ಗಾಲೆಯಲ್ಲಿ ಗೆದ್ದು ಬೀಗಿದ ಭಾರತ – ಲಂಕಾ ಬೆಂಕಿಗೆ ತುಪ್ಪ ಸುರಿದ ಕನ್ನಡಿಗರು
10 ವಿಕೆಟ್.. ಸುತಾರ್ ಸೂಪರ್!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನ ಟೀಂ ಇಂಡಿಯಾ ಗೆದ್ದು ಬೀಗಿದೆ. ಗಾಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಪರ ಯುವಸ್ಪಿನ್ನರ್ ಮಾನವ್ ಸುತಾರ್ ಅತ್ಯದ್ಭುತ ಪ್ರದರ್ಶನ ನೀಡಿ ರಿಯಲ್ ಗೇಮ್ ಚೇಂಜರ್ ಆದ್ರು. ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನ ಭಾರತ 165 ರನ್‌ಗಳಿಂದ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಲೀಡ್ ಪಡೆದಿದೆ. ಈ ಮ್ಯಾಚಲ್ಲಿ ಭಾರತದ ಪರ ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಪ್ಲೇಯರ್ಗಳು ಮಿಂಚಿದ್ರು. ಅದ್ರಲ್ಲೂ ಮಾನವ್ ಸುತಾರ್ ಅಂತೂ ಸೂಪರ್ ಡೂಪರ್ ಪ್ರದರ್ಶನ ನೀಡಿದ್ರು. ಮತ್ತೊಂದ್ಕಡೆ ಎರಡೂ ಇನ್ನಿಂಗ್ಸ್ಗಳಲ್ಲೂ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನೆಲೆ ಶ್ರೀಲಂಕಾ ಭಾರತಕ್ಕೆ ಶರಣಾಗಬೇಕಾಯ್ತು. ಎರಡನೇ ಇನ್ನಿಂಗ್ಸ್ನಲ್ಲಿ ಲಂಕಾ ಪರ ನಾಯಕ ಧನಂಜಯ ಡಿ ಸಿಲ್ವಾ 59 ರನ್ ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ್ದು ಹಾಗೇ ಸೋನಾಲ್ ಡಿನುಷ್ಕ 84 ರನ್ಗಳ ಕೊಡುಗೆ ನೀಡಿದ್ದು ಬಿಟ್ರೆ ಉಳಿದ ಯಾವುದೇ ಬ್ಯಾಟರ್ಸ್ ಕಡೆಯಿಂದಲೂ ಸಪೋರ್ಟ್ ಸಿಗ್ಲಿಲ್ಲ. ಮಾನವ್ ಸುತಾರ್ ಸ್ಪಿನ್ ಬಲೆಗೆ ಬಿದ್ದು ಪೆವಿಲಿಯನ್ ಪರೇಡ್ ನಡೆಸಿದ್ರು.
ಇದನ್ನೂ ಓದಿ : ಲಂಕೆಗೆ ಸುತಾರ್ ಲಗಾಮು – ಸರ್ ಜಡೇಜಾ ಉತ್ತರಾಧಿಕಾರಿನಾ?
ಗಾಲೆ ಕೋಟೆ ಗೆದ್ದ ಭಾರತ!
ಭಾರತ ಫಸ್ಟ್ ಇನ್ನಿಂಗ್ಸ್ ನಲ್ಲಿ 462 ರನ್ಸ್.. ಶ್ರೀಲಂಕಾ 284ಕ್ಕೆ ಆಲೌಟ್
2ನೇ ಇನ್ನಿಂಗ್ಸ್ ಭಾರತ 193, ಲಂಕಾ 206ಕ್ಕೆ ಆಲೌಟ್.. 165 ರನ್ಸ್ ಗೆಲುವು
ದೇವದತ್ ಪಡಿಕ್ಕಲ್ 167 + 44 ರನ್ಸ್ ಕಲೆ ಹಾಕಿ ಬ್ಯಾಟಿಂಗ್ ಸಪೋರ್ಟ್
ಭಾರತದ ಪರ ಸ್ಪಿನ್ ಅಸ್ತ್ರವಾಗಿ 10 ವಿಕೆಟ್ ಗಳನ್ನ ಪಡೆದ ಮಾನವ್ ಸುತಾರ್
ಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆದ್ದಿದ್ರಿಂದ 12 ಅಂಕಗಳು ಸೇರ್ಪಡೆ
ಸತತ ಆಘಾತಗಳನ್ನು ಕಂಡಿದ್ದ ಭಾರತಕ್ಕೆ ವಿದೇಶಿ ನೆಲದಲ್ಲಿನ ಗೆಲುವು ಬೂಸ್ಟ್
ಒಂದ್ಕಡೆ ಭಾರತ ಮೊದಲ ಪಂದ್ಯ ಗೆದ್ದು ಲೀಡ್ ತಗೊಂಡಿದ್ರೆ ಅತ್ತ ಶ್ರೀಲಂಕಾ ತಮ್ಮ ಭದ್ರಕೋಟೆಯಾಗಿರೋ ಗಾಲೆಯಲ್ಲೇ ಸೋತಿದ್ದಾರೆ. ಭಾರತದ ಈ ಗೆಲುವಿನಲ್ಲಿ ಮೂವರು ಕನ್ನಡಿಗರ ಕೊಡುಗೆಯೂ ತುಂಬಾನೇ ಇದೆ. ಕೆಎಲ್ ರಾಹುಲ್ ಎರಡೂ ಇನ್ನಿಂಗ್ಸ್ ಗಳ ರನ್ಸ್, ಪಡಿಕ್ಕಲ್ ಅವ್ರ ಅದ್ಭುತ ಪ್ರದರ್ಶನ ಹಾಗೇ ಪ್ರಸಿದ್ಧ್ ಕೃಷ್ಣ ಎರಡೂ ಇನ್ನಿಂಗ್ಸ್ ಗಳಿಂದ 3 ವಿಕೆಟ್ ತೆಗೆದು ಮಿಂಚಿದ್ರು. ಒಟ್ನಲ್ಲಿ ಫಸ್ಟ್ ಮ್ಯಾಚ್ ಗೆಲುವು ಈಗ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಪಾಸಿಟಿವ್ ವೈಬ್ಸ್ ಅಂತೂ ತಂದಿದೆ. ಇದೀಗ ಎರಡನೇ ಪಂದ್ಯವನ್ನೂ ಗೆದ್ದು ವಿಶ್ವಟೆಸ್ಟ್ ಚಾಂಪಿಯನ್ ಫೈನಲ್ ರೇಸ್ಗೆ ಮತ್ತೆ ಎಂಟ್ರಿ ಕೊಡೋಕೆ ಕಾಯ್ತಿದ್ದಾರೆ.

ನೋಡಿರಿ

