ಪಂತ್ ₹12 ಕೋಟಿ.. ವೆಂಕಿ ₹16 ಕೋಟಿ – ಆಟ ಮರೆತ ದುಬಾರಿ ಸ್ಟಾರ್ಸ್ ದುಡ್ಡಿಗೆ ಕತ್ತರಿ
1 ಸೀಸನ್.. IPLನಲ್ಲಿ ಜಾರಿ ಬಿದ್ದವರೆಷ್ಟು?

ಪಂತ್ ₹12 ಕೋಟಿ.. ವೆಂಕಿ ₹16 ಕೋಟಿ – ಆಟ ಮರೆತ ದುಬಾರಿ ಸ್ಟಾರ್ಸ್ ದುಡ್ಡಿಗೆ ಕತ್ತರಿ1 ಸೀಸನ್.. IPLನಲ್ಲಿ ಜಾರಿ ಬಿದ್ದವರೆಷ್ಟು?

ಕ್ರಿಕೆಟ್​ನಲ್ಲಿ ಟ್ಯಾಲೆಂಟ್ ಇತ್ತು ಅಂದ್ರೆ ರಾತ್ರೋರಾತ್ರಿ ಕೋಟ್ಯಾಧೀಶ್ವರರಾಗಿ ಬಿಡ್ಬೋದು. ಐಪಿಎಲ್​ನಲ್ಲಂತೂ ಕೈತುಂಬಾ ಹಣ. ಆದ್ರೆ ಒಂದು ಸೀಸನ್​ನಲ್ಲಿ ಎಡವಿದ್ರೂ ಕೂಡ ಕೆರಿಯರ್​ಗೇ ಹೊಡೆತ ಬೀಳುತ್ತೆ. ಹಣನೂ ಕಳ್ಕೊಳ್ಬೇಕಾಗುತ್ತೆ.

ಇದನ್ನೂ ಓದಿ : INDO-PAK ಪಂದ್ಯಕ್ಕೆ ಬ್ರೇಕ್ – FINAL ಟಿಕೆಟ್ ಪಡೆದ್ರಷ್ಟೇ ಚಾನ್ಸ್

2026ರ ಐಪಿಎಲ್​ನಲ್ಲೂ ಸಾಕಷ್ಟು ಆಟಗಾರರು ದುಬಾರಿ ಸಂಭಾವನೆ ಪಡೆದಿದ್ದಾರೆ. ಹೀಗೆ ಹೈಯೆಸ್ಟ್ ಪೇಮೆಂಟ್ ಇದ್ರೂ ಆನ್​ಫೀಲ್ಡ್​ನಲ್ಲಿ ಕೆಲವರು ಸಪ್ಪೆ ಅನಿಸಿದ್ದಾರೆ. ಈ ಪೈಕಿ ಒಂದಷ್ಟು ಆಟಗಾರರು ಮುಂದಿನ ಆವೃತ್ತಿಗೂ ಮುನ್ನ ಮಿನಿ ಹರಾಜಿಗೆ ಬರೋದು ಪಕ್ಕಾ. ಕ್ಯಾಮರೋನ್ ಗ್ರೀನ್, ನಿಕೋಲಸ್ ಪೂರನ್, ಲಿಯಾಮ್ ಲಿವಿಂಗ್ ಸ್ಟೋನ್, ಮತೀಶ ಪತಿರಾಣಾ ರಿಲೀಸ್ ಲಿಸ್ಟ್​ನಲ್ಲಿ ಇದ್ದಾರೆ. ಆದ್ರೆ ಇವರ್ಯಾರಿಗೂ ಈಗಿರೋ ಸಂಭಾವನೆ ನೆಕ್ಸ್​ಟ್ ಸಿಗೋದು ಕಷ್ಟ.. ಯಾಕಂದ್ರೆ ಪರ್ಫಾಮೆನ್ಸ್ ಇಲ್ಲ ಅಂತಾನೇ ಇವ್ರಿಗೆಲ್ಲಾ ಗೇಟ್​ಪಾಸ್ ಸಿಗೋದ್ರಿಂದ ಹೆಚ್ಚಿನ ಮೊತ್ತ ಕೊಡೋಕೆ ಬೇರೆ ಫ್ರಾಂಚೈಸಿಗಳು ರೆಡಿ ಇರಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಆಟಗಾರರು.

  1. ರಿಷಭ್ ಪಂತ್ : 2025ರ ಐಪಿಎಲ್​ಗೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದೇ ರಿಷಭ್ ಪಂತ್.  ಲಕ್ನೋ ಸೂಪರ್ ಜೈಂಟ್ಸ್ ತಂಡ ಬರೋಬ್ಬರಿ 27 ಕೋಟಿ ನೀಡಿ ಖರೀದಿ ಮಾಡಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಕಾಸ್ಟ್ಲಿಯೆಸ್ಟ್ ಬಿಡ್ಡಿಂಗ್. ಆದ್ರೆ 2027ರ ಐಪಿಎಲ್​ಗೂ ಮುನ್ನ ಲಕ್ನೋದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಟ್ರೇಡ್ ಡೀಲ್ ಆಗಿದ್ದಾರೆ. ದೆಹಲಿ ತಂಡ ಪಂತ್​ಗೆ 15 ಕೋಟಿ ರೂಪಾಯಿಗೆ ಮಾತ್ರ ಡೀಲ್ ಫೈನಲ್ ಮಾಡಿಕೊಂಡಿರೋದ್ರಿಂದ ಪಂತ್ 12 ಕೋಟಿ ರೂಪಾಯಿ ಕಳೆದುಕೊಳ್ಳಲಿದ್ದಾರೆ.
  2. ವೆಂಕಟೇಶ್ ಅಯ್ಯರ್ :  ಆರ್​ಸಿಬಿ ಪ್ಲೇಯರ್ ವೆಂಕಟೇಶ್ ಅಯ್ಯರ್ ರದ್ದೂ ಇದೇ ಕಥೆ. 2025ರಲ್ಲಿ ಇವ್ರೂ ಕೂಡ ಕೆಕೆಆರ್ ತಂಡಕ್ಕೆ ಬರೋಬ್ಬರಿ 23.75 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ಸೇರ್ಪಡೆಯಾಗಿದ್ರು. ಆದ್ರೆ ಕಳೆದ ವರ್ಷ ನಡೆದ ಮಿನಿ ಆಕ್ಷನ್​ನಲ್ಲಿ ಆರ್​ಸಿಬಿ ಇವ್ರನ್ನ 7 ಕೋಟಿ ರೂಪಾಯಿ ಖರೀದಿ ಮಾಡಿದೆ. ಹೀಗಾಗಿ ವೆಂಕಿ ಒಂದೇ ಸೀಸನ್ ಅಂತರದಲ್ಲಿ ಬರೋಬ್ಬರಿ 16.75 ಕೋಟಿ ರೂಪಾಯಿ ಕಳೆದುಕೊಳ್ಳಬೇಕಾಯ್ತು.
  3. ಸ್ಯಾಮ್ ಕರ್ರನ್ : ಐಪಿಎಲ್ ಹಿಸ್ಟರಿ ಕೆದಕಿದ್ರೆ ಸ್ಯಾಮ್ ಕರ್ರನ್​ದೂ ಇದೇ ಥರ ಆಗಿದೆ. 2025ರ ಐಪಿಎಲ್​ಗೂ ಮುನ್ನ ಇಂಗ್ಲೆಂಡ್ ಮೂಲದ ಈ ಆಲ್‌ರೌಂಡರ್ ಸಂಬಳ 18.5 ಕೋಟಿ ಇತ್ತು. ಆದ್ರೆ ಚೆನ್ನೈ ತಂಡ 2.4 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಇದ್ರಿಂದಾಗಿ 16.1 ಕೋಟಿ ಸಂಭಾವನೆ ಕಡಿತವಾಗಿತ್ತು.
  4. ಕೈಲ್ ಜೇಮಿಸನ್ : ಐಪಿಎಲ್ 2023 ಕ್ಕೂ ಮೊದಲು ಆರ್‌ಸಿಬಿಯಲ್ಲಿ 15 ಕೋಟಿ ರೂಪಾಯಿ ಪಡೀತಿದ್ರು. ಆ ನಂತ್ರದಲ್ಲಿ ಅವ್ರಿಗೆ ಸಿಎಸ್​ಕೆ ತಂಡ 1 ಕೋಟಿ ನೀಡಿ ಖರೀದಿ ಮಾಡಿತ್ತು. ಹೀಗಾಗಿ ನ್ಯೂಜಿಲೆಂಡ್ ಮೂಲದ ಈ ಆಲ್‌ರೌಂಡರ್ 14 ಕೋಟಿ ರೂ. ಕಳೆದುಕೊಂಡರು.
  5. ಮಿಚೆಲ್ ಸ್ಟಾರ್ಕ್ :  ಕೆಕೆಆರ್‌ನಲ್ಲಿ 24.75 ಕೋಟಿ ರೂಪಾಯಿ ಪಡೀತಿದ್ದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ 11.75 ಕೋಟಿ ರೂಪಾಯಿಗೆ ಜಾಯ್ನ್ ಆದ್ರು. ಇದ್ರಿಂದಾಗಿ ಒಂದೇ ಸೀಸನ್​ನಲ್ಲಿ 13 ಕೋಟಿ ರೂಪಾಯಿ ಕಟ್ ಆಫ್ ಆಯ್ತು.
  6. ಜೇ ರಿಚರ್ಡ್ಸನ್ : ಆಸ್ಟ್ರೇಲಿಯಾದ ಮತ್ತೊಬ್ಬ ವೇಗಿ ಜೇ ರಿಚರ್ಡ್ಸನ್ ಪಂಜಾಬ್ ಕಿಂಗ್ಸ್‌ನಲ್ಲಿ 14 ಕೋಟಿ ರೂಪಾಯಿ ಪಡೀತಿದ್ದವ್ರು 1.5 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಸೇರಿದ ನಂತರ 12.5 ಕೋಟಿ ರೂ.ಗಳನ್ನು ಕಳೆದುಕೊಂಡರು.

ಹೀಗೆ ಸ್ಟಾರ್ ಆಟಗಾರರೇ ಒಂದೆರಡು ಫೇಲ್ಯೂರ್​ಗೆ ಕೋಟಿ ಕೋಟಿ ಲಾಸ್ ಮಾಡಿಕೊಂಡಿದ್ದಾರೆ. ಆದ್ರೆ ಪರ್ಫಾಮೆನ್ಸ್ ಚೆನ್ನಾಗಿದ್ದಾಗ ಸಂಭಾವನೆ ಮ್ಯಾಟ್ರ್ ಆಗಲ್ಲ. ಬಟ್ ಫೇಲ್ಯೂರ್ ಆದಾಗ ಎಲ್ಲವೂ ಕಟ್ ಆಫ್ ಆಗುತ್ತೆ ಅಷ್ಟೇ.

Shantha Kumari

Leave a Reply

Your email address will not be published. Required fields are marked *