರಾಕ್ಷಿ-ಗೋಡಂಬಿ ಹಾಕಿ, ಮಾವಿನ ಎಲೆಗಳನ್ನು ಇಟ್ಟು, ತೆಂಗಿನಕಾಯಿಗೆ ಅರಿಶಿನ ಹಚ್ಚಿ ಕಳಸವನ್ನು ಪ್ರತಿಷ್ಠಾಪಿಸಬೇಕು. ದೇವಿಗೆ ಸೀರೆ ಉಡಾಯಿಸಿ, ಆಭರಣ ಹಾಗೂ ಹೂವುಗಳಿಂದ ಶೃಂಗರಿಸಬೇಕು.

ಪೂಜೆ ಮತ್ತು ನೈವೇದ್ಯ:

ದೇವಿಗೆ ಧೂಪ, ದೀಪ ಬೆಳಗಿ, ಅರಿಶಿನ-ಕುಂಕುಮ ಅರ್ಪಿಸಿ. ಪಂಚಭಕ್ಷ್ಯ ಪರಮಾನ್ನ, ಹೋಳಿಗೆ, ಪಾಯಸ, ಕಡುಬುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.

ದೋರ ಗ್ರಂಥಿ ಪೂಜೆ:

ಪೂಜೆಯ ಕೊನೆಯಲ್ಲಿ ದಾರಕ್ಕೆ ಒಂಬತ್ತು ಗಂಟುಗಳನ್ನು ಹಾಕಿ, ದೇವಿಯ ಬಳಿ ಇಟ್ಟು ಪೂಜಿಸಿ, ನಂತರ ಮಹಿಳೆಯರು ತಮ್ಮ ಬಲಗೈಗೆ ಕಟ್ಟಿಕೊಳ್ಳುತ್ತಾರೆ.

Kishor KV

Leave a Reply

Your email address will not be published. Required fields are marked *