10 ಟೀಂ ಫೈನಲ್.. 4 ಸ್ಥಾನಕ್ಕೆ ರೇಸ್ – ಅರ್ಹತಾ ಟೂರ್ನಿಯಲ್ಲೇ ICC ಮೋಸ
ವಿಶ್ವಕಪ್ ಗೆ 14-2=12 ತಂಡಗಳಷ್ಟೇ!

2027ರ ಐಸಿಸಿ ಏಕದಿನ ವಿಶ್ವಕಪ್ಗೆ ಆಲ್ರೆಡಿ 10 ಟೀಂ ಫೈನಲ್ ಆಗಿವೆ. ಇನ್ನು ಉಳಿದಿದ್ದು ನಾಲ್ಕು ಸ್ಥಾನಗಳು. ಅದಕ್ಕಾಗಿ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದ್ದು ಅಲ್ಲಿ ಉಳಿದಿರೋ ಟೀಮ್ಸ್ ಫೈನಲ್ ಆಗ್ತಾವೆ. 14ನೇ ಆವೃತ್ತಿಯ ಪುರುಷಕ ಏಕದಿನ ವಿಶ್ವಕಪ್ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಈ ಮೂರು ರಾಷ್ಟ್ರಗಳಲ್ಲಿ ನಡೆಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಕೇವಲ 10 ತಂಡಗಳು ಮಾತ್ರ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸಿದ್ವು. ಬಟ್ ಈ ಸಲ ಒಟ್ಟು 14 ತಂಡಗಳು ಭಾಗಿಯಾಗಲಿವೆ. ಈಗಾಗಲೇ 10 ಟೀಮ್ಸ್ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ : ಗುಜರಾತ್ ಗೂಡಿಗೆ ಪಾಂಡ್ಯ ವಾಪಸ್? – GT ಕ್ಯಾಪ್ಟನ್ಸಿ ಮತ್ತೆ ಕೈ ಸೇರುತ್ತಾ?
ಏಕದಿನ ವಿಶ್ವಕಪ್ ಟೂರ್ನಿಗೆ 10 ತಂಡಗಳು ಫೈನಲ್!
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳನ್ನ ಮೂರು ಮಾದರಿಗಳಲ್ಲಿ ಸೆಲೆಕ್ಟ್ ಮಾಡಲಾಗುತ್ತೆ. ಒಂದು ಟೂರ್ನಿ ಆಯೋಜನೆ ಮಾಡುವ ತಂಡಗಳು.. ಐಸಿಸಿ ಶ್ರೇಯಾಂಕದಲ್ಲಿ ಟಾಪ್ 8ನಲ್ಲಿರುವ ಟೀಮ್ಸ್ ಹಾಗೇ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸೆಲೆಕ್ಟ್ ಆದವ್ರು. ಸದ್ಯ ಟೂರ್ನಮೆಂಟ್ ಹೋಸ್ಟರ್ಗಳಾಗಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ. ಹಾಗೇ ಇತರೆ 8 ತಂಡಗಳು ಐಸಿಸಿ ಪುರುಷರ ಏಕದಿನ ಶ್ರೇಯಾಂಕದ ಆಧಾರದ ಮೇಲೆ ಸ್ಥಾನ ಪಡೆದಿವೆ.
ಈ ಲಿಸ್ಟ್ನಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಅದೇನಂದ್ರೆ ಸೌತ್ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳು ಆತಿಥ್ಯ ವಹಿಸ್ತಾ ಇರೋದ್ರಿಂದ ನೇರವಾಗಿ ಟೂರ್ನಮೆಂಟ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ ನಮೀಬಿಯಾಗೆ ಈ ಚಾನ್ಸ್ ಇಲ್ಲ. ಅವ್ರೂ ಕೂಡ ಟೂರ್ನಮೆಂಟ್ ಆತಿಥ್ಯ ವಹಿಸಿದ್ದಾರೆ ಅವ್ರು ಯಾಕೆ ಡೈರೆಕ್ಟ್ ಆಗಿ ಸೆಲೆಕ್ಟ್ ಆಗಿಲ್ಲ ಅನ್ನಿಸ್ಬೋದು. ಅಲ್ಲೇ ಇರೋದು ಟ್ವಿಸ್ಟ್. ಯಾಕಂದ್ರೆ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳು ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರಗಳು. ಮತ್ತು ಅದಕ್ಕಾಗಿಯೇ ಪೂರ್ಣ ಸದಸ್ಯ ಆತಿಥೇಯ ರಾಷ್ಟ್ರಗಳು ನಿಯಮಗಳ ಅಡಿಯಲ್ಲಿ ಸ್ವಯಂಚಾಲಿತ ಅರ್ಹತೆಯನ್ನು ಪಡೆಯುತ್ತವೆ. ಸದ್ಯ ಐಸಿಸಿ ಪ್ರಸ್ತುತ 12 ಪೂರ್ಣ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಈ ದೇಶಗಳು ಮಾತ್ರನೇ ಟೆಸ್ಟ್ ಪಂದ್ಯಗಳನ್ನು ಆಡಲು ಅಧಿಕೃತ ಅರ್ಹತೆ ಪಡೆದಿವೆ ಮತ್ತು ಐಸಿಸಿಯ ಪೂರ್ಣ ಮತದಾನದ ಹಕ್ಕನ್ನು ಹೊಂದಿವೆ. ಇವ್ರಿಗೆ ಮಾತ್ರವೇ ಐಸಿಸಿ ಟೂರ್ನಮೆಂಟ್ಗಳನ್ನ ಆಯೋಜನೆ ಮಾಡಿದಾಗ ನೇರ ಅರ್ಹತೆ ಪಡೆಯುತ್ತವೆ. ಆದ್ರೆ ನಮೀಬಿಯಾ ಐಸಿಸಿಯ ಅಸೋಸಿಯೇಟ್ ಸದಸ್ಯ. ಪೂರ್ಣ ಸದಸ್ಯತ್ವವನ್ನ ಹೊಂದಿಲ್ಲದ ಕಾರಣ ಟೂರ್ನಿ ಆಯೋಜಿಸಿದ್ರೂ ಅರ್ಹತಾ ಸುತ್ತಿನಲ್ಲಿ ಸೆಲೆಕ್ಟ್ ಆಗ್ಬೇಕಾಗಿದೆ. 2027ರ ಫೆಬ್ರವರಿ 22 ರಿಂದ ಮಾರ್ಚ್ 23ರವರೆಗೆ ವಿಶ್ವಟೂರ್ನಿಗೆ ಅರ್ಹತಾ ಪಂದ್ಯಗಳು ನಡೆಯಲಿವೆ. ಉಳಿದಿರೋ ನಾಲ್ಕು ಸ್ಥಾನಗಳಿಗಾಗಿ ಒಟ್ಟು 10 ತಂಡಗಳ ನಡುವೆ ಫೈಟ್ ನಡೆಯಲಿದ್ದು ಇಲ್ಲಿ ಮತ್ತೆ ನಾಲ್ಕು ತಂಡಗಳನ್ನ ಕ್ವಾಲಿಫೈ ಮಾಡಲಾಗುತ್ತೆ. ವೆಸ್ಟ್ ಇಂಡೀಸ್ ಕೂಡ ಟಾಪ್-10ನಿಂದ ಹೊರಗಿರೋ ಕಾರಣಕ್ಕೆ ಅವ್ರೂ ಕೂಡ ಅರ್ಹತಾ ಸುತ್ತಿನ ಪಂದ್ಯಗಳನ್ನ ಗೆದ್ದೇ ಟೂರ್ನಿಗೆ ಕಾಲಿಡಬೇಕಾಗಿದೆ. ಆದ್ರೆ ಐಸಿಸಿ ಇಲ್ಲೂ ಕೂಡ ಹೊಸ ನಿಯಮ ಮಾಡೋ ಮೂಲಕ ಟ್ವಿಸ್ಟ್ ಕೊಟ್ಟಿದೆ.
ಹೆಸರಿಗಷ್ಟೇ 14 ಟೀಂ.. 13, 14ನೇ ತಂಡಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ!
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಕೊನೆ ಹಂತದಲ್ಲಿ ಐಸಿಸಿ ಬದಲಾವಣೆ ತಂದಿದೆ. ಈ ಸಲ 14 ತಂಡಗಳಿಗೆ ಟೂರ್ನಿ ವಿಸ್ತರಣೆ ಮಾಡ್ತೀವಿ ಅಂದವ್ರು ಕೊನೆಯ ಎರಡು ಸ್ಥಾನಗಳನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿಟ್ಟಿದ್ದಾರೆ.
ಕೊನೇ 2 ತಂಡಗಳಿಗೆ ಅನ್ಯಾಯ?
ಅರ್ಹತಾ ಟೂರ್ನಿಯಲ್ಲಿ ಟಾಪ್-4 ಪೈಕಿ ನಂ.1 ಇದ್ದವರು ನೇರವಾಗಿ ಆಯ್ಕೆ
2, 3 ಮತ್ತು 4 ನೇ ಸ್ಥಾನ ಪಡೆಯುವ ತಂಡಗಳಿಗೆ ಮತ್ತೆ ಸೂಪರ್ ಸೀರೀಸ್
ತ್ರಿಕೋನ ಸಿರೀಸ್ ನಲ್ಲಿ ಗೆಲ್ಲುವ ಕೇವಲ 1 ತಂಡಕ್ಕೆ ಮುಖ್ಯ ವಿಶ್ವಕಪ್ ಅರ್ಹತೆ
ಉಳಿದ 2 ತಂಡಗಳು 2 ಪಂದ್ಯಗಳನ್ನಾಗಿ ಅಧಿಕೃತ ವಿಶ್ವಕಪ್ ಗೂ ಮೊದಲೇ ಔಟ್
13 ಮತ್ತು 14ನೇ ಸ್ಥಾನದಲ್ಲಿರುವ ತಂಡಗಳು ವಿಶ್ವಕಪ್ ಆರಂಭದಲ್ಲೇ ಔಟ್
ಲೀಗ್ ಹಂತದ ಮುಖ್ಯ ಭೂಮಿಕೆಯಲ್ಲಿ ಕೇವಲ 12 ತಂಡಗಳು ಮಾತ್ರ ಚಾನ್ಸ್
ಐಸಿಸಿಯ ಇದೇ ನಿರ್ಧಾರದಿಂದ ಅಸೋಸಿಯೇಟ್ ರಾಷ್ಟ್ರಗಳು ಸಿಟ್ಟಾಗಿವೆ. ಪೂರ್ಣ ಸದಸ್ಯದ ರಾಷ್ಟ್ರಗಳ ರಕ್ಷಣೆಗಾಗಿ ಸಣ್ಣಪುಟ್ಟ ತಂಡಗಳಿಗೆ ಮೋಸ ಮಾಡ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಯಾಕಂದ್ರೆ ಟೂರ್ನಿಯಲ್ಲಿ ಟೋಟಲ್ 14 ತಂಡಗಳು ಭಾಗವಹಿಸುತ್ತವೆ ಎಂದಾಗ ಕೊನೇ ಎರಡು ತಂಡಗಳಿಗೆ ಲೀಗ್ಗೂ ಮೊದಲೇ ಟೂರ್ನಿಯಿಂದ ಹೊರ ಹಾಕುವಂಥ ನಿಯಮವೇ ಚರ್ಚೆಗೆ ಗ್ರಾಸವಾಗಿದೆ.

ನೋಡಿರಿ

