ಕರ್ಣನಿಗೆ ಸ್ವಂತ ತಾಯಿ ಸಿಕ್ಕಾಯ್ತು! – ಸೀತಾ, ರಮೇಶ್ ಮುಖಾಮುಖಿ ಯಾವಾಗ?

ಕರ್ಣನಿಗೆ ಸ್ವಂತ ತಾಯಿ ಸಿಕ್ಕಾಯ್ತು! – ಸೀತಾ, ರಮೇಶ್ ಮುಖಾಮುಖಿ ಯಾವಾಗ?

ಕರ್ಣ ಸೀರಿಯಲ್​ನಲ್ಲಿ ಮತ್ತೊಂದು ರೋಚಕ ಟ್ವಿಸ್ಟ್ ಸಿಕ್ಕಿದೆ. ಅತ್ತ ರಮೇಶ್‌ಗೆ ಕರ್ಣ ತನ್ನ ಮಗ ಅನ್ನೋ  ಸತ್ಯ ತಿಳಿದಾಗಿದೆ. ಇತ್ತ ಭುವನೇಶ್ವರಿಗೂ ಕರ್ಣನೇ ತಾನು ಹೆತ್ತ ಮಗ ಅನ್ನೋ ಸತ್ಯ ತಿಳಿಯುತ್ತಿದೆ. ಕಣ್ಣು ಅರಿಯದಿದ್ದರು ಕರುಳು ಅರಿಯುತ್ತದೆ ಅನ್ನೋ ಹಾಗೇ ಸೀತಾಗೆ ಮಗನ ಸ್ಪರ್ಶದಿಂದಲೇ ಈತನೇ ತನ್ನ ಮಗ ಅನ್ನೋ ಭಾವನೆ ಬರುತ್ತದೆ. ಮತ್ತೊಂದೆಡೆ ಕರ್ಣನಿಗೂ ತಾಯಿಯ ಸ್ಪರ್ಶದಿಂದ ಪ್ರಜ್ಞೆ ಬರುತ್ತದೆ. ಈ ಸನ್ನಿವೇಶ ನೋಡಿ ವೀಕ್ಷಕರು ಕೂಡಾ ಭಾವುಕರಾಗಿದ್ದಾರೆ.

ಇದನ್ನೂ ಓದಿ:3 ಗಂಟೆ.15 ನಿಮಿಷವೂ ಡಾರ್ಕ್ ಆ್ಯಕ್ಷನ್! ಫಿಲ್ಮಿಂ ಇಂಡಸ್ಟ್ರಿಗೆ BIG ಡ್ಯಾಡಿ ಟಾಕ್ಸಿಕ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್​ಗೆ ತಿಳಿದಿದೆ. ಆದರೆ, ಸತ್ಯ ತಿಳಿಯುವ ಮೊದಲೇ ರಮೇಶ್​ ಕರ್ಣನ ಮುಗಿಸಲು ಸಂಚು ಮಾಡಿದ್ದ. ಕರ್ಣ ಆಸ್ಪತ್ರೆ ಪಾಲಾದರೆ,ಕರ್ಣನೇ ತನ್ನ ಮಗ ಅನ್ನೋ ಸತ್ಯ ತಿಳಿದು ರಮೇಶ್ ಪಶ್ಚಾತ್ತಾಪ ಪಡುತ್ತಿದ್ದಾನೆ. ಕರ್ಣನೇ ತನ್ನ ಮಗ ಎಂದು ಹೇಳುವುದಕ್ಕೆ ಆಗದ ಪರಿಸ್ಥಿತಿಯಲ್ಲಿದ್ದಾನೆ ರಮೇಶ್. ಜೊತೆಗೆ ತಪ್ಪಿತಸ್ಥ ಭಾವನೆಯಲ್ಲಿ ಕುಗ್ಗಿಹೋಗಿದ್ದಾನೆ.

ಇನ್ನೊಂದೆಡೆ, ಕರ್ಣನಿಗೆ ತಾನು ಆ್ಯಕ್ಸಿಡೆಂಟ್​ ಮಾಡಿಸಿರುವುದಾಗಿ ನಯನತಾರಾ ಭುವನೇಶ್ವರಿ ಉರ್ಫ್​ ಸೀತಾಗೆ ಹೇಳಿದಾಗ ಸೀತಾಗೆ ಸಂಕಟವಾಗುತ್ತದೆ. ತನ್ನ ಹಗೆತನ ಏನಿದ್ದರೂ ಕೆಲಸದಲ್ಲಿಯೇ ವಿನಾ ಜೀವ ತೆಗೆಯುವ ಮಟ್ಟಿಗೆ ಅಲ್ಲ ಎಂದು ನಯನತಾರಾಗೆ ಜೋರು ಮಾಡುತ್ತಾಳೆ. ನಂತರ ಕರ್ಣನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ. ತನ್ನ ಕೈಮೀರಿ ಇಂಥದ್ದೊಂದು ನಡೆದು ಹೋಯಿತು ಎಂದು ಬೇಜಾರು ಪಡುತ್ತಾ ಕರ್ಣನನ್ನು ಮುಟ್ಟುತ್ತಾಳೆ.  ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುತ್ತಾರಲ್ಲ, ಹಾಗೆ ಭುವನೇಶ್ವರಿಗೆ ಕರ್ಣನ ಮುಟ್ಟಿದಾಗ ತಾಯಿಗೆ ಆಗುವ ರೀತಿ ಸಂಕಟ ಆಗುತ್ತದೆ. ಅಮ್ಮನ ಸ್ಪರ್ಶ ಆಗುತ್ತಿದ್ದಂತೆಯೇ ಕರ್ಣನಲ್ಲೂ ಚಲನೆ ಕಾಣಿಸುತ್ತದೆ. ಭುವನೇಶ್ವರಿಗೆ ಕರ್ಣನೇ ತನ್ನ ಹೆತ್ತ ಮಗ ಅನ್ನೋ ಸತ್ಯ ಗೊತ್ತಾಗಿರಲೂ ಬಹುದು. ಜೊತೆಗೆ ಕರ್ಣನಿಗೂ ಅಮ್ಮನ ಸ್ಪರ್ಷದಿಂದ ತನ್ನ ಹೆತ್ತಮ್ಮನೇ ತನ್ನ ಹತ್ತಿರ ಬರುವ ಭಾವನೆ ಬರುತ್ತದೆ.

ಮತ್ತೊಂದೆಡೆ ರಮೇಶ್ ಮೇಲೆ ಮನೆಯವರ ಸಿಟ್ಟು ಜಾಸ್ತಿಯಾಗಿರುತ್ತದೆ. ಕರ್ಣ ಮನೆಗೆ ಬಂದಾಗ ರಮೇಶ್, ಮಗನ ಕಾಲಬಳಿ ಕುಳಿತು ಕ್ಷಮಿಸುವಂತೆ ಕೇಳುತ್ತಾನೆ. ಇದು ಸಹ ನಾಟಕ ಎಂದು ತಾಯಿ ಮತ್ತು ಹೆಂಡತಿ ರಮೇಶ್ ವಿರುದ್ಧ ಮಾತಾಡುತ್ತಾರೆ. ಜೊತೆಗೆ ಮಾಡಿದ ತಪ್ಪಿಗೆ ಶಿಕ್ಷೆ ಆಗಬೇಕು. ನೀನು ಜೈಲಿಗೆ ಹೋಗಬೇಕು ಎಂದು ತಾಯಿ ಹೇಳುತ್ತಿರುವಾಗಲೇ ಪೊಲೀಸರ ಎಂಟ್ರಿಯಾಗುತ್ತದೆ. ರಮೇಶ್ ಪೊಲೀಸರ ಜೊತೆ ಹೋಗಲು ಒಪ್ಪುತ್ತಾನೆ. ಆಗ ಕರ್ಣ ಪೊಲೀಸರನ್ನು ತಡೆಯುತ್ತಾನೆ.

Sulekha

Leave a Reply

Your email address will not be published. Required fields are marked *