ಈ ಭಾರಿ ಅಂಬಾರಿ ಹೊರಲ್ಲ ಅಭಿಮನ್ಯು – ಕ್ಯಾಪ್ಟನ್ ಅಭಿಮನ್ಯುಗೆ ಆಗಿದ್ದೇನು?

ಈ ಭಾರಿ ಅಂಬಾರಿ ಹೊರಲ್ಲ ಅಭಿಮನ್ಯು –  ಕ್ಯಾಪ್ಟನ್ ಅಭಿಮನ್ಯುಗೆ ಆಗಿದ್ದೇನು?

ಮೈಸೂರಿನಲ್ಲಿಅಂಬಾರಿ ಹೊತ್ತು ಸಾಗುವ ಆನೆ ವಿಚಾರದಲ್ಲಿ ಈ ಸಲ ಮಹತ್ವದ ಬದಲಾವಣೆಯಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈಗಾಗಲೇ ಮುಹೂರ್ತ ನಿಗದಿ ಆಗಿದ್ದು, ದಿನಗಣನೆ ಶುರುವಾಗಿದೆ. ಮೈಸೂರು ದಸರಾ ಅಕ್ಟೋಬರ್​ 11ಕ್ಕೆ ಉದ್ಘಾಟನೆಗೊಳ್ಳಲಿದ್ದು, 21ರಂದು ಜಂಬೂಸವಾರಿ ನಡೆಯಲಿದೆ. ಆದರೆ ಈ ಬಾರಿ ಅಂಬಾರಿ ಹೊತ್ತು ಸಾಗುತ್ತ ಆನೆ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗಿದೆ.

ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಅಭಿಮನ್ಯುಗೆ 60 ವರ್ಷ ತುಂಬಿದ ಹಿನ್ನೆಲೆ ಅಂಬಾರಿ ಹೊತ್ತು ಸಾಗುತ್ತ ಹೊಣೆಗಾರಿಕೆಯಿಂದ ವಿಶ್ರಾಂತಿ ನೀಡಲಾಗಿದ್ದು, ಇದೀಗ ಅಂಬಾರಿ ಹೊರಲು ಹೊಸ ಆನೆಯ ಶೋಧಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಆಂಜನೇಯ ಸ್ವಾಮಿ ಕೃಪೆ ನಿಮ್ಮ ಮೇಲೆ ಇರಬೇಕಾ? – ಮಂಗಳವಾರ ಈ ಸಿಹಿಯನ್ನ ಹಂಚಿ

ಇನ್ನು ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಯ ಅಂತಿಮ ಪಟ್ಟಿಯನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಈ ಬಾರಿಯ ದಸರಾದಲ್ಲಿ ಒಟ್ಟು 12 ಆನೆಗಳು ಪಾಲ್ಗೊಳ್ಳುತ್ತಿದ್ದು, 2 ಆನೆಗಳನ್ನು ಕಾಯ್ದಿರಿಸಲಾಗಿದೆ.

ದುಬಾರೆ ಆನೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ. ಬಳ್ಳೆ ಆನೆ ಶಿಬಿರದಿಂದ ಮಹೇಂದ್ರ, ಲಕ್ಷ್ಮೀ. ಭೀಮನಕಟ್ಟೆಯಿಂದ ಏಕಲವ್ಯ. ದೊಡ್ಡ ಅರವೆ ಶಿಬಿರದಿಂದ ರೂಪ. ರಾಂಪುರ ಶಿಬಿರದಿಂದ ಚೈತ್ರ. ಮತ್ತಿಗೋಡು ಶಿಬಿರದಿಂದ ಶ್ರೀಕಂಠ ಆನೆಗಳನ್ನು ಫೈನಲ್ ಮಾಡಲಾಗಿದೆ.  ಮತ್ತಿಗೋಡು ಶಿಬಿರದ ಭೀಮಾ ಹಾಗೂ ದುಬಾರೆ ಆನೆ ಶಿಬಿರದ ಹರ್ಷ ಆನೆಗಳನ್ನು ಅರಣ್ಯ ಇಲಾಖೆ ಕಾಯ್ದಿರಿಸಿದೆ. ಇನ್ನು ಇದೆ ಮೊದಲ ಬಾರಿಗೆ ದಸರಾದಲ್ಲಿ ಹರ್ಷ, ಚೈತ್ರ, ರೂಪ, ಶ್ರೀರಾಮ ಎಂಬ ನಾಲ್ಕು ಆನೆಗಳು ಭಾಗಿಯಾಗುತ್ತಿವೆ.

Kishor KV

Leave a Reply

Your email address will not be published. Required fields are marked *