ಜೀರ್ಣಕ್ರಿಯೆಗೆ ಬೆಸ್ಟ್‌ ಫ್ಲೆಕ್ಸ್ ಸೀಡ್ಸ್ ನೀರು ಕುಡಿಯಿರಿ! – ಯಾವಾಗ ಅಗಸೆ ಬೀಜದ ನೀರು ಸೇವಿಸಬೇಕು?

ಜೀರ್ಣಕ್ರಿಯೆಗೆ ಬೆಸ್ಟ್‌ ಫ್ಲೆಕ್ಸ್ ಸೀಡ್ಸ್ ನೀರು ಕುಡಿಯಿರಿ! – ಯಾವಾಗ ಅಗಸೆ ಬೀಜದ ನೀರು ಸೇವಿಸಬೇಕು?

ಈಗೀಗ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ತಿನ್ನೋ ಆಹಾರ, ಕುಡಿಯುವ ನೀರಿನ ಬಗ್ಗೆಯೂ ಯೋಚಿಸುವ ಕಾಲವಿದು. ಫಿಟ್‌ ಆಂಡ್‌ ಫೈನ್‌ ಆಗಿರ್ಬೇಕು ಅಂತ ಅನೇಕರು ನಾನಾ ಸರ್ಕಸ್‌ ಮಾಡ್ತಿದ್ದಾರೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ಕಾಫಿ, ಟೀ ಸೇವನೆ ಮಾಡ್ತಾರೆ. ಕಾಫಿ, ಟೀ ಬದಲಿಗೆ ಈ ಡ್ರಿಂಕ್ಸ್‌ ಕುಡಿದ್ರೆ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ.

ಇದನ್ನೂ ಓದಿ: ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ?  – ಇಲ್ಲಿದೆ ಸಿಂಪಲ್‌ ಟಿಪ್ಸ್!

ಇತ್ತೀಚೆಗೆ ಜನರು ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಸೀಡ್ಸ್‌ ಸೇವಿಸುತ್ತಾರೆ. ಅದ್ರಲ್ಲಿ ಫ್ಲೆಕ್ಸ್ ಸೀಡ್ಸ್ ಅಥವಾ ಅಗಸೆ ಬೀಜ ಕೂಡ ಒಂದು. ಫ್ಲೆಕ್ಸ್‌ ಸೀಡ್ಸ್‌ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಇದನ್ನು ನೆನೆಸಿದ ಅಥವಾ ಕುದಿಸಿದ ನೀರು ಲೋಳೆಯಂತೆ ಬರುತ್ತದೆ. ಅಗಸೆ ಬೀಜ ನೆನೆಸಿದ ಲೋಳೆಯಂತಹ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದ್ರೆ ಅದ್ಭುತ ಆರೋಗ್ಯ ಲಾಭಗಳಿವೆ.

ಜೀರ್ಣಕ್ರಿಯೆಗೆ ಉತ್ತಮ

ಇನ್ನು ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಅಗಸೆ ಬೀಜದ ನೀರು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರ ಜೊತೆಗೆ, ಈ ಬೀಜಗಳನ್ನು ಅಗಿಯುವುದರಿಂದ ಮಲಬದ್ಧತೆ ದೂರವಾಗುತ್ತೆ.

ಕೂದಲಿಗೆ ಒಳ್ಳೆಯದು

ಈ ನೀರಲ್ಲಿ ಇರುವ ವಿಟಮಿನ್ ಇ ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಕೂದಲಿನ ರಚನೆಯನ್ನು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

ಮಧುಮೇಹಿಗಳಿಗೆ ಲಾಭ

ಇದರಲ್ಲಿ ಫೈಬರ್ ಅಧಿಕವಾಗಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಸಣ್ಣಗಾಗಲು ಸಹಾಯಕ

ಈ ನೀರನ್ನು ಕುಡಿದ ನಂತರ, ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಹೊಂದುತ್ತೀರಿ. ಇದರೊಂದಿಗೆ, ನೀವು ಹೆಚ್ಚು ಕ್ಯಾಲೋರಿ-ಭರಿತ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸುತ್ತೀರಿ.

ತ್ವಚೆಗೆ ಒಳ್ಳೆಯದು

ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ಚರ್ಮವು ಮೃದುವಾಗಿ, ಆರೋಗ್ಯಕರವಾಗಿ ಹೊಳೆಯುತ್ತದೆ. ಮೊಡವೆಗಳಿಗೆ ಕಾರಣವಾದ ಆಂಡ್ರೊಜೆನ್ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತೆ.

Shwetha M