ಹಬ್ಬದ ಸಂಭ್ರಮದಲ್ಲಿ ಜನರ ಜೇಬಿಗೆ ಕತ್ತರಿ – ಗಗನಕ್ಕೇರಿದ ಹೂವು ಮತ್ತು ಹಣ್ಣುಗಳ ಬೆಲೆ

ಶ್ರಾವಣದ ಜೊತೆ ಸಾಲು ಸಾಲು ಹಬ್ಬಗಳು ಶುರುವಾಗುತ್ತಿದ್ದು, ಮಾರುಗಟ್ಟೆಗಳಲ್ಲಿ ವ್ಯಾಪಾರ ಜೋರಾಗಿದೆ. ಹಬ್ಬದ ಖುಷಿಯಲ್ಲಿರೋ ಜನಸಾಮಾನ್ಯರ ಜೇಬಿಗೆ ಕತ್ತರಿ ಕೂಡ ಬೀಳುತ್ತಿದೆ. ಹೂವು ಮತ್ತು ಹಣ್ಣುಗಳ ಬೆಲೆ ಹೆಚ್ಚಾಗಿದೆ.
ಪ್ರತಿ ಬಾರಿಯಂತೆ ಈ ವರ್ಷವೂ ಕನಕಾಂಬರ ಹೂವಿಗೆ ಅಕ್ಕಪಕ್ಕದ ಬಂಗಾರದಷ್ಟೇ ಬೆಲೆ ಬಂದಿದ್ದು, ಸಗಟು ದರದಲ್ಲಿ ಕೆ.ಜಿ.ಗೆ ಬರೋಬ್ಬರಿ 3,000 ರೂ. ಮುಟ್ಟಿದೆ. ಇನ್ನುಳಿದಂತೆ ಸಂಪಿಗೆ, ಗುಲಾಬಿ ಮತ್ತು ಸೇವಂತಿಗೆ ಹೂವುಗಳ ಬೆಲೆಯೂ ಕೆ.ಜಿ.ಗೆ 400 ರೂ. ಗಡಿ ದಾಟಿದೆ.
ಹಾಗಿದ್ರೆ ಯಾವ್ಯಾವ ಹೂವಿನ ಬೆಲೆ ಎಷ್ಟೆಷ್ಟು ಅನ್ನೋದ್ದನ್ನ ನೋಡೋಣ.
ಕನಕಾಂಬರ ಹೂವು : 3000 ರೂ. (KG)
ಸಂಪಿಗೆ ಹಾಗೂ ಸೇವಂತಿಗೆ: 400 ರೂ. (KG)
ಗುಲಾಬಿ: 360 – 400 ರೂ. (KG)
ಸಣ್ಣ ಡೇರಿ ಹೂವು: 600 ರೂ. (KG.)
ಬಿಳಿ ಸೇವಂತಿಗೆ ಹಾಗೂ ಕಣಿಗಲು: 300 ರೂ. (KG)
ಮಲ್ಲಿಗೆ ಹೂವು: 300 – 500 ರೂ. (KG)
ದೇವಿಯ ಪೂಜೆಗೆ ಅತ್ಯಗತ್ಯವಿರುವ ಹಣ್ಣುಗಳ ಬೆಲೆಯೂ ಹೆಚ್ಚಿದೆ.
ಏಲಕ್ಕಿ ಬಾಳೆ ಹಣ್ಣು – 100 ರಿಂದ 120 ( KG)
ದಾಳಿಂಬೆ: 200 ರೂ. (ಕೆ.ಜಿ.)
ಸೇಬು: 150 – 250 ರೂ. (ಕೆ.ಜಿ.)
ಮರಸೇಬು: 160 ರೂ. (ಕೆ.ಜಿ.)
ಮೂಸಂಬಿ: 60 – 70 ರೂ. (ಕೆ.ಜಿ.)

ನೋಡಿರಿ

