ಲಂಕೆಗೆ ಪಡಿಕ್ಕಲ್ ಸೆಂಚುರಿ ಬೆಂಕಿ – KL ಇಂಜುರಿ ಭಾರತಕ್ಕೆ ಶಾಪವಾಗುತ್ತಾ?
ಮೊದಲ ಟೆಸ್ಟ್.. ಮೊದಲ ದಿನ ಪಾಸ್

ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ ಶುರುವಾಗಿದೆ. ಗಾಲೆಯಲ್ಲಿ ನಡೀತಿರೋ ಮೊದಲನೇ ಪಂದ್ಯ ಭಾರತಕ್ಕೂ ತುಂಬಾನೇ ಸ್ಪೆಷಲ್. ಇದು ಟೀಂ ಇಂಡಿಯಾದ 600ನೇ ಟೆಸ್ಟ್ ಪಂದ್ಯ ಎಂಬ ಐತಿಹಾಸಿಕ ವಿಶೇಷ ದಿನವಾಗಲಿದೆ. ಹೀಗೆ ಸ್ಪೆಷಲ್ ಆಗಿ ಶುರುವಾದ ಈ ಮ್ಯಾಚಲ್ಲಿ ಫಸ್ಟ್ ಡೇ ಭಾರತ ಡಾಮಿನೇಷನ್ ಮಾಡಿದೆ. ಅದ್ರಲ್ಲೂ ನಮ್ಮ ಕನ್ನಡಿಗರ ಆಟ ಅಂತೂ ಸೂಪರ್.
ಇದನ್ನೂ ಓದಿ : ವೈಭವ್ ಆಟಕ್ಕೆ ಭಜ್ಜಿ ಬ್ರೇಕ್! – ಅಟ್ಯಾಕ್ ಮಾಡಿದ್ರೆ ವಿಕೆಟ್ ಬೀಳುತ್ತಾ?
ಶುಭ್ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಲಂಕಾದಹನದ ಟಾರ್ಗೆಟ್ನಲ್ಲಿ ಭಾರತ ಮೈದಾನಕ್ಕಿಳಿದಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಲಾಜಿಕ್ ಕೂಡ ಇಂಟ್ರೆಸ್ಟಿಂಗ್ ಆಗಿದೆ. ತಂಡದಲ್ಲಿ ನಾಲ್ವರು ಬ್ಯಾಟರ್ಗಳು, ಮೂವರು ವಿಕೆಟ್ ಕೀಪರ್ಗಳು, ಇಬ್ಬರು ಸ್ಪಿನ್ ಆಲ್ರೌಂಡರ್ಗಳ ಜೊತೆಗೆ ಒಬ್ಬ ಪ್ಯೂರ್ ಸ್ಪಿನ್ನರ್ ಹಾಗೂ ಇಬ್ಬರು ವೇಗಿಗಳಿದ್ದಾರೆ. ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ದ್ರುವ್ ಜುರೇಲ್ ತಂಡದಲ್ಲಿರುವ ವಿಕೆಟ್ ಕೀಪರ್ಗಳಾಗಿದ್ದು, ಇವರಲ್ಲಿ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರೆ, ಅವರಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಸಾಥ್ ನೀಡಲಿದ್ದಾರೆ.
ಫಸ್ಟ್ ಡೇ ಭಾರತ ಪಾಸ್!
ಟಾಸ್ ಗೆದ್ದ ನಾಯಕ ಶುಭ್ ಮನ್ ಗಿಲ್ ಫಸ್ಟ್ ಬ್ಯಾಟಿಂಗ್ ಆಯ್ಕೆ
ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭ
37 ಬಾಲಲ್ಲಿ 32 ರನ್ ಗಳಿಸಿ ರನ್ ಔಟ್ ಆದ ಯಶಸ್ವಿ ಜೈಸ್ವಾಲ್
ರಾಹುಲ್ ಮತ್ತು ಪಡಿಕ್ಕಲ್ ನಡುವೆ 150 ರನ್ಸ್ ಜೊತೆಯಾಟ
77(162)ರನ್ ಗಳಿಸಿ ರಾಹುಲ್ ಸ್ನಾಯು ಸೆಳೆತದಿಂದ ರಿಟೈರ್ಡ್ ಹರ್ಟ್
ನಂಬರ್ 3ನಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿ ಶತಕ ಸಿಡಿಸಿದ ಪಡಿಕ್ಕಲ್
ಟೆಸ್ಟ್ ಕ್ರಿಕೆಟ್ ಜೀವನದ 2ನೇ ಪಂದ್ಯದಲ್ಲೇ ಚೊಚ್ಚಲ ಅಂತರರಾಷ್ಟ್ರೀಯ ಶತಕ
3ನೇ ಸೆಷನ್ ಮುಕ್ತಾಯದ ಹತ್ತಿರದಲ್ಲಿ 16 ರನ್ ಗಳಿಸಿ ಗಿಲ್ ಔಟ್
ಹೀಗೆ ಮೊದಲನೇ ದಿನದಾಟದಲ್ಲಿ ಭಾರತದ ಪರ ಬ್ಯಾಟರ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇನ್ನು ಈ ಮ್ಯಾಚಲ್ಲಿ ಮತ್ತೊಂದು ಶಾಕಿಂಗ್ ಇನ್ಸಿಡೆಂಟ್ ನಡೆದಿದೆ. ಶ್ರೀಲಂಕಾ ತಂಡದ ಆರಂಭಿಕ ಬ್ಯಾಟರ್ ಮತ್ತು ಶಾರ್ಟ್-ಲೆಗ್ ಫೀಲ್ಡರ್ ಆಗಿ ಮೈದಾನದಲ್ಲಿ ನಿಂತಿದ್ದ ನಿಶಾನ್ ಮದುಷ್ಕ ಚೆಂಡು ಬಡಿದು ಗಾಯಗೊಂಡಿದ್ರು. ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರ ಓವರ್‌ನಲ್ಲಿ ಕೆಎಲ್ ರಾಹುಲ್ ಸ್ವೀಪ್ ಶಾಟ್ ಆಡಿದ್ರು. ಶಾರ್ಟ್-ಲೆಗ್‌ನಲ್ಲಿ ನಿಂತಿದ್ದ ನಿಶಾನ್ ಮದುಷ್ಕ ಬಾಲ್ ವೇಗವಾಗಿರೋದನ್ನ ಕಂಡು ತಲೆ ತಗ್ಗಿಸಿ ರಕ್ಷಿಸಿಕೊಳ್ಳೋಕೆ ಮುಂದಾಗಿದ್ರು. ಆಗ ಬಾಲ್ ಅವರ ಹೆಲ್ಮೆಟ್‌ನ ಮುಂಭಾಗಕ್ಕೆ ಬಡಿದಿತ್ತು. ಹೀಗಾಗಿ ಕೂಡ್ಲೇ ಮೈದಾನದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆ ನಂತ್ರ ಅವ್ರನ್ನ ಮೈದಾನದಿಂದ ಹೊರ ಕರೆದೊಯ್ಯಲಾಗಿದೆ. ಒಟ್ನಲ್ಲಿ ಫಸ್ಟ್ ಡೇ ಫಸ್ಟ್ ಬ್ಯಾಟಿಂಗ್ ಭಾರತಕ್ಕೆ ಪ್ಲಸ್ ಆಗಿದೆ.

ನೋಡಿರಿ

