ಲಂಕೆಯಲ್ಲಿ ಗೆದ್ರೂ INDಗಿಲ್ಲ ರಿಲೀಫ್ – 9 ಮ್ಯಾಚ್.. ಟಾರ್ಗೆಟ್ ಗೆಲುವೆಷ್ಟು?
WTC ಫೈನಲ್ ಟಿಕೆಟ್ ಕಗ್ಗಂಟಾಯ್ತಾ?

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಶನಿವಾರದಿಂದಲೇ ಶುರುವಾಗಿದೆ. ಗಾಲೆಯಲ್ಲಿ ನಡೆಯುತ್ತಿರೋ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಅದ್ರಂತೆ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಒಂದೊಳ್ಳೆ ಸ್ಕೋರ್ ಸೆಟ್ ಮಾಡಿದೆ. ಸದ್ಯ ಇವತ್ತು ಮೂರನೇ ದಿನದಾಟ ಆರಂಭವಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ಭಾರತ ಈ ಪಂದ್ಯವನ್ನೂ ಗೆದ್ದು ಎರಡನೇ ಪಂದ್ಯವನ್ನ ಗೆದ್ರೂ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್ ಸಿಗೋದು ಕಷ್ಟ ಇದೆ.
ಇದನ್ನೂ ಓದಿ : ಪಂತ್ ₹12 ಕೋಟಿ.. ವೆಂಕಿ ₹16 ಕೋಟಿ – ಆಟ ಮರೆತ ದುಬಾರಿ ಸ್ಟಾರ್ಸ್ ದುಡ್ಡಿಗೆ ಕತ್ತರಿ
ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿ ಗೆದ್ದರೂ ಸಹ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪುವುದು ಭಾರತಕ್ಕೆ ಕಷ್ಟಕರವಾಗಿದೆ. ಸರಣಿಯನ್ನ ಗೆದ್ರೆ ಭಾರತದ ಮುಂದಿನ ಹಾದಿ ಸ್ವಲ್ಪ ಈಸಿಯಾಗಬಹುದು ಅನ್ನೋದನ್ನ ಬಿಟ್ರೆ ಫೈನಲ್ ಟಿಕೆಟ್ ಅಂತೂ ಕನ್ಫರ್ಮ್ ಆಗಲ್ಲ.
ಸರಣಿ ಗೆದ್ರೂ ತಪ್ಪದ ಸಂಕಷ್ಟ!
ಟೆಸ್ಟ್ ಅಂಕಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿರುವ ಟೀಂ ಇಂಡಿಯಾ
2025-27ರಲ್ಲಿ 9 ಪಂದ್ಯ, 4 ಗೆಲುವು, 4 ಸೋಲು, 1 ಡ್ರಾ.. 48.15% ಅಂಕ
ಲಂಕಾ ಕ್ಲೀನ್ ಸ್ವೀಪ್ ಮಾಡಿದ್ರೂ ಗೆದ್ರೂ 57.58% ಪರ್ಸಂಟೇಜ್ , 5ನೇ ಸ್ಥಾನ
ಶ್ರೀಲಂಕಾ ಸರಣಿ ಸೇರಿದಂತೆ ಭಾರತದ ಬಳಿ ಪ್ರಸ್ತುತ ಒಟ್ಟು 9 ಟೆಸ್ಟ್ ಪಂದ್ಯಗಳು ಬಾಕಿ
9 ಪಂದ್ಯಗಳಲ್ಲಿ ಭಾರತ ಕನಿಷ್ಠ 7 ರಿಂದ 8 ಪಂದ್ಯಗಳನ್ನು ಗೆಲ್ಲಲೇಬೇಕು
8 ಪಂದ್ಯ ಗೆದ್ದರೆ PCT 68.52% ಆಗಲಿದ್ದು, ಫೈನಲ್ ಸ್ಥಾನ ಬಹುತೇಕ ಖಚಿತ
7 ಪಂದ್ಯ ಗೆದ್ದರೆ PCT 62.96% ಆಗಲಿದ್ದು, ಇತರ ತಂಡಗಳ ಸೋಲು-ಗೆಲುವು
ಉಳಿದ ಪಂದ್ಯಗಳ ಪೈಕಿ 2 ಸೋತರೆ ಫೈನಲ್ ರೇಸ್ ನಿಂದ ಔಟ್ ಆಗಬಹುದು
ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಸದ್ಯ ಟಾಪ್ 3 ಸ್ಥಾನ
ಇನ್ನು ನಂಬರ್ 4ನಲ್ಲಿ ಬಾಂಗ್ಲಾದೇಶ ಇದೆ. ಹೀಗಾಗಿ ಶ್ರೀಲಂಕಾ ವಿರುದ್ಧ 2-0 ಇಂದ ಗೆದ್ದರೂ ಭಾರತದ ಫೈನಲ್ ಹಾದಿ ‘ಮಾಡು ಇಲ್ಲವೇ ಮಡಿ’ ಸ್ಥಿತಿಯಲ್ಲೇ ಇರಲಿದೆ. ಹೀಗಾಗಿ, ಶ್ರೀಲಂಕಾ ವಿರುದ್ಧದ ಸರಣಿ ಗೆಲುವು ಕೇವಲ ಮೊದಲ ಹೆಜ್ಜೆಯಷ್ಟೇ. ಅಸಲಿ ಸವಾಲು ಮುಂದಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಸರಣಿಗಳಲ್ಲಿರಲಿದೆ.

ನೋಡಿರಿ

