ಶ್ರಾವಣದಲ್ಲಿ ಸಹಿ ಮಾಡೋ ಪ್ಲ್ಯಾನ ಇದ್ಯಾ – ಸಿಂಪಲ್ ಆಗಿರೋ ಈ ರವೆ ಉಂಡೆ ಒಮ್ಮೆ ಟ್ರೈ ಮಾಡಿ

ಇದು ಶ್ರಾವಣ ಮಾಸ. ಈಗ ಓನ್ಲಿ ವೆಜ್ ಮಾತ್ರ ಅಡುಗೆ. ಸಾಕಷ್ಟು ಜನಕ್ಕೆ ಏನಾದ್ರೂ ಸ್ವೀಟ್ ಮಾಡಬೇಕು ಅಂತ ಆಸೆ ಇರುತ್ತೆ. ಶ್ರಾವಣದಲ್ಲಿ ಸಿಂಪಲ್ ಆಗಿರೋ ರವೆ ಉಂಡೆ ಮಾಡಬಹುದು.
ನಾವು ಸುಲಭವಾಗಿ ಈ ಹಬ್ಬದ ಸಮಯದಲ್ಲಿ ಮಾಡಿ ಸವಿಯುವಂತಹ ರುಚಿ ರುಚಿಯಾದ ರವೆ ಉಂಡೆ ಕುರಿತಾಗಿ ತಿಳಿದುಕೊಳ್ಳೋಣ. ರವೆ ಉಂಡೆ ಮಾಡುವುದು ಬಹಳ ಸುಲಭ ಹಾಗೆ ಕಡಿಮೆ ವಸ್ತುಗಳ ಬಳಸಿಕೊಂಡು ಈ ರವೆ ಉಂಡೆ ಮಾಡಬಹುದು. ಅಲ್ಲದೆ ಎಲ್ಲಾ ತಿಂಡಿಗಳಿಗಿಂತ ಇದು ಬಹಳ ರುಚಿಕರ ಹಾಗೆ ಮಕ್ಕಳಿಗೂ ಇದು ಇಷ್ಟವಾಗುತ್ತೆ. ಅದ್ದನ್ನ ಹೇಗೆ ಮಾಡುವುದು ಅನ್ನೋದ್ದನ್ನ ತಿಳಿದುಕೊಳ್ಳೋಣ.
ರವೆ ಉಂಡೆ ಮಾಡಲು ಬೇಕಾಗುವ ವಸ್ತುಗಳು
ರವೆ
ಗೋಡಂಬಿ
ಒಣ ದ್ರಾಕ್ಷಿ
ತೆಂಗಿನಕಾಯಿ ಪುಡಿ
ಸಕ್ಕರೆ
ಏಲಕ್ಕಿ
ಹಾಲು
ತುಪ್ಪ
ರವೆ ಉಂಡೇ ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಒಂದು ಅಥವಾ ಒಂದೂವರೆ ಕಪ್ ರವೆ ಹಾಕಿ. ಗೋಡಂಬಿ, ದ್ರಾಕ್ಷಿ ಎತ್ತಿಟ್ಟುಕೊಳ್ಳುವ ಅಗತ್ಯವಿಲ್ಲ ಹಾಗೆಯೇ ಮಾಡಬಹುದು. ಈ ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. 5ರಿಂದ 6 ನಿಮಿಷಗಳ ಕಾಲ ಹುರಿದುಕೊಳ್ಳಬೇಕು.
ಈಗ ಇದಕ್ಕೆ ಅಂಗಡಿಯಲ್ಲಿ ಸಿಗುವ ಕೊಬ್ಬರಿ ತುರಿಯನ್ನು ಹಾಕಿಕೊಂಡು 1 ನಿಮಿಷ ಹುರಿದುಕೊಳ್ಳಿ. ತಂಗಿನಕಾಯಿ ತುರಿಯನ್ನು ಸಹ ಬಳಸಬಹುದು. ಒಂದು ನಿಮಿಷ ಹುರಿದ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಇನ್ನೊಂದು ಕಡೆ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ 1 ಕಪ್ ಸಕ್ಕರೆ ಏಲಕ್ಕಿ ಹಾಕಿಕೊಂಡು ಪುಡಿ ಮಾಡಿಕೊಳ್ಳಬೇಕು. ಈಗ ಈ ಪುಡಿಯನ್ನು ರವೆಯೊಂದಿಗೆ ಹಾಕಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಈಗ ಕಾಯಿಸಿಕೊಂಡಿದ್ದ ಹಾಲನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹಾಲು ಬಿಸಿ ಬಿಸಿ ಆಗಿರಲಿ. ನಂತರ ಕೈಯಿಂದ ರವೆಯನ್ನು ಉಂಡೆ ಕಟ್ಟಿಕೊಳ್ಳಿ. ನಿಧಾನವಾಗಿ ಉಂಡೆ ಕಟ್ಟಿ. ಹೆಚ್ಚು ಒತ್ತಿಕೊಂಡು ಉಂಡೆ ಕಟ್ಟಲು ಮುಂದಾಗಬೇಡಿ. ಈಗ ಉಂಡೆಯನ್ನು ತಟ್ಟೆಯಲ್ಲಿ ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಇದು ಗಟ್ಟಿಯಾಗುತ್ತೆ. ಇಷ್ಟಾದರೆ ಸವಿಯಲು ರವೆ ಉಂಡೆ ಸಿದ್ದವಾಗುತ್ತೆ .

ನೋಡಿರಿ

