ಪ್ರಯೋಗ ಬಿಡಿ.. ಪರ್ಮನೆಂಟ್ ಮಾಡಿ – ದ್ರಾವಿಡ್ ಜಾಗಕ್ಕೆ ಮತ್ತೊಬ್ಬ ಕನ್ನಡಿಗ
ನಂ.3ಗೆ ವರವಾದ್ರಾ ದೇವದತ್?

ಪ್ರಯೋಗ ಬಿಡಿ.. ಪರ್ಮನೆಂಟ್ ಮಾಡಿ – ದ್ರಾವಿಡ್ ಜಾಗಕ್ಕೆ ಮತ್ತೊಬ್ಬ ಕನ್ನಡಿಗನಂ.3ಗೆ ವರವಾದ್ರಾ ದೇವದತ್?

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. 462 ರನ್​ಗಳ ಬಿಗ್ ಸ್ಕೋರ್ ಸೆಟ್ ಮಾಡಿದೆ. ಭಾರತದ ಈ ಬೃಹತ್ ಇನ್ನಿಂಗ್ಸ್​ನಲ್ಲಿ ದೇವದತ್ ಪಡಿಕ್ಕಲ್ ಅವ್ರ ಕೊಡುಗೆಯೇ ಜಾಸ್ತಿ. ಅವ್ರ ಅದ್ಭುತ ಶತಕದಿಂದಾಗಿಯೇ ಭಾರತ ಬ್ಯಾಟಿಂಗ್​ನಲ್ಲಿ ಮಿಂಚಿದ್ದು. ಪಡಿಕ್ಕಲ್​ರ ಇದೇ ಪ್ರದರ್ಶನ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದೆ. ಮಾಜಿ ಕ್ರಿಕೆಟರ್​ಗಳು ಧ್ವನಿ ಎತ್ತಿದ್ದಾರೆ. ಎರಡ್ಮೂರು ವರ್ಷಗಳ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಇದನ್ನೂ ಓದಿ : 10 ಟೀಂ ಫೈನಲ್.. 4 ಸ್ಥಾನಕ್ಕೆ ರೇಸ್ – ಅರ್ಹತಾ ಟೂರ್ನಿಯಲ್ಲೇ ICC ಮೋಸ

ಕ್ರಿಕೆಟ್​ನಲ್ಲಿ ನಂಬರ್ 3 ಸ್ಲಾಟ್​ ತುಂಬಾನೇ ಕ್ರೂಶಿಯಲ್. ಟೆಸ್ಟ್ ಫಾರ್ಮೆಟ್​​ನಲ್ಲಂತೂ ಬ್ಯಾಕ್​ಬೋನ್ ಆಫ್ ಬ್ಯಾಟಿಂಗ್ ಅಂತಾನೇ ಕರೆಯಲಾಗುತ್ತೆ. ಯಾಕಂದ್ರೆ ಟೆಸ್ಟ್ ಪಂದ್ಯದ ಗತಿಯನ್ನು ನಿರ್ಧರಿಸೋದೇ ಈ ಕ್ರಮಾಂಕ. 2023ರ ಜೂನ್‌ನಲ್ಲಿ ನಡೆದ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದವರೆಗೂ ಚೇತೇಶ್ವರ್ ಪೂಜಾರ ಅವರೇ ಭಾರತದ ಖಾಯಂ ನಂಬರ್ 3 ಬ್ಯಾಟರ್ ಆಗಿದ್ದರು. ಆ ಪಂದ್ಯದ ನಂತರ ಅವರು ಭಾರತ ತಂಡದಿಂದ ಹೊರಗುಳಿದ್ರು. ಅದಾದ್ಮೇಲೆ ಶುಭ್​ಮನ್ ಗಿಲ್ ಆ ಸ್ಲಾಟ್​ನಲ್ಲಿ ಬ್ಯಾಟಿಂಗ್ ಮಾಡ್ತಿದ್ರು. ಯಾವಾಗ ಕಿಂಗ್ ಕೊಹ್ಲಿ ಟೆಸ್ಟ್​ಗೆ ಗುಡ್ ಬೈ ಹೇಳಿದ್ರೋ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡ್ತಿದ್ದಾರೆ. ಸೋ 2025ರ  ಬಳಿಕ ಭಾರತದ ಪರ ನಂಬರ್ 3ನಲ್ಲಿ ಯಾವೊಬ್ಬ ಬ್ಯಾಟರ್ ಕೂಡ ಇಂಪ್ಯಾಕ್ಟ್ ಮಾಡಿಲ್ಲ. ಪಂದ್ಯದಿಂದ ಪಂದ್ಯಕ್ಕೆ ಪ್ರಯೋಗಗಳನ್ನ ಮಾಡ್ತಾ ಇದ್ರೂ ಪ್ರಯೋಜನ ಆಗಿಲ್ಲ.

ನಂಬರ್ 3ನಲ್ಲಿ ಪಡಿಕ್ಕಲ್ ಸ್ಲಾಟ್ ಫಿಕ್ಸ್ ಮಾಡುವಂತೆ ಒತ್ತಾಯ!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸಿರೀಸ್​ಗೆ ತಂಡದಲ್ಲಿ ಆಯ್ಕೆಯಾಗಿದ್ದ ದೇವದತ್ ಪಡಿಕ್ಕಲ್​​ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತೆ ಅನ್ನೋ ಗ್ಯಾರಂಟಿಯೇ ಇರಲಿಲ್ಲ. ಯಾಕಂದ್ರೆ ನಂಬರ್ 3ನಲ್ಲಿ ಸಾಯಿ ಸುದರ್ಶನ್ ಆಡ್ಬೇಕಿತ್ತು. ಆದ್ರೆ ಇಂಜುರಿ ಕಾರಣಕ್ಕೆ ಸುದರ್ಶನ್ ಇಡೀ ಸರಣಿಯಿಂದಲೇ ರೂಲ್ಡ್ ಔಟ್ ಆದ್ರು. ಹೀಗಾಗಿ ಆ ಸ್ಲಾಟ್​ನಲ್ಲಿ ದೇವದತ್​ ಪಡಿಕ್ಕಲ್​ಗೆ ಅವಕಾಶ ನೀಡಲಾಯ್ತು. ಸಿಕ್ಕಿರೋ ಅವಕಾಶವನ್ನ ಸಮರ್ಪಕವಾಗಿ ಬಳಸಿಕೊಂಡ ಪಡಿಕ್ಕಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ವಾರ್ಮ್ ಅಪ್ ಮ್ಯಾಚಲ್ಲಿ ಸೆಂಚುರಿ ಬಾರಿಸಿದ್ದ ಪಡಿಕ್ಕಲ್ ಅಧಿಕೃತ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೂ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 230 ಎಸೆತಗಳಲ್ಲಿ 167 ರನ್​ ಕಲೆ ಹಾಕಿದ್ರು. ಪಡಿಕ್ಕಲ್ ಅವ್ರ ಈ ಬಿಗ್ ಇನ್ನಿಂಗ್ಸ್​ನಿಂದಲೇ ಭಾರತ 462 ರನ್ಸ್ ಕಲೆ ಹಾಕೋಕೆ ಸಾಧ್ಯವಾಗಿದ್ದು. ಇದೇ ಕಾರಣಕ್ಕೆ ಪಡಿಕ್ಕಲ್​ರನ್ನೇ ಭಾರತ ಟೆಸ್ಟ್ ತಂಡದಲ್ಲಿ ನಂಬರ್ 3ನಲ್ಲಿ ಕಂಟಿನ್ಯೂ ಮಾಡುವಂತೆ ಮಾಜಿ ಕ್ರಿಕೆಟರ್ಸ್ ಒತ್ತಾಯ ಮಾಡಿದ್ದಾರೆ. ಆಕಾಶ್ ಚೋಪ್ರಾ, ಮೊಹಮ್ಮದ್ ಕೈಫ್, ಗವಾಸ್ಕರ್ ಸೇರಿದಂತೆ ಕೆಲ ಆಟಗಾರರು ಬೆನ್ನಿಗೆ ನಿಂತಿದ್ದಾರೆ. ಅಷ್ಟಕ್ಕೂ ಇಲ್ಲಿ ಪಡಿಕ್ಕಲ್​ ಪರವಾಗಿ ಇಷ್ಟು ದೊಡ್ಡ ಮಟ್ಟದ ಸಪೋರ್ಟ್ ಕೇಳಿ ಬರ್ತಾ ಇರೋದಕ್ಕೆ ಕಾರಣ ಕಳೆದ ಎರಡ್ಮೂರು ವರ್ಷಗಳಿಂದ ನಂಬರ್ 3ನಲ್ಲಿ ಭಾರತ ಮಾಡಿರೋ ಪ್ರಯೋಗ.. ಮತ್ತು ಪ್ರತೀ ಬಾರಿಯ ಫೇಲ್ಯೂರ್. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರತದ ಪರ ಟೆಸ್ಟ್ ಫಾರ್ಮೆಟ್​ನಲ್ಲಿ ನಂಬರ್ 3ನಲ್ಲಿ ಯಾರನ್ನೇ ಆಡಿಸಿದ್ರೂ ಬೆಸ್ಟ್ ರಿಸಲ್ಟ್ ಸಿಕ್ಕಿರಲಿಲ್ಲ.

ನಂಬರ್ 3ನಲ್ಲಿ ನಿಲ್ಲದ ಬ್ಯಾಟರ್ಸ್!

ನಂ.3ನಲ್ಲಿದ್ದ ಗಿಲ್ ಕೊಹ್ಲಿ ನಿವೃತ್ತಿ ಬಳಿಕ ನಂ.4ನಲ್ಲಿ ಬ್ಯಾಟಿಂಗ್

ಸಾಯಿ ಸುದರ್ಶನ್ 7 ಟೆಸ್ಟ್ ಪಂದ್ಯ, 383 ರನ್ಸ್, ಹೈಯೆಸ್ಟ್ 87 ರನ್ಸ್

ಕರುಣ್ ನಾಯರ್ 4 ಪಂದ್ಯಗಳಲ್ಲಿ 111 ರನ್ಸ್, ಹೈಯೆಸ್ಟ್ ರನ್ಸ್ 40

ವಾಷಿಂಗ್ಟನ್ ಸುಂದರ್, 2 ಇನ್ನಿಂಗ್ಸ್, 31 ರನ್ ಗಳಿಸಿದ್ದೇ ಹೈಯೆಸ್ಟ್

ಹೀಗೆ ಚೇತೇಶ್ವರ ಪೂಜಾರ ತಂಡದಿಂದ ಹೊರಗುಳಿದ ಬಳಿಕ ಬರೋಬ್ಬರಿ 7 ಬ್ಯಾಟರ್​ಸ್ ನಂಬರ್ 3ನಲ್ಲಿ ಬಂದು ಹೋಗಿದ್ದಾರೆ. ಆದ್ರೆ ಯಾರಿಂದಲೂ ಕೂಡ ಬೆಸ್ಟ್ ಪರ್ಫಾಮೆನ್ಸ್ ಬಂದಿಲ್ಲ. ಆದ್ರೀಗ ಶ್ರೀಲಂಕಾದಲ್ಲಿ ಶತಕ ಬಾರಿಸೋ ಮೂಲಕ ದೇವದತ್ ಪಡಿಕ್ಕಲ್ ಸ್ಟ್ರಾಂಗ್ ಮೆಸೇಜ್ ಪಾಸ್ ಮಾಡಿದ್ದಾರೆ. 167 ರನ್‌ಗಳ ಭರ್ಜರಿ ಶತಕ ಸಿಡಿಸಿ, ಕಳೆದ 6 ವರ್ಷಗಳಲ್ಲಿ ಭಾರತದ ಪರ ನಂಬರ್ 3 ರಲ್ಲಿ ಗರಿಷ್ಠ ಸ್ಕೋರ್ ಮಾಡಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಚೇತೇಶ್ವರ ಪೂಜಾರನಂಥ ದಿಗ್ಗಜರು ನಂಬರ್ 3ನಲ್ಲೇ ಭಾರತದ ಟೆಸ್ಟ್ ಕ್ರಿಕೆಟ್​​ನ ಬೆನ್ನೆಲುಬಾಗಿದ್ರು. ಅಷ್ಟೇ ಯಾಕೆ ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆಗಳಾದ ಡಾನ್ ಬ್ರಾಡ್ಮನ್, ರಿಕಿ ಪಾಂಟಿಂಗ್, ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ ಕೂಡ ನಂಬರ್ 3ನಲ್ಲೇ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ಗಳಾದವ್ರು. ಈಗ ಇದೇ ಕ್ರಮಾಂಕಕ್ಕೆ ಪಡಿಕ್ಕಲ್ ದಿ ಬೆಸ್ಟ್ ಚಾಯ್ಸ್ ಅನ್ನೋ ಥರ ಪರ್ಫಾಮ್ ಮಾಡಿದ್ದಾರೆ.

ನಂ.3 ಬ್ಯಾಟರ್ ಗಳೇ ಬೆನ್ನೆಲುಬು!

ಫಸ್ಟ್ ಓವರ್ ನಲ್ಲೇ ವಿಕೆಟ್ ಬಿದ್ರೆ ನಂ.3 ಆಟಗಾರ ಕ್ರೀಸ್ ಗೆ ಎಂಟ್ರಿ

ಓಪನರ್ ನಂತೆ ಹೊಸ ಚೆಂಡು, ಸ್ವಿಂಗ್ ಮತ್ತು ವೇಗಿಗಳ ತೀಕ್ಷ್ಣ ದಾಳಿ ಫೇಸ್

ಆರಂಭಿಕರು ಒಳ್ಳೆ ಸ್ಕೋರ್ ಸೆಟ್ ಮಾಡಿದ್ರೆ ಅದನ್ನು ಕಂಟಿನ್ಯೂ ಮಾಡಬೇಕು

4, 5ನೇ ಕ್ರಮಾಂಕದ ಬ್ಯಾಟರ್ ಗಳಿಗೆ ಹೊಸ ಚೆಂಡಿನಿಂದ ಸೇಫ್ ಮಾಡ್ಬೇಕು

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ವಿಕೆಟ್ ಬೀಳದಂತೆ ಕಾಯ್ದುಕೊಳ್ಳಬೇಕು

ಬ್ಯಾಟಿಂಗ್ ಯಾವಾಗ ಬೇಕಿದ್ರೂ ಬರಬಹುದೆಂದು ಮಾನಸಿಕವಾಗಿ ಸಿದ್ಧ

ಹೀಗೆ ಟೆಸ್ಟ್ ಕ್ರಿಕೆಟ್​ನಲ್ಲಿ ನಂಬರ್ 3 ಬ್ಯಾಟರ್ ಮೇಲೆ ತುಂಬಾನೇ ರೆಸ್ಪಾನ್ಸಿಬಿಲಿಟಿ ಇರುತ್ತೆ. ಟೆಸ್ಟ್ ತಂಡವೊಂದರ ಗೆಲುವು ಮತ್ತು ಸೋಲು ಬಹುಪಾಲು ಆ ತಂಡದ ನಂಬರ್ 3 ಬ್ಯಾಟರ್ ನೀಡುವ ಪ್ರದರ್ಶನದ ಮೇಲೆ ಡಿಪೆಂಡ್ ಆಗಿರುತ್ತೆ ಅಂದ್ರೂ ತಪ್ಪಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳು ಯಾವಾಗಲೂ ನಂಬರ್ 3ನಲ್ಲಿ ಬಲಿಷ್ಠ ಬ್ಯಾಟರ್‌ಗಳನ್ನೇ ಹೊಂದಿದ್ರು. ಆದ್ರೆ ಭಾರತದ ಪರ ಕಳೆದ ಮೂರು ವರ್ಷಗಳಿಂದ ಯಾರೊಬ್ಬರೂ ಸ್ಟ್ರಾಂಗ್ ಆಗಿ ನಿಂತಿಲ್ಲ. ಟೆಸ್ಟ್ ಮಾದರಿಯಲ್ಲಿ ಭಾರತದ ಹೀನಾಯ ಸೋಲುಗಳಿಗೆ ಇದು ಒಂದು ಕಾರಣವೇ. ಈಗ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡೋ ಮೂಲಕ ಮುಂದಿನ ದಿನಗಳಲ್ಲಿ ಪರ್ಮನೆಂಟ್ ಸ್ಲಾಟ್ ಕೊಡುವಂತೆ ಮೆಸೇಜ್ ಪಾಸ್ ಮಾಡಿದ್ದಾರೆ. ಆದ್ರೆ ಬಿಸಿಸಿಐ ಮತ್ತೆ ಸಾಯಿ ಸುದರ್ಶನ್​ಗೆ ಚಾನ್ಸ್ ಕೊಡ್ತಾರೋ ಅಥವಾ ಪಡಿಕ್ಕಲ್ ಗೆ ಅವಕಾಶ ಕೊಡ್ತಾರೋ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *