ಸೀರೆಯುಟ್ಟು ನದಿಗೆ ಪಲ್ಟಿ – ನೋಡಿ ಸ್ವಾಮಿ ಅಜ್ಜಿಯ ಜಂಪ್ ಹೇಗಿದೆ..!?
ಸೀರೆ ಅಂದರೆ ನಮ್ಮ ದೇಶದ ಸಂಪ್ರದಾಯ ಸಾರುವ ಉಡುಪು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲ ಹೆಣ್ಮಕ್ಕಳು ಸೀರೆ ಉಟ್ಟರೆ ನಡೆಯೋಕೂ ಕಷ್ಟ ಪಡ್ತಾರೆ. ಇನ್ನೂ ಕೆಲವರು ಸೀರೆ ಉಟ್ಟರೆ ಯಾವ ಕೆಲಸವನ್ನೂ ಮಾಡೋಕೆ ಆಗಲ್ಲಪ್ಪ ಅಂತಾ ಮೂಗು ಮುರೀತಾರೆ. ಆದ್ರೆ ಈ ಅಜ್ಜಿ ಸೀರೆಯುಟ್ಟು ಮಾಡಿರೋ ಸಾಹಸಕ್ಕೆ ನೆಟ್ಟಿಗರು ಹುಬ್ಬೇರಿಸಿಕೊಂಡು ನೋಡ್ತಿದ್ದಾರೆ.
ಇದನ್ನೂ ಓದಿ : ಕನ್ನಡ ಅಕ್ಷರಗಳ ಮೋಡಿಗೆ ಪ್ರಧಾನಿ ಮೆಚ್ಚುಗೆ – ಬಾದಲ್ ನಂಜುಂಡಸ್ವಾಮಿ ಕೈಚಳಕಕ್ಕೆ ಶಹಬ್ಬಾಸ್!
ವಯಸ್ಸು 50 ವರ್ಷ ದಾಟಿದ್ರೆ ಕೆಲವರಿಗೆ ನಡೆದಾಡೋಕೂ ಕಷ್ಟ. ಆದ್ರೆ ಈ ಅಜ್ಜಮ್ಮ ಮಾತ್ರ ಯಂಗ್ ಸ್ಟರ್ಸ್ ಕೂಡ ನಾಚುವಂತೆ ನದಿಗೆ ಡೈ ಹೊಡೆದಿದ್ದಾರೆ. ಅದೂ ಕೂಡ ಸೀರೆ ಉಟ್ಟುಕೊಂಡು ಅನ್ನೋದೇ ಮತ್ತೊಂದು ಸ್ಪೆಷಾಲಿಟಿ. ತಮಿಳುನಾಡಿನ ತಾಮಿರಬರಣಿ ನದಿಯಲ್ಲಿ ಮುಳುಗೆದ್ದರೆ ರೋಗರುಜಿನಗಳು ವಾಸಿಯಾಗುತ್ತವೆ ಅನ್ನೋ ನಂಬಿಕೆ ಇದೆ. ಹೀಗಾಗಿ ಬೇರೆ ಬೇರೆ ಭಾಗಗಳಿಂದ ಜನ ಈ ನದಿಗೆ ಬಂದು ಸ್ನಾನ ಮಾಡುತ್ತಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ನದಿಯೊಳಗೆ ಮುಳುಗು ಹಾಕುತ್ತಾ ಸ್ನಾನ ಮಾಡುತ್ತಿರುತ್ತಾರೆ. ಈ ವೇಳೆ ಸೀರೆಯುಟ್ಟ ಹಿರಿಯ ಮಹಿಳೆಯೊಬ್ಬರು ನದಿ ಪಕ್ಕದಲ್ಲಿ ಕಟ್ಟಿರುವ ಕಲ್ಲಿನ ಗೋಡೆ ಏರಿದ್ದಾರೆ. ಚೂರೇ ಚೂರು ಭಯ ಕೂಡ ಪಡದೆ ಸೀದಾ ನದಿಗೆ ಧುಮುಕಿದ್ದಾರೆ. ಮೊದಲಿಗೆ ಮೂಗು ಹಿಡಿದುಕೊಂಡು ನದಿಗೆ ಪಲ್ಟಿ ಹೊಡೆಯುವ ಅಜ್ಜಿ ಮತ್ತೆ ಮೇಲೆ ಬಂದು ಅದೇ ಜಾಗದಿಂದ ಕಾಲು ಹಿಡಿದುಕೊಂಡು ಜಂಪ್ ಮಾಡಿದ್ದಾರೆ. 20 ಸೆಕೆಂಡುಗಳ ಈ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಹಂಚಿಕೊಂಡಿದ್ದಾರೆ.
ಕಲ್ಲಿಡೈಕುರಿಚಿಯ ತಾಮಿರಬರಣಿ ನದಿಯಲ್ಲಿ ಹೀಗೆ ಈ ಹಿರಿಯ ಮಹಿಳೆ ಧುಮುಕಿದ್ದು ಎಲ್ಲರಿಗೂ ಅಚ್ಚರಿ ಹುಟ್ಟಿಸಿದೆ. ಈಗಾಗಲೇ ವಿಡಿಯೋವನ್ನ ಲಕ್ಷಾಂತರ ಜನ ನೋಡಿ ಕೆಲವರು ಕಮೆಂಟ್ ಕೂಡ ಮಾಡಿದ್ದಾರೆ. ವೃದ್ಧೆಯ ಸಾಹಸಕ್ಕೆ ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಕೆಲವರು ನದಿಗಳ ಸ್ವಚ್ಛತೆ ಬಗ್ಗೆಯೂ ಅರಿವು ಮೂಡಿಸಿದ್ದಾರೆ.
Awestruck to watch these sari clad senior women effortlessly diving in river Tamirabarni at Kallidaikurichi in Tamil Nadu.I am told they are adept at it as it is a regular affair.😱Absolutely inspiring 👏 video- credits unknown, forwarded by a friend #women #MondayMotivation pic.twitter.com/QfAqEFUf1G
— Supriya Sahu IAS (@supriyasahuias) February 6, 2023